ಪ್ರೇಯಸಿಯರನ್ನು ಅದಲುಬದಲು ಮಾಡುವ ಗ್ಯಾಂಗ್ ಕುರಿತು ಅಪರಾಧ ವಿಭಾಗದಿಂದ ಬಯಲು: ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು – ಕೇಂದ್ರ ಅಪರಾಧ ವಿಭಾಗದ ಪೊಲೀಸರು ಪ್ರೇಯಸಿಯರನ್ನು ಅದಲುಬದಲು ಮಾಡಿಕೊಳ್ಳುವ ಗ್ಯಾಂಗ್‌ನ ಕೃತ್ಯವನ್ನು ಬಯಲಿಗೆಳೆದಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ಬಳಿಕ ಇಡೀ ಘಟನೆ ಬೆಳಕಿಗೆ ಬಂದಿದೆ. “ಈ ವಿಕೃತ ಆಟದಲ್ಲಿ ನನ್ನನ್ನು ಬಲವಂತವಾಗಿ ಸೇರ್ಪಡೆ ಮಾಡಿಕೊಂಡರು. ನಾನು ಇತರ ವ್ಯಕ್ತಿಗಳೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಲು ನಿರಾಕರಿಸಿದ ನಂತರ, ನನ್ನ ಕೆಲವು ಅಶ್ಲೀಲ ಚಿತ್ರಗಳನ್ನು ತೋರಿಸಿ ನನಗೆ ಬೆದರಿಕೆ ಹಾಕಲಾಯಿತು,” ಎಂದು ಮಹಿಳೆ ಹೇಳಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

1. ದೂರುದಾರ ಯುವತಿಯು ಮಾತನಾಡಿ, “ನನ್ನ ಸ್ನೇಹಿತನು ನನ್ನನ್ನು ಅವನೊಂದಿಗೆ ಮತ್ತು ಅವನ ಸ್ನೇಹಿತರೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಒತ್ತಾಯಿಸಿದ್ದನು.” ಈ ದೂರಿನ ನಂತರ ಕೇಂದ್ರ ಅಪರಾಧ ವಿಭಾಗವು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತು‌. ಪೊಲೀಸರು ಈ ಗ್ಯಾಂಗ್‌ನಿಂದ ಮಹಿಳೆಯರ ಅನೇಕ ಆಕ್ಷೇಪಾರ್ಹ ಫೋಟೋಗಳು ಮತ್ತು ವೀಡಿಯೊಗಳನ್ನು ವಶಪಡಿಸಿಕೊಂಡಿದ್ದಾರೆ.

2. ಪೊಲೀಸ್ ಅಧಿಕಾರಿ ಮಾತನಾಡಿ, ಆರೋಪಿಗಳು ಬೆಂಗಳೂರಿನ ಹೊರವಲಯದಲ್ಲಿ ‘ವಾಟ್ಸಾಪ್ ಗ್ರೂಪ್‌’ಗಳ ಮೂಲಕ ‘ಪಾರ್ಟಿ’ಗಳನ್ನು ಆಯೋಜಿಸುತ್ತಿದ್ದರು. ಈ ‘ಪಾರ್ಟಿ’ಗಳಿಂದ ಜೋಡಿಗಳು ತಮ್ಮ ಜೊತೆಗಾರರನ್ನು ವಿನಿಮಯ ಮಾಡಿಕೊಳ್ಳಲು ಬಲವಂತಪಡಿಸಲಾಗುತ್ತಿತ್ತು’. ಎಂದು ಹೇಳಿದರು.

3. ಈ ಪ್ರಕರಣದಲ್ಲಿ ಹರೀಶ್ ಮತ್ತು ಹೇಮಂತ್ ಇಬ್ಬರನ್ನೂ ಬಂಧಿಸಲಾಗಿದೆ. ಪೋಲೀಸರು ಅವರನ್ನು ಕ್ರಿಮಿನಲ್‌ ಅಪರಾಧಿ ಎಂದು ಘೋಷಿಸಿದ್ದಾರೆ. ಇವರಿಬ್ಬರೂ ಈ ಹಿಂದೆ ಇಂತಹ ಅಪರಾಧಗಳಲ್ಲಿ ಭಾಗಿಯಾಗಿದ್ದರು. ಈ ಆರೋಪಿಗಳು ಈ ಹಿಂದೆಯೂ ಹಲವು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ’, ಎಂದು ಪೊಲೀಸರು ತಿಳಿಸಿದ್ದಾರೆ.

ಜೊತೆಗಾರರ ವಿನಿಮಯ ಎಂದರೇನು?

ಇತ್ತೀಚಿನ ದಿನಗಳಲ್ಲಿ, ದೊಡ್ಡ ನಗರಗಳಲ್ಲಿ ಸಂಗಾತಿಯನ್ನು ಅದಲುಬದಲು ಮಾಡಲು ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ. ಪ್ರೇಮಿಗಳು ಇದರಲ್ಲಿ ಭಾಗಿಯಾಗಿದ್ದರು. ಅದರಲ್ಲಿ, ಈ ಪ್ರೇಮಿಗಳು ಸ್ವಇಚ್ಛೆಯಿಂದ ಪರಸ್ಪರ ಜೊತೆಗಾರರನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ಅವರೊಂದಿಗೆ ದೈಹಿಕ ಸಂಬಂಧವನ್ನು ಹೊಂದುತ್ತಾರೆ. ಇತ್ತೀಚೆಗೆ ವಿವಾಹಿತ ಯುವಕ ಯುವತಿಯರಲ್ಲಿಯೂ ಇಂತಹ ಪ್ರಕರಣಗಳು ಕಂಡುಬರುತ್ತಿದೆ. ಇಂತಹ ಕೃತ್ಯಗಳು ಸ್ವಯಂಪ್ರೇರಿತವಾಗಿದ್ದರೂ, ಹೆಚ್ಚಿನ ಸಮಯ ಯುವತಿಯರು ಒತ್ತಡದಲ್ಲಿಯೂ ಸಹ ಇತರರೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಅನಿವಾರ್ಯ ಗೊಳಿಸಲಾಗುತ್ತದೆ.

ಸಂಪಾದಕೀಯ ನಿಲುವು

ಸಮಾಜದ ನೈತಿಕತೆ ಎಷ್ಟರಮಟ್ಟಿಗೆ ಕುಸಿದಿದೆ ಎಂಬುದು ಈ ಪ್ರಕರಣದಿಂದ ತಿಳಿಯುತ್ತದೆ. ಇಂತಹ ಪ್ರಕರಣವನ್ನು ತಡೆಯಲು ಮತ್ತು ಸಮಾಜವನ್ನು ನೈತಿಕವಾಗಿಸಲು ಸಾಧನೆ ಮಾಡುವುದು ಅಗತ್ಯವಿದೆ !