ಮಹಾಕುಂಭಮೇಳದ ಭದ್ರತೆಗೆ ಗಡಿ ಭದ್ರತಾ ಪಡೆಯ ಯೋಧರ ಆಗಮನ !

ಪ್ರಯಾಗರಾಜ, ಜನವರಿ 8 (ಸುದ್ದಿ) – ಮಹಾ ಕುಂಭಮೇಳಕ್ಕೆ 40 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಕುಂಭಮೇಳಕ್ಕೆ ಕೆಲವು ಜಿಹಾದಿಗಳು ಒಡ್ಡಿರುವ ಬೆದರಿಕೆಯನ್ನು ಪರಿಗಣಿಸಿ, ಉತ್ತರ ಪ್ರದೇಶ ಸರಕಾರವು ಇಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಮಹಾಕುಂಭ ಪ್ರದೇಶಕ್ಕೆ ಒಂದು ಜಿಲ್ಲೆಯ ಸ್ಥಾನಮಾನ ನೀಡಲಾಗಿದ್ದರಿಂದ ಪೊಲೀಸ್ ಠಾಣೆ ಹಾಗೂ ಪೊಲೀಸ್ ಚೌಕಿ ಜತೆಗೆ ಹಿರಿಯ ಪೊಲೀಸ್ ಅಧೀಕ್ಷಕರನ್ನು ನೀಡಲಾಗಿದೆ. ಇದರೊಂದಿಗೆ ಇತರ ಭದ್ರತಾ ಪಡೆಗಳನ್ನು ಸಹಾಯಕ್ಕಾಗಿ ಕರೆಸಲಾಗಿದೆ. ಇದರ ಭಾಗವಾಗಿ, ಗಡಿ ಭದ್ರತಾ ಪಡೆಯ ಒಂದು ತುಕಡಿಯು ಜನವರಿ 8 ರಂದು ಪ್ರಯಾಗರಾಜ್ ಗೆ ಆಗಮಿಸಿದೆ.