ಪ್ರಯಾಗರಾಜ್, ಅಯೋಧ್ಯ ಮತ್ತು ಕಾಶಿಗೆ ಹೋಗಲು ರೈಲ್ವೆ ಇಲಾಖೆಯಿಂದ ವಿಶೇಷ ಯಾತ್ರೆಯ ಆಯೋಜನೆ !

ಪ್ರಯಾಗರಾಜ ಮಹಾಕುಂಭಮೇಳ ೨೦೨೫

ನವ ದೆಹಲಿ – ಪ್ರಯಾಗರಾಜ ಇಲ್ಲಿ ಜನವರಿ ೧೩ ರಿಂದ ಆರಂಭವಾಗುವ ಮಹಾಕುಂಭ ಮೇಳದ ಪ್ರಯುಕ್ತ ರೈಲ್ವೆ ಇಲಾಖೆಯು ಭಕ್ತರಿಗೆ ಪ್ರಯಾಗರಾಜ, ಅಯೋಧ್ಯೆ ಮತ್ತು ಕಾಶಿಗೆ ಹೋಗಲು ‘ಮಹಾಕಂಭ ಪುಣ್ಯ ಕ್ಷೇತ್ರ ಯಾತ್ರೆ’ ಹೆಸರಿನ ವಿಶೇಷ ಯಾತ್ರೆಯ ಆಯೋಜನೆ ಮಾಡಿದೆ. ಭಕ್ತರಿಗೆ ಮಹಾಕುಂಭ ಮೇಳದಲ್ಲಿ ಸ್ನಾನ ಮಾಡಲು ಸಾಧ್ಯವಾಗಬೇಕು ಹಾಗೂ ಅಯೋಧ್ಯೆ ಮತ್ತು ಕಾಶಿಯ ದರ್ಶನ ಪಡೆಯಲು ಸಾಧ್ಯವಾಗಬೇಕು, ಇದಕ್ಕಾಗಿ ಯೋಜನೆ ರೂಪಿಸಲಾಗಿದೆ’, ಎಂದು ರೈಲ್ವೆ ಇಲಾಖೆ ಹೇಳಿದೆ.

ಜನವರಿ ೨೩ ರಿಂದ ಈ ಯಾತ್ರೆಗೆ ಆರಂಭವಾಗುವುದು. ೬ ರಾತ್ರಿ ಮತ್ತು ೭ ದಿನ ನಡೆಯುವ ಈ ಯಾತ್ರೆಯಲ್ಲಿ ಭಕ್ತರ ಭೋಜನ-ನೀರು ಸಹಿತ ನಿವಾಸದ ವ್ಯವಸ್ಥೆ ಮಾಡಲಾಗುವುದು.

ಪ್ರತಿಯೊಬ್ಬ ವ್ಯಕ್ತಿಗೆ ತಲಾ ೨೦ ಸಾವಿರದ ೯೦೫ ರೂಪಾಯಿ ವೆಚ್ಚ !

ಈ ಯಾತ್ರೆಗಾಗಿ ಭಕ್ತರಿಗೆ ರಿಸರ್ವೇಶನ್ ಮಾಡಬೇಕಾಗುವುದು. ರೈಲ್ವೆಯ ಸ್ಲೀಪರ್ ಕೋಚ್ ರಿಸರ್ವೇಶನ್ ಮಾಡಿಸಿದರೆ ೨೦ ಸಾವಿರದ ೯೦೫ ರೂಪಾಯಿ ಹಾಗೂ ಏಸಿ ರಿಸರ್ವೇಶನ್ ಮಾಡಿಸಿದರೆ ೨೮ ಸಾವಿರದ ೩೫೦ ರೂಪಾಯಿ ವೆಚ್ಚವಾಗುವುದು. ಈ ಹಣ ೫ ರಿಂದ ೧೧ ವರ್ಷದ ಮಕ್ಕಳಿಗಾಗಿ ಅನುಕ್ರಮವಾಗಿ ೧೯ ಸಾವಿರದ ೨೫೦ ರೂಪಾಯಿ ಮತ್ತು ೨೬ ಸಾವಿರದ ೫೫೫ ರೂಪಾಯಿ ಆಗುವದು. ಯಾತ್ರೆಗೆ ರಿಸರ್ವೇಶನ್ ಮಾಡುವುದಕ್ಕಾಗಿ ಭಕ್ತರು 9281030739, 9281030725 ಅಥವಾ 9281436280 ಈ ಸಂಖ್ಯಗೆ ಸಂಪರ್ಕಿಸಬಹುದು. ಎಂದು ರೈಲ್ವೆ ಇಲಾಖೆಯಿಂದ ಕರೆ ನೀಡಲಾಗಿದೆ.