ಸೇಲಂ (ತಮಿಳುನಾಡು) ನಗರದಲ್ಲಿ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದ ಜಾಗದಿಂದ ಅತಿಕ್ರಮಣ ತೆರವುಗೊಳಿಸಿ ! – ಮದ್ರಾಸ್ ಉಚ್ಚ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ಸೇಲಂ ಇಲ್ಲಿಯ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದ ಭೂಮಿಯ ಮೇಲೆನ ಅತಿಕ್ರಮಣ ತೆರವುಗೊಳಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ತಹಸಿನದಾರರಿಗೆ ಆದೇಶ ನೀಡಿದೆ. ಸಾಲೆಮದಲ್ಲಿ ಕಣ್ಣನಕುರಿಚಿಯಲ್ಲಿ ಎ ರಾಧಾಕೃಷ್ಣನ ದೇವಸ್ಥಾನದ ಸಂಪತ್ತಿಯ ಮೇಲೆ ಅತಿಕ್ರಮಣದ ವಿರುದ್ಧ ಅರ್ಜಿ ದಾಖಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ಸಮಯದಲ್ಲಿ ನ್ಯಾಯಾಲಯವು ಈ ಆದೇಶ ನೀಡಿದೆ. ಇದರ ಜೊತೆಗೆ ತಹಸೀಲದಾರರಿಗೆ ಸಂಬಂಧಪಟ್ಟ ಭೂಮಿಯ ಸಮೀಕ್ಷೆ ನಡೆಸಿ ಅದರ ವರದಿಯನ್ನು ಎರಡು ತಿಂಗಳ ಒಳಗೆ ಮಂಡಿಸಲು ಸಹ ಆದೇಶ ನೀಡಿದೆ.