ಭಾರತದ ‘ಅಗ್ನಿ ಪ್ರೈಮ್’ ಕ್ಷಿಪಣಿಯ ಯಶಸ್ವೀ ಪರೀಕ್ಷಣೆ

ಭಾರತದ ವಿಜ್ಞಾನಿಗಳು ಭಾರತೀಯ ಸೈನಿಕರಿಗೆ ಅತ್ಯಾಧುನಿಕ ಕ್ಷಿಪಣಿಗಳನ್ನು ನಿರ್ಮಿಸಿ ಕೊಡುತ್ತಿದ್ದಾರೆ; ಆದರೆ ಜಿಹಾದಿ ಭಯೋತ್ಪಾದಕರು ಮತ್ತು ಪಾಕಿಸ್ತಾನವು ಕೇವಲ ಸಣ್ಣ ಡ್ರೋನ್‍ನ ಸಹಾಯದಿಂದ ಭಾರತದ ಮೇಲೆ ದಾಳಿ ಮಾಡುವಲ್ಲಿ ಯಶಸ್ವಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತವು ಇಂತಹ ಕ್ಷಿಪಣಿಯನ್ನು ಪ್ರತ್ಯಕ್ಷವಾಗಿ ಉಪಯೋಗಿಸಬೇಕು, ಎಂದು ಜನರಿಗೆ ಅನಿಸುತ್ತದೆ !

‘ಅಗ್ನಿ ಪ್ರೈಮ್’ ಕ್ಷಿಪಣಿ

ಚಂಡಿಪುರ (ಒರಿಸ್ಸಾ) – ಭಾರತವು ೨ ಸಾವಿರ ಕಿ.ಮೀ ತನಕ ಹೊಡೆದುರುಳಿಸಬಲ್ಲ ‘ಅಗ್ನಿ ಪ್ರೈಮ್’ ಈ ಕ್ಷಿಪಣಿಯನ್ನು ಜೂನ್ ೨೮ ರಂದು ಇಲ್ಲಿ ಯಶಸ್ವಿಯಾಗಿ ಪರೀಕ್ಷಣೆ ನಡೆಸಿತು. ಇತರ ಕ್ಷಿಪಣಿಗಳಿಗಿಂತ ಈ ಕ್ಷಿಪಣಿಯು ಚಿಕ್ಕದು ಹಾಗೂ ಹಗುರವಾಗಿದೆ.