ಮಂಗಳೂರಿನ ಕ್ರೈಸ್ತ ಮಿಶನರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳ ಕೈಯಲ್ಲಿರುವ ರಾಖಿಗಳನ್ನು ತೆಗೆದು ಕಸದ ಬುಟ್ಟಿಗೆ ಎಸೆದರು !

ಮಂಗಳೂರು – ಇಲ್ಲಿಯ ಕಾಟಿಪಳ್ಳ ಪ್ರದೇಶದಲ್ಲಿರುವ ಇನ್ಫೆಂಟ್ ಮೇರಿ ಈ ಕ್ರೈಸ್ತ ಮಿಶನರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳ ಕೈಯಲ್ಲಿರುವ ರಾಖಿಗಳನ್ನು ತೆಗೆದು ಎಸೆದಿರುವ ಪ್ರಕರಣವನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಪೋಷಕರು ಶಾಲೆಗೆ ವಿರೋಧಿಸಿದ್ದಾರೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹೋಗಿ ಶಾಲಾ ಆಡಳಿತಕ್ಕೆ ಪ್ರಶ್ನೆ ಕೇಳಿದ್ದಾರೆ. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಶಾಲೆಗೆ ತಲುಪಿ ಪ್ರಕರಣ ಬಗೆಹರಿಸಲು ಪ್ರಯತ್ನಿಸಿದ್ದಾರೆ.

(ಸೌಜನ್ಯ : News Karnataka)

೧. ಪೋಷಕರು, ಶಾಲೆಯಲ್ಲಿ ‘ಫ್ರೆಂಡ್ ಶಿಪ್ ಡೇ’ (ಸ್ನೇಹ ದಿನ) ಬಗ್ಗೆ ಆಕ್ಷೇಪ ಇಲ್ಲದಿದ್ದರೆ, ರಕ್ಷಾ ಬಂಧನ ಪ್ರಯುಕ್ತ ಕಟ್ಟಲಾಗಿರುವ ರಾಖಿಗೆ ಅನುಮತಿ ನೀಡಲು ಏನು ಅಡಚಣೆ ಇದೆ ? ಎಂದು ಪ್ರಶ್ನಿಸಿದ್ದಾರೆ.

೨. ಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಲೋಬೋ ಇವರು ಪೋಷಕರಿಗೆ, “ನನಗೆ ಈ ಘಟನೆಯ ಬಗ್ಗೆ ಏನೂ ಗೊತ್ತಿಲ್ಲ ಪೊಲೀಸರು ಯಾವಾಗ ನನ್ನ ಹತ್ತಿರ ಬಂದರೂ ಆಗಲೇ ನನಗೆ ಈ ವಿಷಯ ತಿಳಿದಿದೆ. ನಾನು ಇಲ್ಲಿ ಹೊಸದಾಗಿ ಬಂದಿದ್ದೇನೆ. ಕಳೆದ ೬ ವರ್ಷಗಳಿಂದ ನಾನು ಕೇರಳದಲ್ಲಿ ರಾಖಿ ಕಟ್ಟಿಸಿಕೊಂಡಿದ್ದೇನೆ. ನಮಗೆ ಇತರ ಧರ್ಮದವರ ಧಾರ್ಮಿಕ ಭಾವನೆಯನ್ನು ನೋಯಿಸುವ ಅಧಿಕಾರ ಇಲ್ಲ. ನಾವು ಯಾವಾಗಲೂ ರಕ್ಷಾ ಬಂಧನವನ್ನು ಸ್ವಾಗತಿಸುತ್ತೇವೆ. ಇದು ಒಂದು ಒಳ್ಳೆಯ ಪರಂಪರೆಯಾಗಿದೆ. ಕೇರಳದಲ್ಲಿ ಹಿಂದೂ ಸಹೋದರರು ಮೇರಿಯ ಕೈಯಲ್ಲಿ ರಾಖಿ ಕಟ್ಟುತ್ತಿದ್ದರು. ಇನ್ನು ಮುಂದೆ ಶಾಲೆಯಲ್ಲಿ ರಕ್ಷಾಬಂಧನಕ್ಕೆ ವಿರೋಧವಾಗುವುದಿಲ್ಲ. ನಾನು ಮಕ್ಕಳಿಗೆ ಈ ವಿಷಯವಾಗಿ ಹೇಳುತ್ತೇನೆ ಎಂದು ಹೇಳಿದರು.

ಸಂಪಾದಕಿಯ ನಿಲುವು

ಕ್ರೈಸ್ತ ಮಿಶನರಿ ಶಾಲೆಗಳಲ್ಲಿ ಹಿಂದೂಗಳ ಹಬ್ಬ ಮತ್ತು ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಇದೇನು ಹೊಸ ಘಟನೆ ಅಲ್ಲ. ಆದ್ದರಿಂದ ಹಿಂದೂಗಳ ಮೇಲೆ ನಡೆಯುವ ಈ ರೀತಿಯ ದಬ್ಬಾಳಿಕೆಯ ವಿರುದ್ಧ ಇನ್ನೂ ಕಾನೂನು ಜಾರಿ ಮಾಡುವುದು ಅನಿವಾರ್ಯ !