Ganga Maa : ಗಂಗಾ ನದಿಯಲ್ಲಿನ ನೀರು ಶುದ್ಧ ಮತ್ತು ಆಚಮನ ಮಾಡಲು ಯೋಗ್ಯ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

  • ಪ್ರಯಾಗರಾಜ ಮಹಾಕುಂಭಮೇಳ ೨೦೨೫

  • ಮಹಾಕುಂಭಮೇಳದಲ್ಲಿನ ಇಲ್ಲಿಯವರೆಗೆ ಕಾರ್ಯದ ಕುರಿತು ಸಮಾಧಾನ ವ್ಯಕ್ತ !

  • ನೂತನ ಸಂಸ್ಥೆಗಳಿಗೆ ಜನವರಿ ೫ ರ ವರೆಗೆ ಜಾಗ ಹಂಚಿಕೆ ಮಾಡಲು ಪ್ರಯತ್ನ !

ಪ್ರಯಾಗರಾಜ – ಇತರ ವರ್ಷಗಳ ತುಲನೆಯಲ್ಲಿ ಈ ವರ್ಷ ಗಂಗಾ ನದಿಯಲ್ಲಿ ಹೆಚ್ಚು ನೀರು ಇದೆ. ನಿರ್ಮಲ ಗಂಗಾ ನದಿಯ ದರ್ಶನ ಪಡೆಯುವುದಕ್ಕಾಗಿ ನೀರಾವರಿ ಇಲಾಖೆಯಿಂದ ನದಿಯಲ್ಲಿ ಹೆಚ್ಚು ನೀರು ಬಿಡಲಾಗಿದೆ. ಒಟ್ಟಾರೆ ಗಂಗಾ ನದಿಯಲ್ಲಿನ ನೀರು ಶುದ್ಧ ಮತ್ತು ಆಚಮನ ಮಾಡಲು ಯೋಗ್ಯವಾಗಿದೆ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಪ್ರತಿಪಾದಿಸಿದರು.

ಪ್ರಯಾಗರಾಜನ ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೆ ನಡೆದಿರುವ ಕಾರ್ಯದ ವರದಿ ಪಡೆದ ನಂತರ ಅವರು ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು. ಕಾರ್ಖಾನೆಗಳ ತ್ಯಾಜ್ಯ ನೀರು ನೇರ ಗಂಗಾ ನದಿಗೆ ಬಿಡಬಾರದು, ಇದಕ್ಕಾಗಿ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಅಲ್ಲಲ್ಲಿಯೇ ಶುದ್ಧೀಕರಣ ಪ್ರಕಲ್ಪ ಕಾರ್ಯಾ ಮಾಡುತ್ತಿದೆ, ಎಂದು ಕೂಡ ಅವರು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಗಳು ಮಾತು ಮುಂದುವರೆಸಿ,

೧. ಇಲ್ಲಿಯವರೆಗೆ ೨೦ ಸಾವಿರ ಸಂತರು, ಸಂಸ್ಥೆಗಳು ಮತ್ತು ಇತರ ಸಂಘಟನೆಗಳಿಗೆ ಭೂಮಿ ಹಂಚಲಾಗಿದೆ. ಪ್ರಯಾಗದವರಿಗೂ ಕೂಡ ಭೂಮಿ ಹಂಚಿಕೆಯ ಪ್ರಕ್ರಿಯೆ ನಡೆಯುತ್ತಿದೆ. ನೂತನ ಸಂಸ್ಥೆಗಳಿಗೆ ಜನವರಿ ೫ ವರೆಗೆ ಭೂಮಿ ಹಂಚಿಕೆ ಮಾಡುವ ಪ್ರಯತ್ನವಿದೆ.

೨. ನದಿಯ ಮೇಲಿಂದ ಹೋಗಿ ಬರುವುದಕ್ಕಾಗಿ ೩೦ ಸೇತುವೆಗಳಲ್ಲಿ ೨೦ ಸೇತುವೆ ತಯಾರಾಗಿದೆ. ಉಳಿದಿರುವ ಸೇತುವೆ ಡಿಸೆಂಬರ್ ೩೦ ವರೆಗೆ ಕಟ್ಟಿ ಸಿದ್ದಗೊಳ್ಳುವುದು.

೩. ನದಿಪಾತ್ರದಲ್ಲಿ ‘ಚಕರ ಪ್ಲೇಟ್ಸ್’ (ಮರಳಿನಲ್ಲಿ ನಡೆಯಲು ಸಾಧ್ಯವಾಗಬೇಕು ಹಾಗೂ ವಾಹನಗಳು ಜಾರಬಾರದು ಇದಕ್ಕಾಗಿ ಅಳವಡಿಸಿರುವ ತಾತ್ಕಾಲಿಕ ಕಬ್ಬಿಣದ ಪಟ್ಟಿಗಳು) ಅಳವಡಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತದೆ.

೪. ಕುಂಭ ಕ್ಷೇತ್ರದಲ್ಲಿ ೨೪ ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು ಅದಕ್ಕಾಗಿ ವಿದ್ಯುತ್ತಿನ ಅನೇಕ ‘ಸಬ್ ಸ್ಟೇಷನ್’ ನಿರ್ಮಾಣ ಮಾಡಲಾಗಿದೆ ಹಾಗೂ ಕೆಲವು ಆದಷ್ಟು ಬೇಗನೆ ನಿರ್ಮಾಣವಾಗುವುದು. ಇಲ್ಲಿಯವರೆಗೆ ೩೮ ಸಾವಿರ ಎಲ್.ಇ.ಡಿ. ಲೈಟ್ಸ್ ಹಾಕಲಾಗಿದೆ.

ದಶ್ವಾಶಮೇಧ ಘಾಟನಲ್ಲಿ ಪೂಜೆ ಮತ್ತು ಆರತಿ !

ಅದರ ಮೊದಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ದಶ್ವಾಶಮೇಧ ಘಾಟದಲ್ಲಿ ಪೂಜೆ ಮತ್ತು ಆರತಿ ಮಾಡಿದರು. ಈ ಸಮಯದಲ್ಲಿ ಅವರು ತ್ರಿವೇಣಿ ಸಂಗಮದಲ್ಲಿ ನಿರ್ಮಿಸಿರುವ ‘ಟೆಂಟ್ ಸಿಟಿಯ’ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಇರುವ ವಿಷಯಗಳು ಆದಷ್ಟು ಬೇಗನೆ ಪೂರ್ಣಗೊಳಿಸಲು ಸೂಚಿಸಿದರು.