ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಹಾಕಲಾಗಿರುವ ಟಿಪ್ಪು ಸುಲ್ತಾನ್ ಫಲಕ ಹರಿಯಲಾಗಿದೆ !

  • ವಿಶ್ವ ಹಿಂದೂ ಪರಿಷತ್ತಿನ ಮೇಲೆ ಕಾಂಗ್ರೆಸ್ ಆರೋಪ

  • ಪುನೀತ್ ಕೆರೆಹಳ್ಳಿ ಬಂಧನ

  • ಶಿವಮೊಗ್ಗದಲ್ಲಿನ ‘ಮಾಲ್’ನಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಇವರ ಛಾಯಾಚಿತ್ರ ತೆಗೆದು ಹಾಕಿದ್ದರಿಂದ ಆಗಿದ್ದ ವಿವಾದದ ಪರಿಣಾಮ ಆಗಿರುವ ಸಾಧ್ಯತೆ !

(ಮಾಲ್ ಎಂದರೆ ದೊಡ್ಡ ವ್ಯಾಪಾರಿ ಮಳಿಗೆ)

ಬೆಂಗಳೂರು – ಇಲ್ಲಿ ಕೆಲವರು ಟಿಪ್ಪು ಸುಲ್ತಾನ್‌ನ ಹಾಕಿದ್ದ ಫಲಕ ಹರೆದು ಹಾಕಿದ್ದಾರೆ. ಈ ಫಲಕ ಕಾಂಗ್ರೆಸ್ ನಿಂದ ಹಾಕಲಾಗಿತ್ತು. ‘ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತನ ಬದಲು ಟಿಪ್ಪು ಸುಲ್ತಾನ್ ಇವನ ಫಲಕ ಏಕೆ ?’ ಎಂದು ಆಕ್ಷೇಪಿಸುತ್ತಾ ಫಲಕ ಹರಿಯಲಾಗಿದೆ. ಕಾಂಗ್ರೆಸ್, ‘ಈ ಫಲಕ ವಿಶ್ವ ಹಿಂದೂ ಪರಿಷತ್ತಿನಿಂದ ಹರಿಯಲಾಗಿದೆ ಎಂಬ ಆರೋಪ ಮಾಡಿದೆ; ಆದರೆ ಈ ಕುರಿತು ವಿಶ್ವ ಹಿಂದೂ ಪರಿಷತ್ತಿನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ವಿವಾದವು ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಛಾಯಾಚಿತ್ರ ತೆರೆವುಗೊಳಿಸಿರುವುದರಿಂದ ನಡೆದಿದೆ ಎಂದು ಹೇಳಲಾಗುತ್ತಿದೆ.

ಶಿವಮೊಗ್ಗದಲ್ಲಿನ ಶಿವಪ್ಪ ನಾಯಕ ಈ ‘ಮಾಲ್’ನ ವ್ಯವಸ್ಥಾಪಕರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಮಾಲ್‌ನಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ ಇವರ ಛಾಯಾಚಿತ್ರ ಹಾಕಿದ್ದರು. ಇದರ ವಿರುದ್ಧ ಕೆಲವು ಜನರು ಅಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯನ್ನು ವಿರೋಧಿಸಲು ಹಿಂದೂ ಸಂಘಟನೆಯ ಕಾರ್ಯಕರ್ತರು ಅಲ್ಲಿ ತಲುಪಿದರು ಮತ್ತು ಸ್ವಾತಂತ್ರ್ಯ ವೀರ ಸಾವರ್ಕರ್ ಇವರ ಚಿತ್ರ ಹಾಗೆ ಇಡಲು ಹೇಳಿದರು; ಆದರೆ ಛಾಯಾಚಿತ್ರ ತೆರವುಗೊಳಿಸುವಂತೆ ಅಲ್ಲಿ ಪ್ರತಿಭಟನೆ ನಡೆಸಿದರು. ಆದ್ದರಿಂದ ವ್ಯವಸ್ಥಾಪಕರು ಛಾಯಾ ಚಿತ್ರವನ್ನು ಮುಚ್ಚಿದರು. ಇದಕ್ಕೆ ಹಿಂದೂ ಸಂಘಟನೆಗಳು ವಿರೋಧಿಸಿ ಚಿತ್ರ ಮತ್ತೆ ಮೂಲ ಸ್ವರೂಪದಲ್ಲಿ ಇಡಲು ಪ್ರತಿಭಟನೆ ನಡೆಸಿದರು.

(ಸೌಜನ್ಯ : News18 Kannada)