ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ; ರಾಜ್ಯದ ಮೂವರು ಯೋಧರ ಸಾವು

ಮಂಗಳೂರು – ಪೂಂಛ ಜಿಲ್ಲೆಯ ಗಡಿ ರೇಖೆಯ ಬಳಿ ಮಂಗಳವಾರ 24.12.2024ರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ರಾಜ್ಯದ ಮೂವರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಓರ್ವ ಯೋಧ ಗಂಭಿರವಾಗಿ ಗಾಯಗೊಂಡಿದ್ದಾರೆ. ರಾಜ್ಯದ ಬೆಳಗಾವಿ ಜಿಲ್ಲೆಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ ದಯಾನಂದ್ ತಿರಕಣ್ಣವರ(45 ವಯಸ್ಸು), ಕುಂದಾಪುರದಲ್ಲಿನ ಕೋಟೇಶ್ವರದ ಬಿಜಾಡಿಯ ಅನೂಪ್ (ವಯಸ್ಸು 33) ಹಾಗೂ ಮಹಾಲಿಂಗಪುರದ ಮಹೇಶ ಮರಿಗೊಂಡ (ವಯಸ್ಸು 25) ಮೃತಪಟ್ಟ ಯೋಧರು ಎಂದು ಗುರುತಿಸಲಾಗಿದೆ. ಹಾಗೂ ಮಹಾರಾಷ್ಟ್ರದ ಇಬ್ಬರು ಯೋಧರು ಸಹ ಹುತಾತ್ಮರಾಗಿದ್ದಾರೆ.

ಯೋಧರ ವಾಹನವು ಕಿರಿದಾದ ರಸ್ತೆಯಿಂದ ಹಾದು ಹೋಗುತ್ತಿರುವಾಗ ಜಾರಿದೆ ಎಂದು ತಿಳಿದು ಬಂದಿದೆ ಹಾಗೂ ಈ ಬಗ್ಗೆ ತನಿಖೆಯು ಆರಂಭವಾಗಿದೆ.