Maharashtra Mandir Mahasangha : ದೇವಸ್ಥಾನಗಳ ಮೂಲಕ ಧರ್ಮಪ್ರಚಾರ ಮಾಡಲು ಶಿರ್ಡಿಯ ಮಂದಿರ ನ್ಯಾಸ ರಾಜ್ಯ ಪರಿಷತ್ತಿನಿಂದ ನೂರಾರು ಟ್ರಸ್ಟಿಗಳ ನಿರ್ಧಾರ !

  • ೧೦೮ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ಹಾಗೂ ೯೮ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿ !

  • ‘ದೇವಸ್ಥಾನಗಳಲ್ಲಿ ಸಾಮೂಹಿಕ ಆರತಿ’ ಈ ಯೋಜನೆ ನಡೆಸುವರು

ಎಡದಿಂದ ಸದ್ಗುರು ಸ್ವಾತಿ ಖಾಡ್ಯೆ, ಪೂ. ಆದಿನಾಥ ಶಾಸ್ತ್ರಿ, ಮಹಂತ ದೇವರಾವ ಬಾಬಾ, ಮಹಂತ ಪೂ. ಶಂಕರ ಮಹಾರಾಜ, ಪ. ಪೂ. ಪಪ್ಪಾಜಿ ಪುರಾಣಿಕ ಮಹಾರಾಜ

ಶಿರ್ಡಿ, ಡಿಸೆಂಬರ್ ೨೫ (ವಾರ್ತೆ) – ಸಮಾಜಕ್ಕೆ ಆಧ್ಯಾತ್ಮಿಕ ಶಕ್ತಿ ನೀಡುವ ದೇವಸ್ಥಾನಗಳು ಇನ್ನು ಮುಂದೆ ಧರ್ಮಶಿಕ್ಷಣದ ಕೇಂದ್ರಗಳನ್ನಾಗಿ ಮಾಡುಲು ಶಿರ್ಡಿಯ ಮಂದಿರ ನ್ಯಾಸ ರಾಜ್ಯ ಪರಿಷತ್ತಿನಿಂದ ದೇವಸ್ಥಾನದ ನೂರಾರು ಟ್ರಸ್ಟಿಗಳು ಒಮ್ಮತದಿಂದ ನಿರ್ಧಾರ ಮಾಡಿದರು. ಇದಕ್ಕಾಗಿ ದೇವಸ್ಥಾನಗಳಲ್ಲಿ ಧರ್ಮಪ್ರಚಾರದ ವಿವಿಧ ಉಪಕ್ರಮಗಳು ನಡೆಸಲು ಟ್ರಸ್ಟಿಗಳು ನಿರ್ಧರಿಸಿದ್ದಾರೆ. ೧೦೮ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ಫಲಕ ಹಾಕುವರು ಹಾಗೂ ೯೮ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು ಟ್ರಸ್ಟಿಗಳು ನಿರ್ಣಯಿಸಿದ್ದಾರೆ. ಶಿರ್ಡಿಯಲ್ಲಿ ‘ಮಹಾರಾಷ್ಟ್ರ ಮಂದಿರನ್ಯಾಸ ರಾಜ್ಯ ಪರಿಷತ್’ನಲ್ಲಿ ಈ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ. ದೇವಸ್ಥಾನ ಮಹಾಸಂಘದ ವತಿಯಿಂದ ಈ ಮಾಹಿತಿ ನೀಡಲಾಯಿತು. ಈ ಸಮಯದಲ್ಲಿ ದೇವಸ್ಥಾನದ ಟ್ರಸ್ಟಿ, ಪದಾಧಿಕಾರಿಗಳ ಸೇರಿ ೮೭೫ ಕ್ಕಿಂತಲೂ ಹೆಚ್ಚಿನ ಜನರು ಸಹಭಾಗಿಯಾಗಿದ್ದರು. ಡಿಸೆಂಬರ್ ೨೫ ರಂದು ಮಂದಿರನ್ಯಾಸ ಪರಿಷತ್ತು ಮುಕ್ತಾಯವಾಯಿತು.
ರಾಷ್ಟ್ರ ಮತ್ತು ಧರ್ಮದ ಮೇಲೆ ಆಘಾತವಾದರೆ ರಾಜ್ಯದಲ್ಲಿನ ೪೯ ಸ್ಥಳಗಳಲ್ಲಿ ತಕ್ಷಣ ಪ್ರತಿಭಟನೆ ನಡೆಸಲು ದೇವಸ್ಥಾನ ಟ್ರಸ್ಟಿಗಳು ನಿರ್ಧರಿಸಿದ್ದಾರೆ. ೫ ದೇವಸ್ಥಾನಗಳಲ್ಲಿ ಬಾಲಸಂಸ್ಕಾರ ವರ್ಗ ಆರಂಭಿಸಲು ಕೂಡ ಟ್ರಸ್ಟಿಗಳು ನಿರ್ಧರಿಸಿದ್ದಾರೆ. ಹಿಂದೂ ಧರ್ಮ ಮತ್ತು ರಾಷ್ಟ್ರದ ಮೇಲಿನ ವಿವಿಧ ಆಘಾತದ ಬಗ್ಗೆ ಹಿಂದುಗಳನ್ನು ಜಾಗರೂಕಗೊಳಿಸಲು ಮತ್ತು ಅದರ ವಿರುದ್ಧ ತ್ವರಿತ ಸಂಘಟಿತರಾಗಬೇಕು, ಅದಕ್ಕಾಗಿ ‘ದೇವಸ್ಥಾನಗಳಲ್ಲಿ ಸಾಮೂಹಿಕ ಆರತಿ’ ಈ ಪರಿಕಲ್ಪನೆಯನ್ನು ರಾಜ್ಯಾದ್ಯಂತ ನಡೆಸಲು ಮಹತ್ವಪೂರ್ಣ ನಿರ್ಣಯ ಶಿರ್ಡಿಯ ಮಹಾರಾಷ್ಟ್ರ ಮಂದಿರನ್ಯಾಸ ರಾಜ್ಯ ಪರಿಷತ್ತಿನ ಟ್ರಷ್ಟಿಗಳು ತೆಗೆದುಕೊಂಡಿದ್ದಾರೆ. ‘ಮಂದಿರ ಪರಿಷತ್ತಿನಿಂದ ನಮ್ಮ ಪ್ರದೇಶಕ್ಕೆ ಹಿಂತಿರುಗಿದ ನಂತರ ಇದಕ್ಕಾಗಿ ಪ್ರಯತ್ನ ಮಾಡುವೆವು’, ಎಂದು ಉಪಸ್ಥಿತರು ಹೇಳಿದರು.

