ಕಾಮಾಂಧತೆಯ ದುಷ್ಪರಿಣಾಮ, ಎಂದು ಹೇಳಬಹುದು ! ಇಂತಹ ಘಟನೆಗಳನ್ನು ತಡೆಯಲು ಕೇಂದ್ರ ಸರಕಾರವು ಶೀಘ್ರವಾಗಿ ಸಮಾನ ನಾಗರಿಕ ಕಾನೂನು ಜಾರಿಗೆ ತರುವುದು ಅಗತ್ಯವಿದೆ.
ಮುಝಫ್ಫರನಗರ (ಉತ್ತರಪ್ರದೇಶ) – ಇಲ್ಲಿಯ ಶಿಕಾರಪುರ ಗ್ರಾಮದಲ್ಲಿ ೭೭ ವರ್ಷದ ಓರ್ವ ಮೌಲ್ವಿ(ಇಸ್ಲಾಂ ಧರ್ಮದ ನಾಯಕ)ಯು ಮೂರನೇ ಮದುವೆಗಾಗಿ ಪ್ರಯತ್ನಿಸುತ್ತಿದ್ದ. ಇದಕ್ಕೆ ಆಕ್ರೋಶಗೊಂಡ ಮೊದಲನೇ ಹೆಂಡತಿಯು ಮೌಲ್ವಿಯು ಮಲಗಿರುವಾಗ ಆತನ ಮರ್ಮಾಂಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದುದರಿಂದ ಆತ ಸಾವನ್ನಪ್ಪಿರುವ ಘಟನೆಯು ನಡೆದಿದೆ. ವಕೀಲ ಅಹಮದ್ ಎಂದು ಈ ಮೌಲ್ವಿಯ ಹೆಸರಾಗಿದೆ ಮತ್ತು ಹಾಜರಾ ಹೆಂಡತಿಯ ಹೆಸರಾಗಿದೆ. ಪೊಲೀಸರು ಹಾಜರಾಳನ್ನು ಬಂಧಿಸಿದ್ದಾರೆ.
೧. ಮೌಲ್ವಿಯು ಮನೆಯಲ್ಲೇ ಸಾವನ್ನಪ್ಪಿದ್ದರಿಂದ ಹಾಜರಾಳು ಸಂಬಂಧಿಕರ ಸಹಾಯದಿಂದ ಮೌಲ್ವಿಯನ್ನು ಹೂಳಲು ಪ್ರಯತ್ನಿಸಿದಳು. ಆಗ ನೆರೆಯ ಮನೆಯವರಿಗೆ ಅನುಮಾನ ಬಂದಾಗ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ವಿಚಾರಣೆ ನಡೆಸಿದಾಗ ಹಾಜರಾ ನಡೆದ ಎಲ್ಲಾ ಪ್ರಸಂಗವನ್ನು ಹೇಳಿ ತಪ್ಪು ಒಪ್ಪಿಕೊಂಡಿದ್ದಾಳೆ.
೨. ಹಾಜರಾಗೆ ೫ ಹೆಣ್ಣು ಮಗಳಿದ್ದು ಅವರಲ್ಲಿ ೪ ಮಕ್ಕಳಿಗೆ ಮದುವೆಯಾಗಿದೆ. ಎರಡನೇ ಹೆಂಡತಿಯು ಮೌಲ್ವಿಯನ್ನು ತ್ಯಜಿಸಿದ ನಂತರ ಆತ ಮೂರನೇ ಮದುವೆಯಾಗುವವನಿದ್ದೇನೆ ಎಂದು ಹಾಜರಾಗೆ ತಿಳಿಸಿದ್ದ. ಇದಕ್ಕೆ ಆಕೆಯು ‘ಅವಿವಾಹಿತ ಮಗಳಿಗೆ ಮದುವೆ ಮೊದಲು ಮಾಡಿಸು’, ಎಂದು ಮೌಲ್ವಿಗೆ ಹೇಳಿದಳು. ಈ ಬಗ್ಗೆ ಅವರಲ್ಲಿ ವಾದ-ವಿವಾದ ನಡೆದಿತ್ತು ಮತ್ತು ರಾತ್ರಿ ಹಾಜರಾಳು ಮೌಲ್ವಿಯ ಮೇಲೆ ದಾಳಿ ಮಾಡಿದಳು.