ಪಾಕ್‍ನಲ್ಲಿನ ಧ್ವಂಸ ಮಾಡಿದ್ದ ದೇವಸ್ಥಾನವನ್ನು ಪಾಕಿಸ್ತಾನ ಸರಕಾರದಿಂದ ದುರಸ್ತಿ ಮಾಡಿ ದೇವಸ್ಥಾನವನ್ನು ಪುನಃ ಹಿಂದೂಗಳಿಗೆ ಒಪ್ಪಿಸಿತು

ಆಗಸ್ಟ್ 4 ರಂದು ಮುಸಲ್ಮಾನರ ಸಮೂಹವು ಧ್ವಂಸ ಮಾಡಿದ್ದ ಶ್ರೀ ಗಣಪತಿ ದೇವಸ್ಥಾನವನ್ನು ಪಾಕ್ ಸರಕಾರವು ದುರಸ್ತಿ ಮಾಡಿದ ನಂತರ ಆ ದೇವಸ್ಥಾನವನ್ನು ಪುನಃ ಹಿಂದೂಗಳಿಗೆ ಒಪ್ಪಿಸಲಾಯಿತು.

ಗಣಪತಿ ದೇವಸ್ಥಾನದ ಮೇಲೆ ಆಕ್ರಮಣ ಮಾಡಿದವರನ್ನು ತಕ್ಷಣ ಬಂಧಿಸಿ ಹಾಗೂ ಮಂದಿರದ ದುರಸ್ತಿ ಮಾಡಿ ! – ಪಾಕ್ ನ ಸರ್ವೋಚ್ಚ ನ್ಯಾಯಾಲಯದ ಆದೇಶ

ಗಣಪತಿ ದೇವಸ್ಥಾನದ ಮೇಲೆ ಆಕ್ರಮಣ ಮಾಡುವಂತೆ ಯಾರು ಜನರನ್ನು ಉದ್ರೇಕಿಸುವ ಕಾರ್ಯ ಮಾಡಿದ್ದಾರೆಯೋ; ಹಾಗೆಯೇ ಯಾರು ಮಂದಿರದ ಮೇಲೆ ಆಕ್ರಮಣ ಮಾಡಿದ್ದಾರೆಯೋ ಅವರನ್ನೆಲ್ಲ ತಕ್ಷಣ ಬಂಧಿಸಬೇಕು.

ಲಕ್ಷ್ಮಣಪುರಿಯಲ್ಲಿ ಬಾಂಬ್‌ ಹಾಕಿ ದೇವಸ್ಥಾನಗಳನ್ನು ಧ್ವಂಸ ಮಾಡುವ ಬೆದರಿಕೆ ಹಾಕಿದ ಜಿಹಾದಿಯ ಬಂಧನ

ಸ್ಥಳೀಯ ಅಲಿಗಂಜ್ ಹನುಮಾನ್ ದೇವಸ್ಥಾನ ಮತ್ತು ಮನಕಾಮೇಶ್ವರ ದೇವಸ್ಥಾನ ಸೇರಿದಂತೆ ನಗರದ ಇತರ ದೇವಸ್ಥಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಶಕೀಲ್ ಎಂಬ ಜಿಹಾದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕ್ ನಲ್ಲಿ ಮತಾಂಧರಿಂದ ಗಣಪತಿ ದೇವಸ್ಥಾನದ ವಿಧ್ವಂಸ !

ಭಾರತದಲ್ಲಿನ ಜಾತ್ಯಾತೀತವಾದಿಗಳಿಗೆ ಇಸ್ಲಾಮಿ ದೇಶದಲ್ಲಿರುವ ಹಿಂದೂಗಳ ಸ್ಥಿತಿಯು ಏಕೆ ಕಾಣಿಸುತ್ತಿಲ್ಲ? ಈ ವಿಷಯದಲ್ಲಿ ಅವರು ಏಕೆ ಯಾವತ್ತೂ ಏನೂ ಮಾತನಾಡುವುದಿಲ್ಲ ?

ಉತ್ತರಾಖಂಡದ ಜಾಗೇಶ್ವರ ಧಾಮ ದೇವಾಲಯದಲ್ಲಿನ ಅರ್ಚಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಭಾಜಪದ ಸಾಂಸದ !

ಕೊರೊನಾದ ನಿರ್ಬಂಧಗಳಿಂದ ದೇವಾಲಯವನ್ನು 6.00 ಗಂಟೆಗೆ ಮುಚ್ಚಲಾಗುತ್ತದೆ. ಅರ್ಚಕರು ಸಾಂಸದರನ್ನು ದೇವಾಲಯದಿಂದ ಹೊರಡಲು ವಿನಂತಿಸಿದರು; ಆದರೆ ಅವರು ದುರ್ವರ್ತನೆ ತೋರಿಸುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ದೇವಸ್ಥಾನದ ಪರಿಸರದ ಮಣ್ಣನ್ನು ಕಳವು ಮಾಡಿರುವ ಮತಾಂಧನು ಪೊಲೀಸರ ವಶದಲ್ಲಿ!

ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನದ ಪ್ರಾಂಗಣದಲ್ಲಿ ಒಬ್ಬ ಮುಸಲ್ಮಾನನು ಪ್ರವೇಶ ಮಾಡಿ ಯಾರು ನೋಡದ ಹಾಗೆ ಅಲ್ಲಿಯ ಮಣ್ಣನ್ನು ತೆಗೆದುಕೊಂಡು ಹೋಗುವಾಗ ಸಿಸಿಟಿವಿಯ ಕ್ಯಾಮರಾದಲ್ಲಿ ಚಿತ್ರಿತವಾಗಿದೆ. ಕೊಕ್ಕಡ ಊರಿನ ಹಳ್ಳಿಗೇರಿಯ ನಿವಾಸಿ ಕಲಂದರ ಶಾಹ ಎಂಬವನ ಮೇಲೆ ಆರೋಪ ದಾಖಲಾಗಿದೆ.

ತಿರುನೆಲವೇಲಿ (ತಮಿಳುನಾಡು) ಇಲ್ಲಿನ ಹಿಂದೂಗಳಿಗೆ ಪವಿತ್ರವಾದ ಬೆಟ್ಟದ ಮೇಲೆ ಚಂದ್ರ ಮತ್ತು ನಕ್ಷತ್ರ” ಚಿತ್ರಿಸಿ ‘ಅಲ್ಲಾಹ’ ಮತ್ತು ‘786’ ಬರೆದ ಧರ್ಮಾಂಧರು!

ಮಸೀದಿ ಅಥವಾ ಚರ್ಚ್‍ಗಳ ಮೇಲೆ ಹಿಂದೂಗಳು ತಮ್ಮ ಧರ್ಮದ ಪವಿತ್ರ ಅಕ್ಷರಗಳನ್ನು ಬರೆದಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಹಿಂಸಾತ್ಮಕ ಪ್ರತಿಕ್ರಿಯೆಯು ಉದ್ಭವಿಸುತ್ತಿದ್ದವು.

‘ದೇವಭೂಮಿ ಉತ್ತರಾಖಂಡವನ್ನು ಇಸ್ಲಾಮೀಕರಣ ಮಾಡುವ ಪಿತೂರಿ !’ ಈ ವಿಷಯದಲ್ಲಿ ‘ಆನ್‌ಲೈನ್’ ವಿಶೇಷ ಸಂವಾದ

ತ್ತರಾಖಂಡದ ಹಿಂದೂಗಳ ಭೂಮಿಯಲ್ಲಿ ನಿಯೋಜಿತ ಅತಿಕ್ರಮಣಗಳು ಹಿಂದೂಗಳಿಗೆ ಅಪಾಯದ ಗಂಟೆಯಾಗಿದೆ. ಅಲ್ಲದೆ, ಉತ್ತರಾಖಂಡ ರಾಜ್ಯವು ನೇಪಾಳ ಮತ್ತು ಚೀನಾದ ಗಡಿಗೆ ತಾಗಿರುವುದರಿಂದ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಇದು ತುಂಬಾ ಅಪಾಯಕಾರಿಯಾಗಿದೆ, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಇವರು ಹೇಳಿದ್ದಾರೆ.

ದ್ವಾರಕಾ (ಗುಜರಾತ) ಇಲ್ಲಿರುವ ದ್ವಾರಕಾಧೀಶ ಮಂದಿರಕ್ಕೆ ಸಿಡಿಲಿನ ಆಘಾತ; ಆದರೆ ಮಂದಿರಕ್ಕೆ ಯಾವುದೇ ಹಾನಿಯಾಗಿಲ್ಲ!

‘ಮಂದಿರದ ಒಂದು ಭಾಗದ ಮೇಲೆ ಸಿಡಿಲು ಬಡಿಯುವ ಪ್ರಸಂಗ ಇದೇ ಮೊದಲ ಬಾರಿಯಾಗಿದೆ. ದ್ವಾರಕಾಧೀಶರೆಂದರೆ ಸ್ವತಃ ಶ್ರೀಕೃಷ್ಣನು ಎಲ್ಲಿ ನೆಲೆಸಿದ್ದಾನೆಯೋ, ಅಲ್ಲಿಯ ಜನರ ಮೇಲೆ ಯಾವುದೇ ಸಂಕಟ ಬರುವುದಿಲ್ಲ.

ಆರೋಪಿ ಅಲ್ಬರ್ಟ್ ಫರ್ನಾಂಡಿಸ್‍ನನ್ನು ಪೊಲೀಸರು ಬಂಧಿಸಿದ ನಂತರ ದೇವಸ್ಥಾನಕ್ಕೆ ಹೋಗಿ ಕ್ಷಮಾಯಾಚನೆ !

ಬಜ್ಪೆಯ ನಿವಾಸಿಯಾಗಿರುವ ಅಲ್ಬರ್ಟ್ ಫರ್ನಾಂಡಿಸ್ ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದು ಕೆಲವು ದಿನಗಳ ಹಿಂದೆ ಆತ ದಿನೇಶ ಎಂಬ ಹಿಂದೂವಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ನಿಂದಿಸುವ ಧ್ವನಿ ಸಂದೇಶವನ್ನು ಕಳುಹಿಸಿದ್ದನು. ಆ ಸಂದೇಶವನ್ನು ಕೇಳಿ ಹಿಂದೂ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು.