ರಾಷ್ಟ್ರಪತಿಯ ರೈಲಿನ ಕಾರಣ ಸಂಚಾರ-ಸಾರಿಗೆಯನ್ನು ನಿಲ್ಲಿಸಿದ್ದರಿಂದ ಆಸ್ಪತ್ರೆಗೆ ತಲುಪಲು ಆಗದೇ ಅನಾರೋಗ್ಯ ಮಹಿಳೆಯ ಮೃತ್ಯು

ರಾಷ್ಟ್ರಪತಿಯಿಂದ ಜಿಲ್ಲಾಧಿಕಾರಿಯನ್ನು ಆ ಮಹಿಳೆಯ ಮನೆಗೆ ಕಳುಹಿಸಿ ಕುಟುಂಬದವರಿಗೆ ಸಾಂತ್ವನ

ಪೊಲೀಸ್ ಅಧಿಕಾರಿ ಸಹಿತ ೪ ಸಂಚಾರ ನಿರೀಕ್ಷಕರು ಅಮಾನತು

ದೊಡ್ಡ ನಾಯಕರ ಪ್ರವಾಸದ ಸಮಯದಲ್ಲಿ ಸಾರಿಗೆಯನ್ನು ನಿಲ್ಲಿಸಲಾಗುತ್ತದೆ. ಅದರಿಂದ ಸಾಮಾನ್ಯ ಜನರು ಈ ಅಡಚಣೆಯನ್ನು ಯಾವಾಗಲೂ ಎದುರಿಸಬೇಕಾಗುತ್ತದೆ. ಈ ಬಗ್ಗೆ ರಾಷ್ಟ್ರಪತಿಯವರು ಸರಕಾರಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವಂತೆ ಆದೇಶ ನೀಡಬೇಕು !

ಕಾನಪುರ (ಉತ್ತರಪ್ರದೇಶ) – ಭಾರತದ ರಾಷ್ಟ್ರಪತಿ ರಾಮನಾಥ ಕೊವಿಂದ ಇವರು ಪ್ರವಾಸ ಮಾಡುತ್ತಿದ್ದ ರೈಲು ಇಲ್ಲಿಯ ಗೋವಿಂದಪುರಿಯ ಸೇತುವೆಯಿಂದ ಹೋಗುತ್ತಿರುವಾಗ ೪೫ ನಿಮಿಷಗಳ ಕಾಲ ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ನಿಲ್ಲಿಸಿದ ವಾಹನಗಳಲ್ಲಿ ಸಿಲುಕಿದ ಕಾರಣ ಅನಾರೋಗ್ಯಗೊಂಡಿದ್ದ ಇಂಡಿಯನ್ ಇಂಡಸ್ಟ್ರಿಸ್ ಅಸೊಸಿಯೇಶನ್’ನ ಕಾನಪುರ ವಿಭಾಗದ ಅಧ್ಯಕ್ಷೆ ವಂದನಾ ಮಿಶ್ರಾ ಈ ೫೦ ವರ್ಷದ ಮಹಿಳೆಯನ್ನು ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗಲಿಲ್ಲ. ಇದರಿಂದ ಆಕೆಯು ತೀರಿಕೊಂಡಳು. ಈ ಮಾಹಿತಿಯು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ತಂಗಿದ್ದ ರಾಷ್ಟ್ರಪತಿಯವರ ಪತ್ನಿಗೆ ತಿಳಿದನಂತರ ಅವರು ಅದನ್ನು ರಾಷ್ಟ್ರಪತಿಗೆ ತಿಳಿಸಿದರು. ಇದಕ್ಕೆ ರಾಷ್ಟ್ರಪತಿಯು ಕಾನಪುರದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರನ್ನು ಕೂಡಲೇ ಮಿಶ್ರಾ ಇವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ತಿಳಿಸಲು ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಅಧಿಕಾರಿ ಸಹಿತ ೪ ಸಂಚಾರಿ ನಿರೀಕ್ಷಕರನ್ನು ಅಮಾನತುಗೊಳಿಸಲಾಗಿದೆ. ವಾಹನವನ್ನು ನಿಲ್ಲಿಸಿದಾಗ ವಂದನಾ ಮಿಶ್ರಾರವರ ಕುಟುಂಬದವರು ಪೊಲೀಸರ ಬಳಿ ತಮ್ಮನ್ನು ಬಿಡುವಂತೆ ಪದೇ ಪದೇ ವಿನಂತಿಸಿದರು; ಆದರೆ ಪೊಲೀಸರು ಅದಕ್ಕೆ ಅನುಮತಿಸಲಿಲ್ಲ. ಆಸ್ಪತ್ರೆಗೆ ತಲುಪುವ ತನಕ ವಂದನಾ ಮಿಶ್ರಾರವರು ತೀರಿಕೊಂಡಿದ್ದರು.