ಪುರಿ (ಒರಿಸ್ಸಾ) – ನಿಸರ್ಗವು ವಿಶ್ವಕ್ಕೆ ಮತ್ತು ಭಾರತಕ್ಕೆ ಪಾಠ ಕಲಿಸಿ ಎಚ್ಚರಿಕೆಯನ್ನು ನೀಡಿದೆಯೋ, ಅದನ್ನು ನಾವು ಅರ್ಥಮಾಡಿಕೊಳ್ಳುವಲ್ಲಿ ತಪ್ಪಿದ್ದೇವೆ. ಭಗವಂತನ ಕೃಪೆಯಿಂದ ಕೊರೊನಾದ ಈ ಮಹಾಮಾರಿಯು ಸಮಾಪ್ತಿಯಾಗಬೇಕು. ಭಾರತದ ಆಡಳಿತಗಾರರು ‘ನಾವು ವೈದಿಕ ತತ್ತ್ವಶಾಸ್ತ್ರವನ್ನು ಭಾರತದ ಮೂಲಕ ಭೂಮಿಯ ಮೇಲೆ ಜಾರಿಗೆ ತರುವ ವ್ರತವನ್ನು ಕೈಗೊಳ್ಳುತ್ತೇವೆ’, ಎಂದು ಘೋಷಣೆ ಮಾಡಿದರೆ ಕೊರೋನಾ ಮಹಾಮಾರಿಯು ಶೀಘ್ರದಲ್ಲೇ ಕೊನೆಗೊಳ್ಳುವುದು, ಎಂದು ಪುರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ಇತ್ತೀಚೆಗೆ ಹೇಳಿಕೆ ನೀಡಿದರು.
ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ,
೧. ನಿಸರ್ಗವು ಈಶ್ವರನ ಶಕ್ತಿಯಾಗಿದೆ. ನಿಸರ್ಗವು ನಿರ್ಜಿವವಾಗಿದ್ದರೂ ಚಿನ್ಮಯವಾಗಿದೆ. ನಿಸರ್ಗವು ಕರ್ತವ್ಯನಿಷ್ಠ ಹಾಗೂ ಗುಣನಿಷ್ಠವಾಗಿದ್ದರಿಂದ ಅದು ಆಡಳಿತವರ್ಗದವರ ಭಾಷೆ ಅರಿತುಕೊಳ್ಳುತ್ತದೆ; ಆದರೆ ಅವಕ್ಕೆ ಇಂದಿನ ಹಾಗೂ ಮುಂದಿನ ಆಡಳಿತದವರಿಂದ ಒಂದು ಅಡಚಣೆಯಿದೆ. ಅವರಿಗೆ, ‘ಅವರು ಮನುವಾದಿಯಕಥೆಯನ್ನು ಮಾತ್ರ ಕೇಳಿದರೆ ಅವರು ರಾಜ್ಯವನ್ನಾಳಲು ಸಾಧ್ಯವಿಲ್ಲ. ಹಾಗಾಗಿ ಭಾರತ ನಾಶವಾದರೂ ಪರವಾಗಿಲ್ಲ, ಅದರ ಅಧೋಗತಿ ಆದರೂ ಪರವಾಗಿಲ್ಲ; ಆದರೆ ಅವರು ಯಾವುದೇ ಧರ್ಮಾಚಾರ್ಯರ ಅಥವಾ ಆಧ್ಯಾತ್ಮಿಕ ಪುರುಷರ ಬಳಿ ಹೋಗಿ ಅವರ ಮುಂದೆ ಮಂಡಿಯೂರಲಾರರು ಮತ್ತು ಅವರ ಮಾರ್ಗದರ್ಶನ ಪಡೆಯಲಾರರು. ಸಾಧ್ಯವಿದಲ್ಲಿ ಅವರನ್ನೂ ಸಹ ತಮ್ಮ ಪಕ್ಷದ ಪ್ರಚಾರಕರೆಂದೇ ಇಟ್ಟುಕೊಳ್ಳುತ್ತಾರೆ. ರಾಜಕಾರಣಿಗಳ ಇಂತಹ ಉದ್ರೇಕದಿಂದ ಈ ಸ್ಥಿತಿಯು ಉದ್ಭವಿಸಿದೆ.
೨. ದೇಶದಲ್ಲಿ ಅನಾರೋಗ್ಯವಿಲ್ಲ; ಆದರೆ ಉದ್ರೇಕವು ಪರಾಕಾಷ್ಠೆಗೆ ಹೋಗಿದೆ. ಆದ್ದರಿಂದ ಭಾರತದ ಆಡಳಿತವರ್ಗದವರು, ‘ನಿಸರ್ಗವು ಪಾಠ ಕಲಿಸಿ ಯಾವ ಎಚ್ಚರಿಕೆಯನ್ನು ನೀಡಿದೆಯೋ, ಅದು ನಮಗೆ ತಿಳಿಯಿತು. ನಿಸರ್ಗವು ನಮಗೆ ಇಂತಹ ತುತ್ತತುದಿಯಲ್ಲಿ ನಿಲ್ಲಿಸಿದೆ ಎಂದರೆ, ಈಗ ನಾವು ಸನಾತನ ಪರಂಪರೆಯ ಮೂಲಕ ವಿಕಾಸ ಸಾಧಿಸಬೇಕಾಗಿದೆ, ಎಂದು ಹೇಳಿದರು.