ರಾಂಚಿ – ಜಾರ್ಖಂಡನ ಸಂಥಾಲ ಪರಗಣಾ ಸೇರಿದಂತೆ ಇತರ ಭಾಗಗಳಲ್ಲಿ ಬಾಂಗ್ಲಾದೇಶಿ ಮುಸ್ಲಿಮರ ನುಸುಳುವಿಕೆ ಮುಂದುವರೆದಿದೆ. ಜಾರ್ಖಂಡನ ಹಲವು ಜಿಲ್ಲೆಗಳಲ್ಲಿ ಜನಸಂಖ್ಯೆಗಿಂತ ಹೆಚ್ಚು ಆಧಾರ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ವರದಿಯೊಂದು ಬಹಿರಂಗವಾಗಿದೆ. ಅದರ ಅಂಕಿಅಂಶಗಳೂ ಲಭ್ಯವಿವೆ. ಈ ಹಿಂದೆಯೂ ರಾಜ್ಯದಲ್ಲಿ ಮತದಾರರ ಸಂಖ್ಯೆಯಲ್ಲಿ ಅಸಹಜ ಹೆಚ್ಚಳದ ಮಾತು ಕೇಳಿಬಂದಿತ್ತು. (ಈಗಾಗಲೇ ಭಾರತೀಯ ನಾಗರಿಕರಿಗೆ ಮೊದಲೇ ಕೊರತೆಯಾಗುತ್ತಿರುವ ಸಂಪನ್ಮೂಲಗಳ ದುರುಪಯೋಗವನ್ನು ನುಸುಳುಕೋರರು ಪಡೆಯುತ್ತಿದ್ದಾರೆ ಮತ್ತು ಇದು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ನುಸುಳುವವರನ್ನು ಹೊರಹಾಕಲು ಸರಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ ! – ಸಂಪಾದಕರು)
1. ಜಾರ್ಖಂಡನ ಸಂಥಾಲ ಪರಗಣದ ಭಾಗವಾಗಿರುವ ಸಾಹಿಬ್‌ಗಂಜ್ ಮತ್ತು ಪಾಕುರನಲ್ಲಿ ಜನಸಂಖ್ಯೆಗಿಂತ ಹೆಚ್ಚು ಆಧಾರ್ ಕಾರ್ಡ್‌ಗಳನ್ನು ತಯಾರಿಸಲಾಗಿದೆ. ಅಕ್ಟೋಬರ್ 2024 ರ ಹೊತ್ತಿಗೆ, ಸಾಹಿಬ್‌ಗಂಜ್ ನಲ್ಲಿ ಅಂದಾಜು 13 ಲಕ್ಷ 80 ಸಾವಿರ ಜನಸಂಖ್ಯೆಯನ್ನು ಹೊಂದಿದ್ದರೆ, ಅಲ್ಲಿ 14 ಲಕ್ಷ 53 ಸಾವಿರ ಆಧಾರ್ ಕಾರ್ಡ್‌ಗಳನ್ನು ಮಾಡಲಾಗಿದೆ. ಅದೇ ರೀತಿ, ಪಾಕುರ್ ಸಹ ಅಂದಾಜು 10 ಲಕ್ಷ 89 ಸಾವಿರ ಜನಸಂಖ್ಯೆಯನ್ನು ಹೊಂದಿದೆ; ಆದರೆ 11 ಲಕ್ಷದ 36 ಸಾವಿರ ಆಧಾರ್ ಕಾರ್ಡ್ ಮಾಡಲಾಗಿದೆ. ಅಂದರೆ ಈ 2 ಜಿಲ್ಲೆಗಳಲ್ಲಿ ಜನಸಂಖ್ಯೆಗೆ ಹೋಲಿಸಿದರೆ ಶೇ.104 ರಷ್ಟು ಆಧಾರ್ ಕಾರ್ಡ್ ಮಾಡಲಾಗಿದೆ.
2. ಇಂತಹುದೇ ಒಂದು ಘಟನೆ ಲೋಹರದಗಾದಿಂದಲೂ ಬೆಳಕಿಗೆ ಬಂದಿದೆ. ಇಲ್ಲಿ 5 ಲಕ್ಷ 58 ಲಕ್ಷ ಜನಸಂಖ್ಯೆಗಾಗಿ 6 ಲಕ್ಷ 8 ಸಾವಿರ ಆಧಾರ್ ಕಾರ್ಡ್ ಮಾಡಲಾಗಿದೆ. ಅಂದರೆ ಜನಸಂಖ್ಯೆಗೆ ಹೋಲಿಸಿದರೆ ಇಲ್ಲಿ ಶೇ.108 ರಷ್ಟು ಆಧಾರ್ ಸಂಖ್ಯೆ ಸಿದ್ಧವಾಗಿದೆ.
3. ಕೇಂದ್ರ ಸರಕಾರ ಇತ್ತೀಚೆಗೆ ಗುಪ್ತಚರ ಸಂಸ್ಥೆಗಳ ತಂಡವನ್ನು ಸಂಥಾಲ್ ಪರಗಣ ಜಿಲ್ಲೆಗಳಿಗೆ ಕಳುಹಿಸಿತ್ತು. ತಂಡವು ಸಾಹಿಬ್‌ಗಂಜ್‌ನ ಹಲವು ಭಾಗಗಳಿಗೆ ಭೇಟಿ ನೀಡಿತ್ತು. ಈ ತಂಡವು ಬಾಂಗ್ಲಾದೇಶಿ ಮುಸ್ಲಿಮರ ನುಸುಳುವಿಕೆಯ ಪುರಾವೆ ಹೊಂದಿದೆ.
4. ಜಾರ್ಖಂಡ್‌ನಲ್ಲಿ ಅಕ್ರಮ ನುಸುಳುವಿಕೆಗೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯದಲ್ಲಿಯೂ ಪ್ರಕರಣ ನಡೆಯುತ್ತಿದೆ. ಉಚ್ಚ ನ್ಯಾಯಾಲಯವು ರಾಜ್ಯದಲ್ಲಿ ಬಾಂಗ್ಲಾದೇಶಿ ನುಸುಳುಕೋರರ ಸಮೀಕ್ಷೆ ನಡೆಸಿ ಅವರನ್ನು ಗಡಿಪಾರು ಮಾಡುವಂತೆಯೂ ಸೂಚಿಸಿದೆ.
ಸಂಪಾದಕೀಯ ನಿಲುವುಜಾರ್ಖಂಡನಲ್ಲಿ ಮುಸ್ಲಿಮರ ಓಲೈಕೆ ಮಾಡುವ ಜಾರ್ಖಂಡ್ ಮುಕ್ತಿ ಮೋರ್ಚಾ ಸರಕಾರ ಅಧಿಕಾರದಲ್ಲಿರುವುದರಿಂದ ಅಲ್ಲಿ ಬೇರೆ ಏನು ಆಗಬಹುದು ? ಈಗಲಾದರೂ ಕೇಂದ್ರ ಸರಕಾರ ಇತ್ತ ಗಮನಹರಿಸಿ ಈ ನುಸುಳುಕೋರರನ್ನು ಗಡಿಪಾರು ಮಾಡುವುದು ಆವಶ್ಯಕವಾಗಿದೆ ! |