ಭಾರತದಲ್ಲಿಯೂ ಕೂಡ ಇಸ್ರೈಲ್‌ನಂತೆ ಪ್ರತಿಯೊಬ್ಬ ಯುವಕನಿಗೆ ಸೈನಿಕ ಶಿಕ್ಷಣ ಅನಿವಾರ್ಯ ಮಾಡಬೇಕು ! – ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ

ಇಸ್ರೈಲ್ ರೈತರಿಂದ ಅಧಿಕಾರಿಗಳವರೆಗೆ ಪ್ರತಿಯೊಬ್ಬ ಮಕ್ಕಳಿಗೂ ಸೈನಿಕ ಶಿಕ್ಷಣ ಪಡೆಯುವುದು ಅನಿವಾರ್ಯ ಮಾಡಿರುವ ದೇಶವಾಗಿದೆ. ಹೀಗೆ ಏನಾದರೂ ಭಾರತದಲ್ಲಿ ಮಾಡಿದರೆ ಯುವಕರಲ್ಲಿ ಮೊದಲಿನಿಂದಲೇ ಇರುವ ರಾಷ್ಟ್ರ ಪ್ರೇಮ ಇನ್ನೂ ಹೊಳೆಯುತ್ತದೆ.

ಸ್ವಾತಂತ್ರ್ಯದ ಸ್ಮೃತಿ ದಿನದ ಪ್ರಯುಕ್ತ ರಾಷ್ಟ್ರ ಹಿತಕ್ಕಾಗಿ ಸಮರ್ಪಣೆಯಿಂದ ಕಾರ್ಯ ಮಾಡಿ !

ಭಾರತಮಾತೆಯ ರಕ್ಷಣೆಗಾಗಿ ಬಲಿದಾನ ನೀಡಿರುವ ಕ್ರಾಂತಿಕಾರಿಗಳು ಮತ್ತು ರಾಷ್ಟ್ರಭಕ್ತರ ಇಂದು ಸ್ಮೃತಿ ದಿನವಾಗಿದೆ. ಅವರ ಸ್ಮೃತಿ ನಾವು ಎಂದೂ ಮರೆಯಬಾರದು. ವಿಭಜನೆಯ ಸಮಯದಲ್ಲಿ ಹಿಂದೂಗಳು ಮತ್ತು ಭಾರತೀಯರು ಅನೇಕ ಕಷ್ಟಗಳನ್ನು ಸಹಿಸಿದ್ದಾರೆ. ಆದ್ದರಿಂದಲೇ ಇಂದು ಭಾರತ ಸಂಪೂರ್ಣ ವಿಶ್ವದಲ್ಲಿ ಪ್ರಸಿದ್ಧವಾಗುತ್ತಿದೆ.

ಸೇಲಂ (ತಮಿಳುನಾಡು) ನಗರದಲ್ಲಿ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದ ಜಾಗದಿಂದ ಅತಿಕ್ರಮಣ ತೆರವುಗೊಳಿಸಿ ! – ಮದ್ರಾಸ್ ಉಚ್ಚ ನ್ಯಾಯಾಲಯ

ಸಾಲೆಮ ಇಲ್ಲಿಯ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದ ಭೂಮಿಯ ಮೇಲೆನ ಅತಿಕ್ರಮಣ ತೆರವುಗೊಳಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ತಹಸಿನದಾರರಿಗೆ ಆದೇಶ ನೀಡಿದೆ. ಸಾಲೆಮದಲ್ಲಿ ಕಣ್ಣನಕುರಿಚಿಯಲ್ಲಿ ಎ ರಾಧಾಕೃಷ್ಣನ ದೇವಸ್ಥಾನದ ಸಂಪತ್ತಿಯ ಮೇಲೆ ಅತಿಕ್ರಮಣದ ವಿರುದ್ಧ ಅರ್ಜಿ ದಾಖಲಿಸಲಾಗಿತ್ತು.

ಅಮೀರ್ ಖಾನ್ ಇವರ ನಂತರ ಈಗ ನಟ ಶಾಹರುಖ್ ಖಾನ್ ಇವರ ‘ಪಠಾಣ’ ಚಲನಚಿತ್ರ ಬಹಿಷ್ಕರಿಸಲು ಕರೆ

ನಟ ಆಮಿರ್ ಖಾನ್ ಇವರ ‘ಲಾಲ ಸಿಂಹ ಚಡ್ಡಾ’ ಈ ಚಲನಚಿತ್ರದ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಿಷ್ಕರಿಸುವಂತೆ ಅಭಿಯಾನ ನಡೆಸಿದ ನಂತರ ಈ ಚಲನಚಿತ್ರಕ್ಕೆ ನೀರಸ ಬೆಂಬಲ ಸಿಕ್ಕಿದೆ. ಇದರ ನಂತರ ಈಗ ನಟ ಶಾಹರುಖ್ ಖಾನ್ ಇವರ ಮುಂಬರುವ ‘ಪಠಾಣ’ ಈ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಹಾಕಲಾಗಿರುವ ಟಿಪ್ಪು ಸುಲ್ತಾನ್ ಫಲಕ ಹರಿಯಲಾಗಿದೆ !

