ಹಿಮಾಚಲ ಪ್ರದೇಶದಲ್ಲಿ ಈಗ ಬಲವಂತವಾಗಿ ಸಾಮೂಹಿಕ ಮತಾಂತರ ಮಾಡಿದರೆ ೧೦ ವರ್ಷದ ಜೈಲು ಶಿಕ್ಷೆ

ಶಿಮ್ಲಾ (ಹಿಮಾಚಲ ಪ್ರದೇಶ) – ಭಾಜಪ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರದ ವಿರುದ್ಧ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ. ಈಗ ಈ ಕಾನೂನಿನ ಪ್ರಕಾರ ಬಲವಂತವಾಗಿ ಮತಾಂತರಗೊಳಿಸಿದರೆ ೧೦ ವರ್ಷ ಜೈಲು ಶಿಕ್ಷೆ ಆಗಬಹುದು. ಈ ಮೊದಲು ಮತಾಂತರ ಗೊಳಿಸಿದರೆ ೭ ವರ್ಷ ಶಿಕ್ಷೆ ವಿಧಿಸಲಾಗುತ್ತಿತ್ತು. ೧೮ ತಿಂಗಳ ಮೊದಲು ‘ಹಿಮಾಚಲ್ ಪ್ರದೇಶ ಧರ್ಮ ಸ್ವಾತಂತ್ರ್ಯ ಕಾನೂನು, ೨೦೧೯’ ಅನುಮೋದಿಸಿತ್ತು. ಅದರಲ್ಲಿ ಈಗ ಸುಧಾರಣೆ ಮಾಡಿ ಶಿಕ್ಷೆಯ ಕಾಲಾವಧಿ ಹೆಚ್ಚಿಸಲಾಗಿದೆ. ಈ ಕಾನೂನಿನಲ್ಲಿ ಈಗ ಸಾಮೂಹಿಕ ಮತಾಂತರದ ವ್ಯಾಖ್ಯೆ ಕೂಡ ನೀಡಲಾಗಿದೆ. ಇದರಲ್ಲಿ ‘ಒಂದು ವೇಳೆ ವ್ಯಕ್ತಿಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಜನರ ಧರ್ಮ ಒಂದೇ ಸಲ ಬದಲಾಯಿಸಿದರೆ, ಆಗ ಅದು ಸಾಮೂಹಿಕ ಮತಾಂತರದ ವ್ಯಾಪ್ತಿಗೆ ಬರುತ್ತದೆ ಮತ್ತು ಸಂಬಂಧಪಟ್ಟವರ ಮೇಲೆ ಕಾನೂನಿನ ಅಡಿಯಲ್ಲಿ ಮೊಕದ್ದಮೆ ನಡೆಸಬಹುದು’, ಎಂದು ನಮೂದಿಸಲಾಗಿದೆ.

ಸಂಪಾದಕೀಯ ನಿಲುವು

ಬಲವಂತವಾಗಿ ಮತಾಂತರ ನಡೆಸಿದರೆ ಶಿಕ್ಷೆ ಆಗುವುದು ಇದು ಯೋಗ್ಯವಾದರೂ ಮೂಲತಃ ಮತಾಂತರ ಮಾಡಲು ಆಗಲೇಬಾರದು, ಇದಕ್ಕಾಗಿ ಕಠಿಣ ಕಾನೂನು ಜಾರಿ ಮಾಡುವುದು ಅವಶ್ಯಕವಾಗಿದೆ ಮತ್ತು ಅದು ಕೇಂದ್ರ ಸರಕಾರವೇ ಮಾಡುವುದು ಅವಶ್ಯಕವಾಗಿದೆ !