ಅಮೀರ್ ಖಾನ್ ಇವರ ನಂತರ ಈಗ ನಟ ಶಾಹರುಖ್ ಖಾನ್ ಇವರ ‘ಪಠಾಣ’ ಚಲನಚಿತ್ರ ಬಹಿಷ್ಕರಿಸಲು ಕರೆ

ಟ್ವಿಟರ್‌ನಲ್ಲಿ ‘#BoycottPathan’ ಈ ‘ಹ್ಯಾಷ್ ಟ್ಯಾಗ್ ಟ್ರೆಂಡ್’ !

(‘ಹ್ಯಾಷ ಟ್ಯಾಗ್ ಟ್ರೆಂಡ್’ ಎಂದರೆ ಒಂದೇ ವಿಷಯದ ಬಗ್ಗೆ ಚರ್ಚೆ ನಡೆಸುವುದು)

ನವದೆಹಲಿ – ನಟ ಆಮಿರ್ ಖಾನ್ ಇವರ ‘ಲಾಲ ಸಿಂಹ ಚಡ್ಡಾ’ ಈ ಚಲನಚಿತ್ರದ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಬಹಿಷ್ಕರಿಸುವಂತೆ ಅಭಿಯಾನ ನಡೆಸಿದ ನಂತರ ಈ ಚಲನಚಿತ್ರಕ್ಕೆ ನೀರಸ ಬೆಂಬಲ ಸಿಕ್ಕಿದೆ. ಇದರ ನಂತರ ಈಗ ನಟ ಶಾಹರುಖ್ ಖಾನ್ ಇವರ ಮುಂಬರುವ ‘ಪಠಾಣ’ ಈ ಚಲನಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಲಾಗಿದೆ. ಟ್ವಿಟರ್‌ನಲ್ಲಿ ‘#BoycottPathan’ ಈ ‘ಹ್ಯಾಷ್ ಟ್ಯಾಗ್ ಟ್ರೆಂಡ್’ ನಡೆಸಲಾಯಿತು; ಆದರೆ ಇದನ್ನು ಬಹಿಷ್ಕರಿಸುವ ಹಿಂದಿನ ಕಾರಣ ತಿಳಿದು ಬಂದಿಲ್ಲ. ಈ ಚಲನಚಿತ್ರ ಜನವರಿ ೨೫, ೨೦೨೩ ರಂದು ಬಿಡುಗಡೆಗೊಳ್ಳಲಿದೆ.

ಟ್ವಿಟರ್‌ನಲ್ಲಿ ಕೆಲವರು, ಈ ಚಲನಚಿತ್ರದ ನಟಿ ದೀಪಿಕಾ ಪಡುಕೋಣೆ ಇವರ ಪಾತ್ರದಿಂದ ಬಹಿಷ್ಕಾರ ಮಾಡಲಾಗುತ್ತಿದೆ. ಆಕೆ ಈ ಮೊದಲು ಜೆ.ಎನ್.ಯು.ನಲ್ಲಿ ಕಮ್ಯುನಿಸ್ಟ್ ವಿಚಾರಧಾರೆಯ ವಿದ್ಯಾರ್ಥಿ ಸಂಘಟನೆಯ ಆಂದೋಲನಕ್ಕೆ ಬೆಂಬಲ ನೀಡಿದ್ದರು ಎಂದು ಹೇಳಿದರು.