ಕೊಲ್ಲಾಪುರದಲ್ಲಿನ ೧ ಸಾವಿರ ದೇವಸ್ಥಾನದ ಟ್ರಸ್ಟಿಗಳನ್ನು ಕಾರ್ಯಕ್ಕೆ ಜೋಡಿಸುವರು !

ಮಹಾರಾಷ್ಟ್ರ ದೇವಸ್ಥಾನ ಮಹಾಸಂಘದ ಜೊತೆಗೆ ಜೋಡಿಸಿರುವ ಕೊಲ್ಲಾಪುರದಲ್ಲಿನ ೧ ಸಾವಿರ ದೇವಸ್ಥಾನದ ಟ್ರಸ್ಟಿಗಳನ್ನು ಸಂಪರ್ಕಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಸಮಯ ಮಿತಿ ನಿರ್ಧರಿಸಿ ಸಂಪರ್ಕ ಮಾಡಲಾಗುವುದು. ಟ್ರಸ್ಟಿಗಳನ್ನು ಸಂಪರ್ಕಿಸಿ ಅವರಿಗೆ ದೇವಸ್ಥಾನದ ರಕ್ಷಣೆ ಮತ್ತು ಸಂವರ್ಧನೆಯ ಕಾರ್ಯದಲ್ಲಿ ಸಹಭಾಗಿಯಾಗಲು ಕರೆ ನೀಡಲಾಗುವುದು.

