ಗುಜರಾತ ಪೊಲೀಸರಿಂದ ೨ ಭೂತಗಳ ವಿರುದ್ಧ ದೂರು ದಾಖಲು !
ರಾಜ್ಯದ ಪಂಚಮಹಾಲದಲ್ಲಿ ವರಸಂಗ ಬಾರಿಯಾ ಎಂಬ ವ್ಯಕ್ತಿಯು ೨ ಭೂತಗಳ ವಿರುದ್ಧ ಜಾಂಭೂಘೋದಾ ಪೊಲೀಸು ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಭೂತಗಳ ಗುಂಪೊಂದು ಅವರ ಬಳಿ ಬಂದಿತ್ತು ಮತ್ತು ಅವುಗಳಲ್ಲಿ ೨ ಭೂತಗಳು ನನ್ನನ್ನು ಕೊಲ್ಲುವುದಾಗಿ ಬೆದರಿಕೆಯನ್ನು ನೀಡಿದವು, ಎಂದು ಬಾರಿಯಾ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.