ಸ್ವಾತಂತ್ರ್ಯದ ಸ್ಮೃತಿ ದಿನದ ಪ್ರಯುಕ್ತ ರಾಷ್ಟ್ರ ಹಿತಕ್ಕಾಗಿ ಸಮರ್ಪಣೆಯಿಂದ ಕಾರ್ಯ ಮಾಡಿ !

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಕರೆ

ಮುಂಬಯಿ – ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ಸ್ವಾತಂತ್ರ್ಯ ದಿನದ ಪ್ರಯುಕ್ತ ಹಾರ್ದಿಕ ಶುಭಾಶಯಗಳು !
ಭಾರತಮಾತೆಯ ರಕ್ಷಣೆಗಾಗಿ ಬಲಿದಾನ ನೀಡಿರುವ ಕ್ರಾಂತಿಕಾರಿಗಳು ಮತ್ತು ರಾಷ್ಟ್ರಭಕ್ತರ ಇಂದು ಸ್ಮೃತಿ ದಿನವಾಗಿದೆ. ಅವರ ಸ್ಮೃತಿ ನಾವು ಎಂದೂ ಮರೆಯಬಾರದು. ವಿಭಜನೆಯ ಸಮಯದಲ್ಲಿ ಹಿಂದೂಗಳು ಮತ್ತು ಭಾರತೀಯರು ಅನೇಕ ಕಷ್ಟಗಳನ್ನು ಸಹಿಸಿದ್ದಾರೆ. ಆದ್ದರಿಂದಲೇ ಇಂದು ಭಾರತ ಸಂಪೂರ್ಣ ವಿಶ್ವದಲ್ಲಿ ಪ್ರಸಿದ್ಧವಾಗುತ್ತಿದೆ. ಸ್ವಾತಂತ್ರ್ಯದಿನದ ಪ್ರಯುಕ್ತ ನಾವೆಲ್ಲರೂ, ಭಾರತದ ಸ್ವಾತಂತ್ರ್ಯತೆ ಮತ್ತು ಅಖಂಡತೆ ಕಾಪಾಡುವೆವು ಎಂದು ಪಣ ತೊಡುವ. ರಾಷ್ಟ್ರ ಮತ್ತು ಸಮಾಜ ಇದರ ಹಿತಕ್ಕಾಗಿ ಕಾರ್ಯ ಮಾಡುವುದು ಇದು ನಮ್ಮ ಕರ್ತವ್ಯವಾಗಿದೆ. ಸ್ವಾತಂತ್ರ್ಯದ ಸ್ಮೃತಿ ದಿನದ ಪ್ರಯುಕ್ತ ರಾಷ್ಟ್ರ ಹಿತಕ್ಕಾಗಿ ಸಮರ್ಪಿತರಾಗಿ ಕಾರ್ಯ ಮಾಡಿರಿ ಎಂದು ಹಿಂದೂ ಜನ ಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಇವರು ಕರೆ ನೀಡಿದರು.