ಭಾರತದ ಪ್ರಪ್ರಥಮ ಸ್ವದೇಶಿ ವಿಮಾನವಾಹಕ ಯುದ್ಧನೌಕೆಯು ಜುಲೈ ೨೦೨೧ ರಿಂದ ಕಾರ್ಯನಿರ್ವಹಿಸಲಿದೆ ! – ರಕ್ಷಣಾಸಚಿವ ರಾಜನಾಥ ಸಿಂಗ್

ಕೊಚೀನ್ (ಕೇರಳ) – ಭಾರತದ ಪ್ರಪ್ರಥಮ ಸ್ವದೇಶಿ ವಿಮಾಣವಾಹಕ ಯುದ್ಧನೌಕೆ ಮುಂದಿನ ವರ್ಷ ಜುಲೈ ತಿಂಗಳಿನಿಂದ ಕಾರ್ಯನಿರ್ವಹಿಸಲಿದೆ, ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಾಹಿತಿ ನೀಡಿದರು. ಸಿಂಗ್ ಅವರು ಕೊಚೀನ್ ಬಂದರಿನ ಹತ್ತಿರ ಅರ್ನಾಕುಲಮ್‍ನಲ್ಲಿ ಭೇಟಿ ನೀಡಿದಾಗ ಈ ಯುದ್ಧನೌಕೆಯನ್ನು ವೀಕ್ಷಿಸಿದರು.

ಸಿಂಗ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಯುದ್ಧನೌಕೆಯು ಭಾರತಕ್ಕಾಗಿ ಹೆಮ್ಮೆಯ ವಿಷಯವಾಗಿದ್ದು ‘ಆತ್ಮನಿರ್ಭರ ಭಾರತ’ದ ದಿಕ್ಕಿನತ್ತ ಇಟ್ಟ ಹೆಜ್ಜೆಯಾಗಿದೆ. ಮುಂದಿನ ವರ್ಷ ಭಾರತವು ಸ್ವತಂತ್ರವಾಗಿ ೭೫ ವರ್ಷ ಪೂರ್ಣಗೊಳ್ಳುತ್ತಿರುವಾಗ ಈ ಯುದ್ಧನೌಕೆ ನಿರ್ಮಾಣವಾಗುವುದು ಮಹತ್ವದ ಅಂಶವಾಗಿದೆ. ಈ ಯುದ್ಧನೌಕೆಯ ಮಾರಕ ಶಕ್ತಿಯು ಅಗಾಧವಾಗಿದ್ದು ಅದು ವೈವಿಧ್ಯಮಯವಾಗಿದೆ. ಭಾರತದ ರಕ್ಷಣೆಯ ಕ್ಷಮತೆಯು ಇದರಿಂದ ಹೆಚ್ಚಾಗಲಿದೆ. ದೇಶದ ಕಡಲ ಸೀಮೆಯ ರಕ್ಷಣೆಗಾಗಿ ಈ ಯುದ್ಧನೌಕೆಯು ಸಜ್ಜಾಗಲಿದೆ ಎಂದು ಹೇಳಿದರು.