ಉತ್ತರಾಖಂಡ ಸರಕಾರದಿಂದ ಕೊನೆಗೂ ಚಾರಧಾಮ ಸಹಿತ ೫೧ ದೇವಾಲಯಗಳ ಸರಕಾರೀಕರಣ ರದ್ದು !

* ದೇವಾಲಯಗಳ ಅರ್ಚಕರ ಆಂದೋಲನಕ್ಕೆ ಸಂದ ಜಯ !

* ಚಾರಧಾಮ ದೇವಸ್ಥಾನಮ್ ಬೋರ್ಡ ವಿಸರ್ಜಿತ !

* ಹಿಂದೂಗಳು ಸಂಘಟಿತರಾಗಿ ಹಾಗೂ ಸತತವಾಗಿ ವಿರೋಧಿಸಿದರೆ, ಸರಕಾರವು ಬಗ್ಗಲೇ ಬೇಕಾಗುತ್ತದೆ, ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ !

* ಈಗ ಇಡೀ ದೇಶದಲ್ಲಿ ಸರಕಾರೀಕರಣಗೊಂಡ ದೇವಾಲಯಗಳ ವಿರುದ್ಧ ಇಡೀ ದೇಶದ ಅರ್ಚಕರು, ಧಾರ್ಮಿಕ ಸಂಘಟನೆಗಳು ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಒಟ್ಟಾಗಿ ಆಂದೋಲನ ನಡೆಸಬೇಕು ಮತ್ತು ದೇಶದಲ್ಲಿರುವ ಪ್ರತಿಯೊಂದು ದೇವಾಲಯವೂ ಕೂಡ ಸರಕಾರೀಕರಣದಿಂದ ಮುಕ್ತಗೊಳಿಸಬೇಕು !

ದೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮೀಯವರು ರಾಜ್ಯದಲ್ಲಿನ ಚಾರಧಾಮ (ಬದ್ರೀನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ) ಮತ್ತು ೫೧ ದೇವಾಲಯಗಳ ಸರಕಾರೀಕರಣವನ್ನು ರದ್ದು ಪಡಿಸಿರುವುದಾಗಿ ಘೋಷಿಸಿದರು. ಸರಕಾರಿಕರಣ ಮಾಡಿ ನಿರ್ಮಿಸಲಾದ ‘ಚಾರಧಾಮ ದೇವಸ್ಥಾನಮ್ ಬೋರ್ಡ್’ ವಿಸರ್ಜಿಸಿರುವುದಾಗಿ ಮುಖ್ಯಮಂತ್ರಿ ಧಾಮಿಯವರು ಘೋಷಿಸಿದ್ದಾರೆ.

೧. ರಾಜ್ಯದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಹ ರಾವತರವರು ೨೦೧೯ ನೇ ಇಸವಿಯಲ್ಲಿ ‘ಶ್ರಾಯಿನ ಬೋರ್ಡ’ನ ಆಧಾರದಲ್ಲಿ ‘ಚಾರಧಾಮ ದೇವಸ್ಥಾನಮ್ ಬೋರ್ಡ’ಅನ್ನು ಮಾಡಿದ್ದರು. ವಿಧಾನಸಭೆಯಲ್ಲಿ ಈ ಸಂದರ್ಭವಾಗಿ ಮಸೂದೆಯನ್ನು ಅನುಮೋದಿಸಿ ಕಾನೂನು ಮಾಡಲಾಯಿತು. ಅಂದಿನಿಂದ ಅದಕ್ಕೆ ಚಾರಧಾಮ ಮತ್ತು ೫೧ ದೇವಾಲಯಗಳ ಅರ್ಚಕರು ಸತತವಾಗಿ ವಿರೋಧಿಸುತ್ತಿದ್ದರು; ಆದರೆ ಸರಕಾರವು ಬೋರ್ಡಅನ್ನು ರದ್ದು ಪಡಿಸಲು ನಿರಾಕರಿಸುತ್ತಿತ್ತು. ರಾಜ್ಯ ಸರಕಾರದ ಹೇಳಿಕೆಯಂತೆ, ದೇವಸ್ಥಾನಮ್ ಬೋರ್ಡ ಮಾಡಿರುವುದರಿಂದ ಅಲ್ಲಿಗೆ ಬರುವ ಭಾವಿಕರಿಗೆ ಸೌಲಭ್ಯಗಳನ್ನು ನೀಡುವುದು ಮತ್ತು ಅಲ್ಲಿ ವಿಕಾಸಗೊಳಿಸುವುದು ಸುಲಭವಾಗುವುದು.

೨. ತ್ರಿವೇಂದ್ರ ಸಿಂಹ ರಾವತರವರನ್ನು ಪದವಿಯಿಂದ ತೆಗೆದು ಹಾಕಿದ ಬಳಿಕ ಮುಖ್ಯಮಂತ್ರಿ ತೀರಥಸಿಂಹ ರಾವತರವರು ಆ ಬೋರ್ಡಅನ್ನು ರದ್ದು ಪಡಿಸುವುದಾಗಿ ಆಶ್ವಾಸನೆ ನೀಡಿದ್ದರು; ಆದರೆ ಆ ಆಶ್ವಾಸನೆಯನ್ನು ಪೂರ್ಣಗೊಳಿಸುವ ಮೊದಲೇ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯಬೇಕಾಗಿ ಬಂತು.

