Yoga Guru Baba Ramdev : ನಮ್ಮ ದೊಡ್ಡ ದೊಡ್ಡ ಪವಿತ್ರ ತೀರ್ಥಕ್ಷೇತ್ರಗಳು ಮತ್ತು ಪ್ರತೀಕವಾಗಿರುವ ಸ್ಥಳಗಳ ಬಗ್ಗೆ ನಿರ್ಣಯ ಕೈಗೊಳ್ಳಬೇಕು ! – ಯೋಗಋಷಿ ರಾಮದೇವ ಬಾಬಾ

ಯೋಗ ಗುರು ಬಾಬಾ ರಾಮದೇವ್

ಹರಿದ್ವಾರ (ಉತ್ತರಾಖಂಡ) – ಮುಸಲ್ಮಾನ ಅಕ್ರಮಣಕಾರರು ಭಾರತಕ್ಕೆ ಬಂದು ನಮ್ಮ ದೇವಸ್ಥಾನಗಳು, ನಮ್ಮ ಧಾರ್ಮಿಕ ಸ್ಥಳಗಳು ಮತ್ತು ನಮ್ಮ ಗುರುತಾಗಿರುವಂತಹ ಪ್ರತೀಕಗಳನ್ನು ನಾಶಗೊಳಿಸಿದ್ದಾರೆ, ಇದು ಸತ್ಯವಾಗಿದೆ. ನಮ್ಮ ಸನಾತನ ದೇವಸ್ಥಾನಗಳು ಮತ್ತು ಮೂರ್ತಿಗಳನ್ನು ಧ್ವಂಸ ಮಾಡಲಾಗಿದೆ. ಈಗ ಇಂತಹವರಿಗೆ ಎಷ್ಟು ಶಿಕ್ಷೆ ವಿಧಿಸುವುದು ಅಥವಾ ಇಲ್ಲ ಇದು ನ್ಯಾಯಪಾಲಿಗೆ ಕಾರ್ಯವಾಗಿದೆ. ಪಾಪಿಗಳಿಗೆ ಅವರ ಪಾಪದ ಫಲಗಳು ಭೋಗಿಸ ಬೇಕಾಗುವುದು. ನಮ್ಮ ದೊಡ್ಡ ದೊಡ್ಡ ತೀರ್ಥಕ್ಷೇತ್ರಗಳು ಮತ್ತು ಪ್ರತೀಕಗಳಾಗಿರುವ ಸ್ಥಳದ ಕುರಿತು ನಿರ್ಣಯ ಕೈಗೊಳ್ಳಬೇಕು, ಎಂದು ಯೋಗಋಷಿ ರಾಮದೇವ ಬಾಬಾ ಇವರು ಹೇಳಿಕೆ ನೀಡಿದರು. ಅವರು ಹರಿದ್ವಾರದಲ್ಲಿನ ಗುರುಕುಲ ಕಾಂಗರಿ ವಿದ್ಯಾ ಪೀಠದಲ್ಲಿ ಆಯೋಜಿಸಿರುವ ಸ್ವಾಮಿ ಶ್ರದ್ಧಾನಂದ ಸರಸ್ವತಿ ಇವರ ೯೯ ನೇ ಹುತಾತ್ಮ ದಿನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಅವರು ‘ಸಂಪೂರ್ಣ ದೇಶದಲ್ಲಿ ಗುರುಕುಲ ಶಿಕ್ಷಣ ಪದ್ಧತಿಗೆ ಪ್ರೋತ್ಸಾಹ ನೀಡುವುದರ ಕುರಿತು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ’, ಎಂದು ಕೂಡ ಅವರು ಹೇಳಿದರು.

ಸನಾತನ ಧರ್ಮ ನಾಶ ಮಾಡ ಬಯಸುವವರಿಗೆ ಪಾಠ ಕಲಿಸಬೇಕು !

ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಇವರು ಹೇಳಿರುವ ‘ಮಂದಿರ ಮಸಿದಿ ವಿವಾದದಿಂದ ಕೆಲವರು ಹಿಂದುಗಳ ನಾಯಕರಾಗುತ್ತಿದ್ದಾರೆ’ ಈ ಹೇಳಿಕೆಯ ಬಗ್ಗೆ ರಾಮದೇವ ಬಾಬಾ ಇವರು, ಅದು ಸರಸಂಘ ಚಾಲಕರ ವೈಯಕ್ತಿಕ ಹೇಳಿಕೆ ಆಗಿದೆ ಮತ್ತು ಅನೇಕ ಸಂತರು ಕೂಡ ಇದರ ಕುರಿತು ಹೇಳಿಕೆ ನೀಡುತ್ತಿದ್ದಾರೆ; ಆದರೆ ಯಾರು ಸನಾತನ ಧರ್ಮ ನಾಶ ಮಾಡಲು ಬಯಸುತ್ತಿದ್ದಾರೆ, ಅವರಿಗೆ ಪಾಠ ಕಲಿಸಬೇಕು’, ಎಂದು ಹೇಳಿದರು.