ಬಾಂಗ್ಲಾದೇಶದಲ್ಲಿನ ಹಿಂದುಗಳ ರಕ್ಷಣೆಗಾಗಿ ಕ್ರಮ ಕೈಗೊಳ್ಳಲು ಪ್ರಧಾನಮಂತ್ರಿ ಮೋದಿ ಇವರ ಜೊತೆಗೆ ಮಾತನಾಡುವೆ ! – ಸ್ವಾಮಿ ರಾಮಭದ್ರಾಚಾರ್ಯ

ಮುಂಬಯಿ – ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸರಕಾರ ಕ್ರಮ ಕೈಗೊಳ್ಳುತ್ತಿದೆ; ಆದರೆ ಇನ್ನೂ ಹೆಚ್ಚು ಕಠಿಣ ನಿಲುವು ತಾಳುವಂತೆ ಹೇಳುವೆ’, ಎಂದು ಸ್ವಾಮಿ ರಾಮ ಭದ್ರಾಚಾರ್ಯರು ಇಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುವಾಗ ಪ್ರತಿಪಾದಿಸಿದರು.

ದೇವಸ್ಥಾನಗಳ ಪುನರ್ಸ್ಥಾಪನೆಯ ಪ್ರಯತ್ನ ಮಾಡುವೆವು !

ಸ್ವಾಮಿ ರಾಮಭದ್ರಾಚಾರ್ಯರು, ‘ಎಲ್ಲಿ ಪ್ರಾಚೀನ ದೇವಸ್ಥಾನಗಳ ಸಾಕ್ಷಿಗಳು ಲಭ್ಯವಿದೆ, ಅಲ್ಲಿ ನಾವು ಅದರ ಪುನರ್ಸ್ಥಾಪನೆ ಮಾಡುವ ಪ್ರಯತ್ನ ಮಾಡುವೆವು. ಇದು ನಮಗಾಗಿ ನೂತನ ಕಲ್ಪನೆ ಅಲ್ಲ, ಇದು ಸತ್ಯದ ಆಧಾರದಲ್ಲಿ ನಮ್ಮ ಸಂಸ್ಕೃತಿ ಮತ್ತು ಧರ್ಮ ಕಾಪಾಡುವುದು ಆವಶ್ಯಕವಾಗಿದೆ. ಉತ್ತರ ಪ್ರದೇಶದಲ್ಲಿನ ಸಂಭಲದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಜನರ ಮೃತ್ಯುವಿನ ಘಟನೆಗಳು ದುರ್ಭಾಗ್ಯಪೂರ್ಣವಾಗಿವೆ. ಹಿಂದುಗಳು ಸಂಘಟಿತರಾಗಬೇಕು, ಅವರ ಧ್ರುವೀಕರಣವಾಗಬಾರದು’, ಎಂದು ಹೇಳಿದರು.