ರಾಜಕಾರಣದಲ್ಲಿ ಭೇದ ಭಾವ ಇದ್ದರೂ ಧರ್ಮ ರಕ್ಷಣೆಗಾಗಿ ಹಿಂದೂಗಳಲ್ಲಿ ಒಗ್ಗಟ್ಟು ಇರಬೇಕು ! – ಪೂ. ಸುದರ್ಶನ್ ಮಹಾರಾಜ ಕಪಾಟೇ, ಮಹಾರಾಷ್ಟ್ರ ರಾಜ್ಯ ಉಪಾಧ್ಯಕ್ಷ, ‘ಗ್ಲೋಬಲ್ ಮಹಾನುಭಾವ ಸಂಘ’

ಪೂ. ಸುದರ್ಶನ್ ಮಹಾರಾಜ ಕಪಾಟೇ

೧. ಅತಿಕ್ರಮಣ ಮಾಡುವಾಗ ಹಿಂದೂಯೇತರರು ಹುತ್ತ ಕಟ್ಟುವ ಗೆದ್ದಲಿನ ಹಾಗೆ ಒಟ್ಟಾಗಿ ಸೇರುತ್ತಾರೆ. ಹಿಂದುಗಳು ಮಾತ್ರ ಜಾತಿಗಳಲ್ಲಿ ಮತ್ತು ರಾಜಕೀಯ ಪಕ್ಷಗಳಲ್ಲಿ ವಿಭಜನೆಯ ಆಗಿರುತ್ತಾರೆ. ರಾಜಕಾರಣದಲ್ಲಿ ಮತ ಭೇದ ಇರಬಹುದು, ಆದರೆ ಧರ್ಮರಕ್ಷಣೆಗಾಗಿ ಹಿಂದೂಗಳಲ್ಲಿ ಒಗ್ಗಟ್ಟು ಇರಬೇಕು.
೨. ‘ದೇವಸ್ಥಾನ ರಕ್ಷಣೆಗಾಗಿ ಏನು ಮಾಡಬಹುದು ?’, ಇದರ ಬಗ್ಗೆ ಪ್ರತಿಯೊಬ್ಬ ಹಿಂದೂ ವಿಚಾರ ಮಾಡಬೇಕು. ಮುಸಲ್ಮಾನರು ಎಲ್ಲಿ ಅಲ್ಪಸಂಖ್ಯಾತರಿರುತ್ತಾರೆ, ಆಗ ಅವರು ಜಾತ್ಯತೀತ ಇರುವ ಹಾಗೆ ವರ್ತಿಸುತ್ತಾರೆ; ಆದರೆ ಬಹುಸಂಖ್ಯಾತರಾದ ನಂತರ ಅವರು ಇತರ ಧರ್ಮದವರನ್ನು ಮತಾಂತರಗೊಳಿಸಿ ಅವರ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸುತ್ತಾರೆ.
೩. ದೇವಸ್ಥಾನ ಎಂದರೆ ಎಲ್ಲಿ ಭಗವಂತನ ವಾಸವಿರುವಂತಹ ಸ್ಥಳವಾಗಿದೆ. ದೇವಸ್ಥಾನದಲ್ಲಿ ಮೂರ್ತಿಯ ಸ್ಥಾಪನೆ ಮಾಡುವ ಮೊದಲು ಹಿಂದೂ ಧರ್ಮದಲ್ಲಿ ಅಲ್ಲಿ ದೇವತೆಯ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇತರ ಯಾವುದೇ ಪಂಥದಲ್ಲಿ ಅವರ ಪ್ರಾರ್ಥನಾ ಸ್ಥಳದಲ್ಲಿ ಭಗವಂತನ ಅಧಿಷ್ಠಾನ ಇರುವ ಪರಿಕಲ್ಪನೆ ಇಲ್ಲ.
