ಅಮೀರ್ ಖಾನ್ ಇವರ ನಂತರ ಈಗ ನಟ ಶಾಹರುಖ್ ಖಾನ್ ಇವರ ‘ಪಠಾಣ’ ಚಲನಚಿತ್ರ ಬಹಿಷ್ಕರಿಸಲು ಕರೆ

ನಟ ಆಮಿರ್ ಖಾನ್ ಇವರ ‘ಲಾಲ ಸಿಂಹ ಚಡ್ಡಾ’ ಈ ಚಲನಚಿತ್ರದ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಿಷ್ಕರಿಸುವಂತೆ ಅಭಿಯಾನ ನಡೆಸಿದ ನಂತರ ಈ ಚಲನಚಿತ್ರಕ್ಕೆ ನೀರಸ ಬೆಂಬಲ ಸಿಕ್ಕಿದೆ. ಇದರ ನಂತರ ಈಗ ನಟ ಶಾಹರುಖ್ ಖಾನ್ ಇವರ ಮುಂಬರುವ ‘ಪಠಾಣ’ ಈ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಲಾಗಿದೆ.

ಮೇರಠ ಮಾಲ್ ಒಂದರಲ್ಲಿ ನಮಾಜ ಸಲ್ಲಿಕೆ : ಪೊಲೀಸರಿಂದ ಉತ್ತರ ಕೇಳಿದ ಪೊಲೀಸ ಮಹಾನಿರ್ದೇಶಕರು

ಲಕ್ಷ್ಮಣಪುರಿಯಲ್ಲಿ ಲುಲು ಮಾಲ್ ನಲ್ಲಿ ನಮಾಜ ಸಲ್ಲಿಸಿದ ಘಟನೆ ಬಿಸಿ ಇರುವಾಗಲೇ ಈಗ ಮೇರಠನ ಮಾಲ್ ಒಂದರಲ್ಲಿ ನಮಾಜ್ ಸಲ್ಲಿಸಲಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜುಲೈ ೨೪ ರಂದು ಪ್ರಸಾರವಾಗಿದೆ.

ಮಾಧ್ಯಮಗಳು ‘ನಿರಂಕುಶ ನ್ಯಾಯಾಲಯ’ವನ್ನು ನಡೆಸುತ್ತಿವೆ ! – ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣಾ

ಮಾಧ್ಯಮಗಳು ‘ನಿರಂಕುಶ ನ್ಯಾಯಾಲಯ (ಕಾಂಗರೂ ಕೋರ್ಟ) ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರಿಂದ ಕೆಲವೊಮ್ಮೆ ಅನುಭವಿ ನ್ಯಾಯಾಧೀಶರಿಗೂ ಕೂಡ ಯೋಗ್ಯ-ಅಯೋಗ್ಯ ನಿರ್ಧಾರಿಸಲು ಕಷ್ಟವಾಗುತ್ತದೆ.

ಅಲೀಗಡ (ಉತ್ತರಪ್ರದೇಶ)ದಲ್ಲಿ ೯ ಕೋಚಿಂಗ್‌ ಸೆಂಟರ್‌ಗಳ ಸಂಚಾಲಕರ ವಿರುದ್ಧ ಅಪರಾಧ ದಾಖಲಾಗಿದೆ.

‘ಅಗ್ನಿಪಥ’ ಯೋಜನೆಯ ವಿರುದ್ಧ ಆಂದೋಲನ ಮಾಡಲು ವಿದ್ಯಾರ್ಥಿಗಳನ್ನು ಕೆರಳಿಸಲಾಯಿತು !

ಪ್ರಯಾಗರಾಜ(ಉತ್ತರ ಪ್ರದೇಶ) ದಲ್ಲಿರುವ ಪ್ರಾಚೀನ ಶಿವಮಂದಿರದಲ್ಲಿ ಶಿವಲಿಂಗದ ಮೇಲೆ ಮೊಟ್ಟೆ ಇಟ್ಟ ದುಷ್ಕರ್ಮಿ!

ಪೈಗಂಬರರ ತಥಾಕಥಿತ ಅಪಮಾನದಿಂದ ಮುಸಲ್ಮಾನರು ಹಿಂಸಾಚಾರ ನಡೆಸುತ್ತಾರೆ, ಆದರೆ ಹಿಂದೂಗಳು ಅವರ ದೇವತೆಗಳಿಗೆ ಅಪಮಾನವನ್ನು ನ್ಯಾಯೋಚಿತ ಮಾರ್ಗದಿಂದಲೂ ವಿರೋಧಿಸುವುದಿಲ್ಲ!

ಸತ್ಯ ಏನಾದರೂ ಬಚ್ಚಿಟ್ಟು ವಾತಾವರಣ ಶಾಂತ ಮಾಡುವ ಪ್ರಯತ್ನ ನಡೆಯುತ್ತಿದ್ದರೆ ಅದು ಸ್ವೀಕಾರರ್ಹವಿಲ್ಲ ! ಹಿಂದೂ ಪಕ್ಷದ ನ್ಯಾಯವಾದಿ (ಪೂ.) ಹರಿಶಂಕರ್ ಜೈನ್