ಇಲ್ಲಿ ಕೆಲವರು ಟಿಪ್ಪು ಸುಲ್ತಾನ್‌ನ ಹಾಕಿದ್ದ ಫಲಕ ಹರೆದು ಹಾಕಿದ್ದಾರೆ. ಈ ಫಲಕ ಕಾಂಗ್ರೆಸ್ ನಿಂದ ಹಾಕಲಾಗಿತ್ತು. ‘ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತನ ಬದಲು ಟಿಪ್ಪು ಸುಲ್ತಾನ್ ಇವನ ಫಲಕ ಏಕೆ ?’ ಎಂದು ಆಕ್ಷೇಪಿಸುತ್ತಾ ಫಲಕ ಹರಿಯಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಈಗ ಬಲವಂತವಾಗಿ ಸಾಮೂಹಿಕ ಮತಾಂತರ ಮಾಡಿದರೆ ೧೦ ವರ್ಷದ ಜೈಲು ಶಿಕ್ಷೆ

ಭಾಜಪ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರದ ವಿರುದ್ಧ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ. ಈಗ ಈ ಕಾನೂನಿನ ಪ್ರಕಾರ ಬಲವಂತವಾಗಿ ಮತಾಂತರಗೊಳಿಸಿದರೆ ೧೦ ವರ್ಷ ಜೈಲು ಶಿಕ್ಷೆ ಆಗಬಹುದು. ಈ ಮೊದಲು ಮತಾಂತರ ಗೊಳಿಸಿದರೆ ೭ ವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು.

ಮಂಗಳೂರಿನ ಕ್ರೈಸ್ತ ಮಿಶನರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳ ಕೈಯಲ್ಲಿರುವ ರಾಖಿಗಳನ್ನು ತೆಗೆದು ಕಸದ ಬುಟ್ಟಿಗೆ ಎಸೆದರು !

ಕ್ರೈಸ್ತ ಮಿಶನರಿ ಶಾಲೆಗಳಲ್ಲಿ ಹಿಂದೂಗಳ ಹಬ್ಬ ಮತ್ತು ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಇದೇನು ಹೊಸ ಘಟನೆ ಅಲ್ಲ. ಆದ್ದರಿಂದ ಹಿಂದೂಗಳ ಮೇಲೆ ನಡೆಯುವ ಈ ರೀತಿಯ ದಬ್ಬಾಳಿಕೆಯ ವಿರುದ್ಧ ಇನ್ನೂ ಕಾನೂನು ಜಾರಿ ಮಾಡುವುದು ಅನಿವಾರ್ಯ !

ಜಾಲೋರ್ (ರಾಜಸ್ಥಾನ) ಇಲ್ಲಿ ಕೇಸರಿ ಧ್ವಜ ಹರಿದು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ನೀಡುವ ಮೂರು ಮತಾಂಧರ ಬಂಧನ

ಇಲ್ಲಿಯ ಜಿಲ್ಲಾಧಿಕಾರಿ ಕಾರ್ಯಾಲಯದ ಹತ್ತಿರ ಮತಾಂಧರು ಕೇಸರಿ ಧ್ವಜ ಹರಿದುಹಾಕಿ ‘ಪಾಕಿಸ್ತಾನ ಜಿಂದಾಬಾದ’ ಎಂಬ ಘೋಷಣೆ ನೀಡಿದರು. ಅದರ ನಂತರ ಪೊಲೀಸರು ಕ್ರಮ ಕೈಗೊಂಡು ಅರ್ಮಾನ್ ಖಾನ್, ಅಸ್ಲಾಂ ಮತ್ತು ಮನ್ಸೂರ್ ಇವರನ್ನು ಬಂಧಿಸಿದ್ದಾರೆ.

ಕುಷಿನಗರ (ಉತ್ತರಪ್ರದೇಶ) ಇಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿರುವ ಸಲ್ಮಾನ್‌ನ ಬಂಧನ

ಕುಶಿನಗರ ಜಿಲ್ಲೆಯ ಬೆಂದುಪಾರ್ ಮುಸ್ತಕಿಲ್ ಈ ಗ್ರಾಮದ ಸಲ್ಮಾನ್ ಎಂಬ ಯುವಕ ಅವನ ಮನೆಯ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿದ್ದನು. ಈ ಘಟನೆಯ ವಿಡಿಯೋ ಅವನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದನು. ಈ ಮಾಹಿತಿ ಸಿಗುತ್ತಲೇ ಪೊಲೀಸರು ಅವನನ್ನು ಬಂಧಿಸಿ ಧ್ವಜ ವಶಪಡಿಸಿಕೊಂಡಿದ್ದಾರೆ.

ಸರಕಾರಿ ನೌಕರಿ ಪಡೆಯುವುದಕ್ಕಾಗಿ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ !

ಸರಕಾರಿ ನೌಕರಿ ಪಡೆಯಲು ಯುವಕರು ಲಂಚ ನೀಡಬೇಕಾಗುತ್ತದೆ ಹಾಗೂ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ, ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ. ಪ್ರಿಯಾಂಕ ಖರ್ಗೆ ಇವರು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಇವರ ಮಗ ಆಗಿದ್ದಾರೆ.