೪. ಮಹಾಭಾರತದಲ್ಲಿ ಭಗವಂತ ಶ್ರೀ ಕೃಷ್ಣ ಸ್ವತಃ ಅವತಾರವಾಗಿದ್ದರು ಕೂಡ ಮಹಾಭಾರತದಲ್ಲಿ ಅವನು ಶಸ್ತ್ರ ಕೈಗೆತ್ತಿಕೊಳ್ಳಲಿಲ್ಲ, ಬದಲಾಗಿ ಅರ್ಜುನನಿಗೆ ಶಸ್ತ್ರ ಎತ್ತಿ ಕೊಳ್ಳಲು ಪ್ರೇರೇಪಿಸಿದನು. ಹಿಂದುಗಳು ಕೂಡ ಧರ್ಮದ ಬಗ್ಗೆ ಜಾಗೃತವಾಗಬೇಕು, ಅದಕ್ಕಾಗಿ ಈ ಆಘಾತಗಳು ಇವೆ. ಹಿಂದುಗಳು ಒಗ್ಗಟ್ಟಾದರೆ ಈ ಆಘಾತಗಳಿಗೆ ಪ್ರತ್ಯುತ್ತರ ನೀಡಬಹುದು.
೫. ಕೇವಲ ಹಿಂದೂಯೆತರರು ಅಷ್ಟೇ ಅಲ್ಲದೆ ‘ಸೆಕ್ಯುಲರಿಸಂ’ (ಜಾತ್ಯತೀತತೆ) ವಿಚಾರಧಾರೆಯನ್ನು ಅನುಸರಿಸುವ ಪ್ರತಿಯೊಬ್ಬನಿಂದ ಹಿಂದೂ ಧರ್ಮಕ್ಕೆ ಅಪಾಯವಿದೆ. ‘ಸೆಕ್ಯುಲರಿಸಂ’ ಹೆಸರಿನಲ್ಲಿ ಅವರು ಹಿಂದೂಗಳ ಪ್ರಾರ್ಥನಾ ಸ್ಥಳದ ಮಹತ್ವ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಾರೆ.
೬. ಹಿಂದುಗಳು ಒಟ್ಟಾಗಿ ಸೇರಿದರೆ ಹಿಂದೂಗಳು ರಾಜಕೀಯವಾಗಿ ಅಷ್ಟೇ ಅಲ್ಲದೆ, ಸನಾತನ ಧರ್ಮದ ಬಗ್ಗೆ ಚರ್ಚೆ ನಡೆಸುವುದು ಆವಶ್ಯಕವಾಗಿದೆ. ದೇವಸ್ಥಾನದ ರಕ್ಷಣೆಗಾಗಿ ಮಂದಿರ-ನ್ಯಾಸ ಪರಿಷತ್ ಕಾರ್ಯ ನಡೆಸುತ್ತಿದೆ; ಆದರೆ ಈ ಕಾರ್ಯಕ್ಕೆ ಪ್ರತಿಯೊಬ್ಬ ಧರ್ಮಾಭಿಮಾನಿ ಹಿಂದೂ ಕೊಡುಗೆ ನೀಡಬೇಕು.’ ಎಂದು ಹೇಳಿದರು.

ಮಾಧ್ಯಮಗಳನ್ನು ಸಂವೇದನಾಶೀಲರನ್ನಾಗಿಸುವುದು ಆವಶ್ಯಕ ! – ಶ್ರೀಮತಿ ಸರಿತಾ ಕೌಶಿಕ, ಸಂಪಾದಕಿ, ‘ಎಬಿಪಿ ಮಾಝಾ’ ಸುದ್ದಿ ವಾಹಿನಿ

