ಸರಕಾರಿ ನೌಕರಿ ಪಡೆಯುವುದಕ್ಕಾಗಿ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ !

ನೇಮಕಾತಿ ಪರೀಕ್ಷೆ ಹಗರಣದಲ್ಲಿ ಕರ್ನಟಕ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆರೋಪ

ಬೆಂಗಳೂರು – ಸರಕಾರಿ ನೌಕರಿ ಪಡೆಯಲು ಯುವಕರು ಲಂಚ ನೀಡಬೇಕಾಗುತ್ತದೆ ಹಾಗೂ ಯುವತಿಯರಿಗೆ ಹಾಸಿಗೆ ಹಂಚಿಕೊಳ್ಳಬೇಕಾಗುತ್ತದೆ, ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ. ಪ್ರಿಯಾಂಕ ಖರ್ಗೆ ಇವರು ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಇವರ ಮಗ ಆಗಿದ್ದಾರೆ. ‘ಕರ್ನಾಟಕ ಪಾವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್’ನಲ್ಲಿ ನೇಮಕಾತಿ ಹಗರಣದ ಬಗ್ಗೆ ಅವರು ಮಾತನಾಡುತ್ತಿದ್ದರು.

‘ಕರ್ನಾಟಕ ಪಾವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್’ನಲ್ಲಿ ಒಟ್ಟು ೧ ಸಾವಿರ ೪೯೩ ಸ್ಥಾನಕ್ಕೆ ನೇಮಕಾತಿ ಪರೀಕ್ಷೆ ತೆಗೆದುಕೊಳ್ಳಲಾಗಿತ್ತು. ಗೋಕಾಕ್ ಇಲ್ಲಿ ಪರೀಕ್ಷೆಯ ಸಮಯದಲ್ಲಿ ಒಬ್ಬ ವಿದ್ಯಾರ್ಥಿ ಕಾಪಿ ಮಾಡುತ್ತಿರುವಾಗ ಅವನನ್ನು ಬಂದಿಸಲಾಗಿದೆ. ಅದರ ನಂತರ ಈ ಪರೀಕ್ಷೆಯಲ್ಲಿ ದೊಡ್ಡ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಇದರ ಬಗ್ಗೆ ಖರ್ಗೆ ಅವರು ರಾಜ್ಯದ ಭಾಜಪ ಸರಕಾರವನ್ನು ಟೀಕಿಸಿದ್ದಾರೆ, ಹಾಗೂ ಈ ಹಗರಣದ ನ್ಯಾಯಾಂಗ ವಿಚಾರಣೆ ಆಗಬೇಕು ಮತ್ತು ಒಂದು ವಿಶೇಷ ಸಮಿತಿ ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.