ಟ್ವಿಟರ್ ಭಾರತದ ನಕಾಶೆಯಿಂದ ಜಮ್ಮು-ಕಾಶ್ಮೀರವನ್ನು ಹಾಗೂ ಲಡಾಖ್ ಅನ್ನು ಬೇರ್ಪಡಿಸಿದೆ !

ವಿದೇಶಿ ಸಾಮಾಜಿಕ ಮಾಧ್ಯಮವಾಗಿರುವ ಟ್ವಿಟರ್ ನ ಹೆಚ್ಚುತ್ತಿರುವ ಉದ್ಧಟತನವನ್ನು ತಡೆಯಲು ಈಗ ಭಾರತವು ಅದರ ಮೇಲೆ ನಿಷೇಧವನ್ನು ಹೇರಲೇ ಬೇಕು !

ನವ ದೆಹಲಿ – ಟ್ವಿಟರ್ ನ ‘ಟ್ವೀಟ್ ಲೈಫ್’ ಈ ‘ಕರಿಯರ್’ ಸಂಬಂಧಿಸಿದ ಪ್ರದೇಶದಲ್ಲಿ ತೋರಿಸಲಾದ ಪ್ರದೇಶದ ಜಗತ್ತಿನ ನಕಾಶೆಯಲ್ಲಿರುವ ಭಾರತದ ನಕಾಶೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಈ ಪ್ರದೇಶವನ್ನು ತೋರಿಸಲಿಲ್ಲ. ತದನಂತರ ಸಾಮಾಜಿಕ ಮಾಧ್ಯಮದಿಂದ ಇದಕ್ಕೆ ವಿರೋಧ ವ್ಯಕ್ತವಾಗತೊಡಗಿತು. ಟ್ವಿಟರ್ ಈ ಹಿಂದೆಯೂ ಇದೇ ರೀತಿಯ ಕೃತ್ಯವನ್ನು ಮಾಡಿತ್ತು ಮತ್ತು ಅದನ್ನೂ ವಿರೋಧಿಸಲಾಗಿತ್ತು. ಈ ಹಿಂದೆ ಟ್ವಿಟರ್ ಲೇಹ್‍ದ ಭೌಗೋಳಿಕ ಸ್ಥಳವನ್ನು ತೋರಿಸುವಾಗ ಜಮ್ಮು-ಕಾಶ್ಮೀರವನ್ನು ಚೀನಾದಲ್ಲಿ ತೋರಿಸಲಾಗಿತ್ತು.