ಭಾರತದಲ್ಲಿಯೂ ಕೂಡ ಇಸ್ರೈಲ್‌ನಂತೆ ಪ್ರತಿಯೊಬ್ಬ ಯುವಕನಿಗೆ ಸೈನಿಕ ಶಿಕ್ಷಣ ಅನಿವಾರ್ಯ ಮಾಡಬೇಕು ! – ಕೇಂದ್ರ ರಾಜ್ಯ ಸಚಿವ ಕೌಶಲ್ ಕಿಶೋರ

ನವ ದೆಹಲಿ – ಇಸ್ರೈಲ್ ರೈತರಿಂದ ಅಧಿಕಾರಿಗಳವರೆಗೆ ಪ್ರತಿಯೊಬ್ಬ ಮಕ್ಕಳಿಗೂ ಸೈನಿಕ ಶಿಕ್ಷಣ ಪಡೆಯುವುದು ಅನಿವಾರ್ಯ ಮಾಡಿರುವ ದೇಶವಾಗಿದೆ. ಹೀಗೆ ಏನಾದರೂ ಭಾರತದಲ್ಲಿ ಮಾಡಿದರೆ ಯುವಕರಲ್ಲಿ ಮೊದಲಿನಿಂದಲೇ ಇರುವ ರಾಷ್ಟ್ರ ಪ್ರೇಮ ಇನ್ನೂ ಹೊಳೆಯುತ್ತದೆ. ಇದರಿಂದಲೇ ಭಯೋತ್ಪಾದಕರು ಮತ್ತು ಕೋಮುವಾದದ ಕುರಿತು ಯುವಕರಿಗೆ ದಾರಿ ತಪ್ಪಿಸುವುದು ತಡೆಯಬಹುದು. ಯಾವುದಾದರೊಂದು ದೇಶದ ಒಳ್ಳೆಯ ವಿಷಯ ಸ್ವೀಕರಿಸುವಲ್ಲಿ ಅಡಚಣೆ ಇದೆಯೇ ?, ಎಂದು ಕೇಂದ್ರೀಯ ರಾಜ್ಯ ಸಚಿವ ಕೌಶಲ್ಯ ಕಿಶೋರ ಇವರು ಪ್ರಶ್ನೆ ಕೇಳಿದರು.

ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ‘ಹರ ಘರ್ ತಿರಂಗ’ ಅಭಿಯಾನ ನಡೆಸಲಾಗುತ್ತಿದೆ. ಆದರೆ ಕೆಲವು ಜನರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರ ಬಗ್ಗೆ ಮಾತನಾಡುವಾಗ, ರಾಷ್ಟ್ರಧ್ವಜಕ್ಕೆ ವಿರೋಧ ವ್ಯಕ್ತಪಡಿಸುವವರು ರಾಷ್ಟ್ರಪ್ರೇಮಿಗಳು ಆಗಿರಲು ಸಾಧ್ಯವಿಲ್ಲ. ಈ ಮೊದಲು ರಾಷ್ಟ್ರಗೀತೆ (ಜನ ಗಣ ಮನ) ಮತ್ತು ರಾಷ್ಟ್ರೀಯ ಗೀತೆ (ವಂದೇ ಮಾತರಂ) ಇದಕ್ಕೂ ವಿರೋಧ ವ್ಯಕ್ತವಾಗಿತ್ತು. ಜನರಿಗೆ ಎಲ್ಲವೂ ತಿಳಿದಿದೆ ಅವರು ಈ ವಿಷಯವಾಗಿ ಜಾಗರೂಕರಾಗಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇಂದ್ರೀಯ ರಾಜ್ಯ ಸಚಿವರ ಈ ಯೋಚನೆ ಅವರ ಸರಕಾರದ ಮುಂದೆ ಮಂಡಿಸಿ ಅದರ ಮೇಲೆ ನಿರ್ಣಯ ತೆಗೆದುಕೊಳ್ಳಬೇಕೆಂದು ರಾಷ್ಟ್ರಪ್ರೇಮಿ ಜನರಿಗೆ ಅನಿಸುತ್ತದೆ !