ಭರೂಚ (ಗುಜರಾತ) ಇಲ್ಲಿ ಜೈಲಿನಿಂದ ಹೊರಬಂದ ಆರೋಪಿಯಿಂದ ಪುನಃ ವೃದ್ಧೆಯ ಮೇಲೆ ಬಲಾತ್ಕಾರ

ಭರೂಚ (ಗುಜರಾತ) – 35 ವರ್ಷದ ಶೈಲೇಶ್ ರಾಥೋಡ್ ಹೆಸರಿನ ಆರೋಪಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ 70 ವರ್ಷದ ಮಹಿಳೆಯ ಮೇಲೆ ಮತ್ತೊಮ್ಮೆ ಬಲಾತ್ಕಾರ ಮಾಡಿದ್ದಾನೆ. ಇದೇ ವೃದ್ಧೆಯ ಮೇಲೆ ಬಲಾತ್ಕಾರ ಎಸಗಿದ ಆರೋಪದಲ್ಲಿ 18 ತಿಂಗಳ ಹಿಂದೆ ಆತನನ್ನು ಬಂಧಿಸಲಾಗಿತ್ತು. ಬಲಾತ್ಕಾರದ ಬಗ್ಗೆ ದೂರು ನೀಡಬಾರದೆಂದು ಅವನು ಬೆದರಿಕೆ ಹಾಕಿದ್ದನು. ಶೈಲೇಶ್ ವಿರುದ್ಧ ದೂರು ದಾಖಲಿಸಿದ ಬಳಿಕ ಆತನ ಬಂಧನಕ್ಕೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

11 ವರ್ಷದ ಬಲಾತ್ಕಾರ ಪೀಡಿತ ಬಾಲಕಿಯ ಸಾವು

ಕೆಲವು ದಿನಗಳ ಹಿಂದೆ ಇಲ್ಲಿ ವಲಸೆ ಕಾರ್ಮಿಕರೊಬ್ಬರ 11 ವರ್ಷದ ಬಾಲಕಿಯ ಮೇಲೆ ಬಲಾತ್ಕಾರದ ಘಟನೆ ನಡೆದಿತ್ತು. ಈ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಬಾಲಕಿಯನ್ನು ಅಪಹರಿಸಿ ಬಲಾತ್ಕಾರ ಮಾಡಿದರು. ಅವಳು ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಒಂದು ವಾರದಿಂದ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಸಂಪಾದಕೀಯ ನಿಲುವು

ಇಂತಹ ಅಪರಾಧಿಗಳನ್ನು ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ, ಗಲ್ಲು ಶಿಕ್ಷೆ ವಿಧಿಸುವುದು ಎಷ್ಟು ಅಗತ್ಯ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !