6 ತಿಂಗಳ ನಂತರ ಇಸ್ರೇಲ್ ನಿಂದ ಸ್ವೀಕೃತಿ
ಟೆಲ್ ಅವೀವ (ಇಸ್ರೇಲ್) – ಹೇಗೆ ನಾವು ಹಮಾಸ್ ಮುಖ್ಯಸ್ಥ ಹನಿಯೆ ಮತ್ತು ಸಿನವಾರ ಇವರ ಹತ್ಯೆ ಮಾಡಿದ್ದೇವೆ. ಅದೇ ರೀತಿ ಹುತಿ ಬಂಡುಕೋರರನ್ನೂ ಕೊಲ್ಲುತ್ತೇವೆ” ಎಂದು ಎಚ್ಚರಿಕೆ ನೀಡುವಾಗ ಇಸ್ರೇಲ್ ರಕ್ಷಣಾ ಸಚಿವ ಕ್ವಾಟ್ಝ ಇವರು ಹಮಾಸ ಮುಖ್ಯಸ್ಥ ಹನಿಯೆನನ್ನು ಹತ್ಯೆ ಮಾಡಿದ 6 ತಿಂಗಳ ಬಳಿಕ ಒಪ್ಪಿಕೊಂಡಿದ್ದಾರೆ. ಹನಿಯೆ ಇರಾನ್ ರಾಜಧಾನಿ ಟೆಹರಾನನಲ್ಲಿನ ಕಟ್ಟಡವೊಂದರಲ್ಲಿನ ಕೊಠಡಿಯಲ್ಲಿನ ಸ್ಫೋಟದಲ್ಲಿ ಹತನಾಗಿದ್ದ. ಇದರ ಹಿಂದೆ ಇಸ್ರೇಲ್ ಇದೆ ಎಂದು ಹೇಳಲಾಗುತ್ತಿತ್ತು; ಆದರೆ ಈ ಬಗ್ಗೆ ಇಸ್ರೇಲ್ ಇದುವರೆಗೂ ಯಾವುದೇ ಹೇಳಿಕೆ ನೀಡಿರಲಿಲ್ಲ.
ಹುತಿ ಬಂಡುಕೋರರನ್ನೂ ಸೋಲಿಸುತ್ತೇವೆ ! – ಇಸ್ರೇಲ್
ರಕ್ಷಣಾ ಸಚಿವ ಕ್ವಾಟ್ಜ್ ಇವರು ‘ಯೆಮೆನ್‌ನ ಹುತಿ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’, ಎಂದು ಬೆದರಿಕೆ ಹಾಕಿದ್ದಾರೆ. ಅವರು, “ನಾವು ಹಮಾಸ್ ಅನ್ನು ಸೋಲಿಸಿದ್ದೇವೆ, ನಾವು ಹಿಜ್ಬುಲ್ಲಾವನ್ನು ಸೋಲಿಸಿದ್ದೇವೆ ಮತ್ತು ನಾವು ಹುತಿ ಬಂಡುಕೋರರನ್ನು ಸೋಲಿಸುತ್ತೇವೆ” ಎಂದು ಅವರು ಹೇಳಿದರು. ಕ್ವಾಟ್ಝ ಇವರು ಹುತಿಗಳ ಮೂಲಸೌಕರ್ಯವನ್ನು ನಾಶಪಡಿಸುವುದಾಗಿ ಮತ್ತು ಅವರ ನಾಯಕರ ಶಿರಚ್ಛೇದವನ್ನು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹುತಿ ಬಂಡುಕೋರರು ಕಳೆದ 1 ವರ್ಷದಿಂದ ಇಸ್ರೇಲ್ ಮೇಲೆ ರಾಕೆಟ್ ಮತ್ತು ಕ್ಷಿಪಣಿಗಳ ದಾಳಿ ನಡೆಸುತ್ತಿದ್ದಾರೆ. ಇದರೊಂದಿಗೆ ಕೆಂಪು ಸಮುದ್ರದಲ್ಲಿ ಇಸ್ರೇಲ್ ನ ಸರಕು ಸಾಗಣೆ ಹಡಗುಗಳನ್ನು ಗುರಿ ಮಾಡಿ ದಾಳಿ ನಡೆಸುತ್ತಿದ್ದಾರೆ.