1. ಪ್ರಸಾರ ಮಾಧ್ಯಮ ಎಂದರೇನು ? ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸುದ್ದಿಪತ್ರಿಕೆ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮಗಳು ಇವು ಪ್ರಸಾರ ಮಾಧ್ಯಮಗಳಾಗಿವೆ; ಆದರೆ ಇದೆಲ್ಲವೂ ಬದಲಾಗುತ್ತಿದೆ. ಆದ್ದರಿಂದ, ಈ ಬದಲಾವಣೆಯನ್ನು ನಿರಂತರವಾಗಿ ಅವಲೋಕಿಸಬೇಕು.
2. ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಳ್ಳುವುದು ಅಗತ್ಯವಾದ್ದರಿಂದ ಸುದ್ದಿಯ ಸ್ವರೂಪವೂ ಪ್ರತಿಯೊಂದು ಪ್ರಸಾರ ಮಾಧ್ಯಮಕ್ಕೆ ತಕ್ಕಂತೆ ಬದಲಾಗಬೇಕು.
3. ಸುದ್ದಿಪತ್ರಿಕೆಗೆ ಲಿಖಿತ ರೂಪದಲ್ಲಿ ಪೂರಕ ಮಾಹಿತಿಯ ಅಗತ್ಯವಿರುತ್ತದೆ, ಆದರೆ ದೂರದರ್ಶನಕ್ಕೆ ದೃಶ್ಯ ಮಾಹಿತಿಯ ಅಗತ್ಯವಿರುತ್ತದೆ. ಸಮಾರಂಭಗಳು, ಸಂಭ್ರಮ, ಜನಸಂದಣಿ ಇವುಗಳಿಗೆ ದೂರದರ್ಶನದಲ್ಲಿ ಪ್ರಮುಖ ಸ್ಥಾನ ಸಿಗಬಹುದು. ಡಿಜಿಟಲ್ ಮಾಧ್ಯಮವು ಇವೆರಡರ ಮಿಶ್ರಣವಾಗಿರುವುದರಿಂದ ಅಂತಹ ಪದ್ಧತಿಯ ಮಾಹಿತಿಯನ್ನು ನೀಡಬೇಕು.
4. ಸಾಮಾನ್ಯ ಜನರಿಗೆ ರಾಜಕೀಯ, ಸಾಮಾಜಿಕಗಳಲ್ಲಿ ಹೆಚ್ಚು ಆಸಕ್ತಿಯಿರುತ್ತದೆ. ಇದರಿಂದ ಪ್ರಸಾರ ಮಾಧ್ಯಮದವರ ಗಮನವೂ ಅತ್ತಕಡೆಗೆ ಹೆಚ್ಚು ಇರುತ್ತದೆ. ತಮ್ಮ ಉಪಕ್ರಮಗಳಿಗಾಗಿ ಅಥವಾ ಕಾರ್ಯಕ್ರಮಗಳಿಗಾಗಿ ಪ್ರಸಾರ ಮಾಧ್ಯಮಗಳ ಗಮನ ಸೆಳೆದುಕೊಳ್ಳಲು ಪೂರ್ವನಿಯೋಜನೆ ಹೊಂದಿರುವುದು ಆವಶ್ಯಕವಾಗಿದೆ.
5. ಪ್ರತಿಯೊಂದು ಸಂಸ್ಥೆಯು ಪ್ರಸಾರ ಪ್ರತಿನಿಧಿಯನ್ನು ಹೊಂದಿರುವುದು ಆವಶ್ಯಕವಾಗಿದೆ. ಇದರಿಂದ ಅವರು ಪ್ರಸಾರ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಮಾಧ್ಯಮಗಳಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸುವುದು ಆವಶ್ಯಕವಾಗಿದ್ದು, ಅವರನ್ನು ಸಂವೇದನಾಶೀಲರನ್ನಾಗಿಸುವುದು ಮಹತ್ವದ್ದಾಗಿದೆ.
6. ಸುದ್ದಿಯನ್ನು ಕಳುಹಿಸುವಾಗ, ಅದು ಆಕರ್ಷಕವಾಗಿರಬೇಕು. ಸುದ್ದಿಯ ಮಹತ್ವ ನೋಡುಗರಿಗೆ ಅರ್ಥವಾಗುವಂತಿರಬೇಕು. ಇದರೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲೂ ಸಕ್ರಿಯವಾಗಿರುವುದು ಆವಶ್ಯಕವಾಗಿದೆ. ಇದರಿಂದ ಪ್ರಸಾರಮಾಧ್ಯಮಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಉಪಕ್ರಮದ ಸುದ್ದಿಯನ್ನು ತಕ್ಷಣ ನೀಡಬೇಕು.

ದೇವಸ್ಥಾನದ ಸದಸ್ಯತ್ವ ನೋಂದಣಿ ಹಾಗೂ ದೇವಸ್ಥಾನ ಮಹಾಸಂಘದ ‘ಸೋಶಿಯಲ್ ಮೀಡಿಯಾ ಸೆಲ್‘ ಆರಂಭ !

ಮಂದಿರ ಪರಿಷತ್ತಿನ, ಮರುದಿನ ಮೊದಲ ಅಧಿವೇಶನದಲ್ಲಿ ಮಂದಿರ ಮಹಾಸಂಘದ ಸದಸ್ಯರ ನೋಂದಣಿಯನ್ನು ಪ್ರಾರಂಭಿಸಲಾಯಿತು. ಹಾಗೆಯೇ ಮಂದಿರ ಮಹಾಸಂಘದ ‘ಫೇಸ್ಬುಕ್ ಪೇಜ’, ‘ಇನ್ಸ್ಟಾಗ್ರಾಮ್’ ಮತ್ತು ‘ಎಕ್ಸ್’ ಖಾತೆಗಳ ಪ್ರಾರಂಭವನ್ನು ಸನಾತನ ಸಂಸ್ಥೆಯ ಧರ್ಮಪ್ರಸಾರಕಿ ಸದ್ಗುರು ಸ್ವಾತಿ ಖಾಡ್ಯೆ ಅವರು ಪ್ರಾರಂಭಿಸಿದರು. ತಾರಕೇಶ್ವರ ಕೋಟೆಯ ಮಠಾಧಿಪತಿ ಪೂ. ಆದಿನಾಥ ಶಾಸ್ತ್ರಿ, ಅಚಲಪುರದ ಮಲ್ಲಾರದಲ್ಲಿರುವ ಶ್ರೀ ಧರಮಾಳ ಸಂಸ್ಥಾನದ ಮಹಂತ ದೇವರಾವಬಾಬಾ, ಸಂಜೀವನಿ ಕೋಟೆಯ ಮಹಂತ ಪೂ. ಶಂಕರ ಮಹಾರಾಜ, ಪುಣೆಯ ‘ಓಂ ಜೈ ಶಂಕರ್ ಆಧ್ಯಾತ್ಮಿಕ ಪ್ರತಿಷ್ಠಾನ’ ಮಠದ ಪ.ಪೂ. ಪಪ್ಪಾಜಿ ಪುರಾಣಿಕ ಮಹಾರಾಜರ ವಂದನೀಯ ಉಪಸ್ಥಿತಿಯಲ್ಲಿ ಮಾಡಲಾಯಿತು. ಇದಕ್ಕಾಗಿ, ಒಂದು ‘ಕ್ಯೂಆರ್ ಕೋಡ್’ (ತ್ವರಿತ ಪ್ರತಿಕ್ರಿಯೆ ಕೋಡ್ – ಮಾಹಿತಿಯನ್ನು ರಕ್ಷಿಸಲು ಸಾಂಕೇತಿಕ ಸಂಖ್ಯೆ) ಒದಗಿಸಲಾಗಿದ್ದು, ಅದರ ಮೂಲಕ ನೇರ ನೋಂದಣಿಯ ಸೌಲಭ್ಯವನ್ನು ಲಭ್ಯಗೊಳಿಸಲಾಗಿದೆ. ಇದರೊಂದಿಗೆ ‘ಸನಾತನ ಪಂಚಾಂಗ 2025’ ಆಂಡ್ರಾಯ್ಡ್ ಮತ್ತು ಐ.ಓ.ಎಸ್. (iOS) ಅಪ್ಲಿಕೇಶನ್ ಅನ್ನು ಉದ್ಘಾಟಿಸಲಾಯಿತು.