ಹಲವು ವರ್ಷಗಳಿಂದ ದೂರು ನೀಡಿದರೂ ಕ್ರಮವಿಲ್ಲ !
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿನ ವಿಧಾನ ಸಭಾ ಮಾರ್ಗದ ರಾಣಾ ಪ್ರತಾಪ ಚೌಕ ಬಳಿಯ ಒಂದು ವಾಣಿಜ್ಯ ಸಂಕೀರ್ಣದ ನೆಲಮಾಳಿಗೆಯಲ್ಲಿ ಶಿವನ ದೇಗುಲವಿದ್ದು, ಅದನ್ನು ಮುಸ್ಲಿಮರು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 30 ವರ್ಷಗಳಿಂದ ಈ ದೇವಸ್ಥಾನವನ್ನು ನೆಲಮಾಳಿಗೆಯಲ್ಲಿ ಮರೆಮಾಡಲಾಗಿದೆ, ಎಂದು ದೂರು ನೀಡಿದರೂ ಅಂದಿನ ಆಡಳಿತ ಮತ್ತು ಸರಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಸಂದರ್ಭದಲ್ಲಿ ‘ಗಜರಾಜ ಸಿಂಗ್ ಮಂದಿರ ಟ್ರಸ್ಟ್’ಗೆ ಸಂಬಂಧಿಸಿದವರು ಲಕ್ಷ್ಮಣಪುರಿ ಆಯುಕ್ತ ರೋಷನ ಜೇಕಬ್ ಅವರನ್ನು ಭೇಟಿ ಮಾಡಿದನಂತರ ಈ ಪ್ರಕರಣದ ಬಗ್ಗೆ ಆಯುಕ್ತರು ಮುತುವರ್ಜಿ ವಹಿಸಿ ಈ ಪ್ರಕರಣವನ್ನು ಜಿಲ್ಲಾಧಿಕಾರಿಗಳ ಬಳಿ ಕಳುಹಿಸಿದ್ದಾರೆ.
1. ಹಿಂದೂ ಪಕ್ಷವು, ಈ ದೇವಸ್ಥಾನ 1885 ರ ಹಿಂದಿನದು ಎಂದು ಹೇಳಿಕೊಂಡಿದೆ. ಇದನ್ನು ದಿವಂಗತ ಗಜರಾಜ್ ಸಿಂಗ್ ಅವರು ತಮ್ಮ ಸ್ವಂತ ಆದಾಯದಿಂದ ತಮ್ಮ ಜಮೀನಿನಲ್ಲಿ ನಿರ್ಮಿಸಿದ್ದರು. 1906 ರಲ್ಲಿ ನೋಂದಾಯಿತ ಮರಣಪತ್ರವನ್ನು ಮಾಡಿ ಆ ಸ್ಥಳದಲ್ಲಿ ಠಾಕುರದ್ವಾರ ಮತ್ತು ಶಿವಾಲಯವನ್ನು ನಿರ್ಮಿಸಲಾಯಿತು. 1918 ರಲ್ಲಿ, ದ್ವಾರಕಾ ಪ್ರಸಾದ ದೀಕ್ಷಿತ ಅವರಿಗೆ ಅರ್ಚಕರಾಗಿ ಜವಾಬ್ದಾರಿಯನ್ನು ನೀಡಲಾಗಿತ್ತು ಮತ್ತು ‘ಅವರ ತಲೆಮಾರಿನವರು ಇಲ್ಲಿ ಪೂಜೆಯನ್ನು ಮುಂದುವರೆಸುತ್ತಾರೆ’, ಎಂದು ಹೇಳಲಾಯಿತು. ಅವರ ತಲೆಮಾರಿನ ರಾಮಕೃಷ್ಣ ದೀಕ್ಷಿತರು 1993-94ರಲ್ಲಿ ಪೂಜೆ ಸಲ್ಲಿಸುತ್ತಿದ್ದಾಗ ರಾಜಕೀಯ ಪಕ್ಷವೊಂದಕ್ಕೆ ಸಂಬಂಧಿಸಿದ ನಾಯಕ ಡಾ. ಶಾಹಿದ್ ದೇವಸ್ಥಾನವನ್ನು ಸ್ವಾಧೀನಪಡಿಸಿಕೊಂಡು ಈ ಭೂಮಿಯ ಮೇಲೆ ಅಕ್ರಮವಾಗಿ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಿದನು.
2. ಹಿಂದೂಗಳು, ಆಗಸ್ಟ್ 14, 1994 ರಂದು ದೇವಸ್ಥಾನ ಸಮಿತಿಯು ಕೈಸರಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿತ್ತು. ಅದರಲ್ಲಿ ದೇವಸ್ಥಾನದ ಪ್ರದೇಶವನ್ನು ಧ್ವಂಸಗೊಳಿಸುವುದರ ಜೊತೆಗೆ ದೇವಸ್ಥಾನದಲ್ಲಿದ್ದ ಅಷ್ಟಧಾತುವಿನ ರಾಧಾಕೃಷ್ಣ ವಿಗ್ರಹಗಳು, ಚಿನ್ನಾಭರಣಗಳು ಮತ್ತು ಇತರ ಅನೇಕ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಹೇಳಿದ್ದಾರೆ. ಅಂದು ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ದೇವಸ್ಥಾನ ಸಮಿತಿಗೆ ಸಂಬಂಧಿಸಿದವರು ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದು ಅಂದಿನ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ವಿಚಾರಣೆ ನಡೆದಿಲ್ಲ’, ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಘಟನೆಯನ್ನು ಗಮನಿಸಿ ಕ್ರಮ ಕೈಗೊಳ್ಳಲು ಆದೇಶಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! |