೩. ಅನಂತರ ಮುಖ್ಯಮಂತ್ರಿ ಪದವಿಗೆ ಏರಿದ ಪುಷ್ಕರಸಿಂಹ ಧಾಮೀಯವರು ಉಚ್ಚ ಮಟ್ಟದ ಸಮಿತಿಯನ್ನು ನೇಮಿಸುವುದಾಗಿ ಘೋಷಿಸಿದರು. ಅದರಂತೆ ಅವರು ಮಾಜಿ ಸಂಸದರಾದ ಮನೋಹರ ಕಾಂತ ಧ್ಯಾನಿಯವರ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ಸ್ಥಾಪಿಸಲಾಯಿತು. ಅದರಲ್ಲಿ ಚಾರಧಾಮದ ಅರ್ಚಕರನ್ನು ಕೂಡ ಸೇರಿಸಿಕೊಳ್ಳಲಾಯಿತು. ಈ ಸಮಿತಿಯು ಅಭ್ಯಾಸ ಮಾಡಿ ಅದನ್ನು ಸರಕಾರದ ಬಳಿ ಅಂತಿಮ ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಆಧಾರದಿಂದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮೀಯವರು ಈ ಬೋರ್ಡ ಅನ್ನು ರದ್ದು ಪಡಿಸಲು ತೀರ್ಮಾನ ತೆಗೆದುಕೊಂಡರು.

ಐತಿಹಾಸಿಕ ತೀರ್ಮಾನ ! – ಮಹಂತ ರವೀಂದ್ರ ಪುರಿ, ಅಧ್ಯಕ್ಷರು, ಅಖಿಲ ಭಾರತೀಯ ಆಖಾಡಾ ಪರಿಷತ್ತು

ರಾಜ್ಯ ಸರಕಾರವು ದೇವಸ್ಥಾನಮ್ ಬೋರ್ಡ ಅನ್ನು ವಿಸರ್ಜಿಸಿ ಒಂದು ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿದೆ. ಆದ್ದರಿಂದ ಸಾಧು-ಸಂತರು ಮತ್ತು ತೀರ್ಥಪುರೋಹಿತರ ನಡುವೆ ಆನಂದದ ವಾತಾವರಣವಿದೆ, ಎಂದು ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷರಾದ ಮಹಂತ ರವೀಂದ್ರ ಪುರಿಯವರು ವ್ಯಕ್ತ ಪಡಿಸಿದ್ದಾರೆ.

ಪುರೋಹಿತರ ಪ್ರತಿಕ್ರಿಯೆ

* ಸತ್ಯ, ಸನಾತನ ಮತ್ತು ಪರಂಪರೆಯ ವಿಜಯವಾಗಿದೆ. ನಾನು ಅದಕ್ಕಾಗಿ ಸರಕಾರಕ್ಕೆ ಕೃತಜ್ಞತೆ ವ್ಯಕ್ತ ಪಡಿಸುತ್ತೇನೆ. – ಶ್ರೀ ರಾವಲ ಹರೀಶ ಸೆಮವಾಲ, ಅಧ್ಯಕ್ಷರು, ಶ್ರೀ ಪಾಂಚ ಗಂಗೋತ್ರೀ ದೇವಾಲಯ ಸಮಿತಿ

* ಧರ್ಮದ ಮೇಲೆ ಕಾಯಿದೆಯ ಪಹರೆಯಿರಬಾರದು. ಹಾಗೆ ಆದಾಗ ಧರ್ಮವು ಹಾಳಾಗುತ್ತದೆ. ಯಾರು ಧರ್ಮವನ್ನು ರಕ್ಷಿಸುತ್ತಾರೋ, ಅವರೇ ಈ ಜಗತ್ತಿನಲ್ಲಿ ಉಳಿಯುತ್ತಾರೆ. – ಶ್ರೀ. ಸುರೇಶ ಸೆಮವಾಲ, ಕಾರ್ಯದರ್ಶಿ, ಶ್ರೀ ಗಂಗೋತ್ರೀ ದೇವಾಲಯ ಸಮಿತಿ.

* ಕೊನೆಗೆ ಸರಕಾರವು ಪುರೋಹಿತರ ಹೋರಾಟವು ಸತ್ಯವಾಗಿತ್ತೆಂದು ಒಪ್ಪಿಕೊಳ್ಳಬೇಕಾಯಿತು.

* ಸತ್ಯದ ಜಯವಾಯಿತು. ಸರಕಾರವು ಸತ್ಯದ ಪರವಾಗಿ ನಿಂತಿತು. – ಶ್ರೀ. ಕೃಷ್ಣ ಕಾಂತ ಕೊಠಿಯಾಲ, ಅಧ್ಯಕ್ಷರು, ಚಾರಧಾಮ ತೀರ್ಥಪುರೋಹಿತ ಹಕ ಹಕ್ಕೂಧಾರೀ ಮಹಾಪಂಚಾಯತ

* ಈ ತೀರ್ಮಾನ ಮೊದಲೇ ಆಗಬೇಕಾಗಿತ್ತು; ಆದರೆ ಅಧಿಕಾರದಲ್ಲಿರುವ ಕೆಲವು ಜನರ ಹಟದಿಂದ ಅದಕ್ಕಾಗಿ ೨ ವರ್ಷ ಹಿಡಿಯಿತು. – ಶ್ರೀ. ಅಶೋಕ ಟೊಡರಿಯಾ, ಕೊಶಾಧ್ಯಕ್ಷರು, ಬದ್ರೀಶ ಪಂಡಾ ಪಂಚಾಯತ.