ಶಿವಲಿಂಗ ಪರಿಸರದ ಒಳಗಿನ ಭಾಗದಲ್ಲಿ ಇದೆ. ಇಲ್ಲಿಯ ವ್ಯಾಸ ಕೊಠಡಿಯ ಪರೀಕ್ಷೆ ನಡೆಸಿದರೆ ಆಗ ಇನ್ನು ಸತ್ಯ ಬೆಳಕಿಗೆ ಬರುವುದು; ಆದರೆ ಸೌಹಾರ್ದತೆ ಹೆಸರಿನಲ್ಲಿ ನಮ್ಮ ಕಾನೂನಿನ ಅಧಿಕಾರ ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಪೂ. (ನ್ಯಾಯವಾದಿ) ಜೈನ್ ಇವರು ಪ್ರಸಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಹೇಳಿದರು

ಕೊನೆಗೂ ಟ್ವಿಟರ್ ಖರೀದಿಸಿದ ಅಬ್ಜಾಧೀಶ ಇಲಾನ್ ಮಸ್ಕ್

ಟೆಸ್ಲಾ ಕಂಪನಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಮತ್ತು ಅಬ್ಜಾಧೀಶ ಇಲಾನ್ ಮಸ್ಕ್ ಇವರು ಟ್ವಿಟರ್ ನ ಹೊಸ ಮಾಲೀಕರಾಗಿದ್ದಾರೆ. ೪೪ ಅಬ್ಜ ಡಾಲರ್ಸ್ ಅಂದರೆ ೩ ಲಕ್ಷ ೩೬ ಸಾವಿರ ಕೋಟಿ ರೂಪಾಯಿಯಲ್ಲಿ ಖರೀದಿಯ ಒಪ್ಪಂದ ಆಗಿದೆ. ಮಸ್ಕ್ ಇವರು ಟ್ವಿಟರ್ ನ ಪ್ರತಿಯೊಂದು ಶೇರ್ ಗಾಗಿ ತಲಾ ೫೪.೨೦ ಡಾಲರ್ (೪ ಸಾವಿರ ೧೪೮ ರೂಪಾಯಿ) ನೀಡಬೇಕಾಗುತ್ತದೆ.

ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರ ಅಸ್ಸಾಂ ಪೊಲೀಸರಿಂದ ಬಂಧನ

ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರನ್ನು ಅಸ್ಸಾಮಿನ ಪೊಲೀಸರು ಏಪ್ರಿಲ್‌ ೨೦ರ ರಾತ್ರಿ ಇಲ್ಲಿಂದ ಬಂಧಿಸಿದಿದ್ದಾರೆ. ಅವರನ್ನು ಅಸ್ಸಾಮಿಗೆ ಕರೆದೊಯ್ಯಲಾಗುವುದು. ಮೇವಾಣಿಯವರ ವಿರುದ್ಧ ಅಸ್ಸಾಮಿನಲ್ಲಿ ಅನೇಕ ಅಪರಾಧಗಳು ದಾಖಲಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ.

ಆಜಾದ ಮೈದಾನ ಗಲಭೆ ಕಾರಣವಾದ ರಝಾ ಅಕಾಡೆಮಿಯ ‘ಇಫ್ತಾರ ಕೂಟ’ ದಲ್ಲಿ ಮುಂಬಯಿ ಪೊಲೀಸ ಕಮಿಶನರ ಸಂಜಯ ಪಾಂಡೆ ಉಪಸ್ಥಿತಿ!

ರಝಾ ಅಕಾಡೆಮಿ ನಿರಂತರವಾಗಿ ದೇಶವಿರೋಧಿ ನಿಲುವು ತಳೆದಿದೆ. ಒಂದುಕಡೆ, ರಾಜ್ಯ ಗೃಹ ಸಚಿವ ದಿಲೀಪ ವಲ್ಸೆ ಪಾಟೀಲ ಅವರು ಶಾಸಕಾಂಗದಲ್ಲಿ ರಜಾ ಅಕಾಡೆಮಿಯನ್ನು ನಿಷೇಧಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳುತ್ತಾರೆ; ಆದರೆ ಮತ್ತೊಂದೆಡೆ ರಝಾ ಅಕಡೆಮಿಯ ‘ಇಫ್ತಾರ ಕೂಟ’ ದಲ್ಲಿ ಅವರ ಅಧಿಕಾರಿಗಳು ಹಾಜರಾಗಿರುತ್ತಾರೆ.

ಪುಟಿನರನ್ನು ತಡೆಯದಿದ್ದರೆ ಯುರೋಪ ನಾಶವಾಗುವುದು ! – ಉಕ್ರೇನಿನ ರಾಷ್ಟ್ರಾಧ್ಯಕ್ಷ ಝೆಲೆಂಸ್ಕೀ

ಉಕ್ರೇನ ಮತ್ತು ರಷ್ಯಾದ ನಡುವಿನ ಯುದ್ಧದ ೧೦ನೇ ದಿನದಂದು ರಷ್ಯಾವು ಉಕ್ರೇನಿನ ರಾಷ್ಟ್ರಪತಿ ಭವನವನ್ನು ಗುರಿಯಾಗಿಸಿ ಕ್ಷಿಪಣಿಯನ್ನು ಹಾಕಿದೆ. ಆದರೆ ಅದು ಭವನದ ಸ್ವಲ್ಪ ಅಂತರದಲ್ಲಿ ಬಿದ್ದಿದೆ. ಇದರಿಂದ ಉಕ್ರೇನ ‘ರಷ್ಯಾದ ಗುರಿ ಇನ್ನೊಮ್ಮೆ ತಪ್ಪಿತು’ ಎಂದು ಹೇಳಿದೆ.