ಮಥುರಾ (ಉತ್ತರಪ್ರದೇಶ) – ಭಗವಾನ ಶ್ರೀಕೃಷ್ಣನ ದೇವಸ್ಥಾನ ಮಥುರಾದಲ್ಲಿ ಕಟ್ಟದೆ ಲಾಹೋರಿನಲ್ಲಿ ಕಟ್ಟುವರೇ ?, ಹೇಗೆಂದು ಉತ್ತರಪ್ರದೇಶದ ಹೈನುಗಾರಿಕೆ ಅಭಿವೃದ್ಧಿ, ಪಶು ಸಂಗೊಪನೆ ಮತ್ತು ಮತ್ಸ್ಯಪಾಲನೆಯ ಸಚಿವ ಚೌಧರಿ ಲಕ್ಷ್ಮೀನಾರಾಯಣ ಇವರು ಪ್ರಶ್ನೆ ಕೇಳಿದ್ದಾರೆ. ಕೆಲವು ದಿನಗಳ ಹಿಂದೆ ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ಇತರ ಸಚಿವರು ಮಥುರಾದಲ್ಲಿ ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯ ಮೇಲೆ ಶ್ರೀಕೃಷ್ಣ ಮಂದಿರ ನಿರ್ಮಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಅದಕ್ಕಾಗಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಚೌಧರಿ ಲಕ್ಷ್ಮೀನಾರಾಯಣ್ ಇವರು ಈ ಮೇಲಿನ ಉತ್ತರ ನೀಡಿದರು.
Krishna temple will be made in Mathura, not Lahore: UP minister Chaudhary https://t.co/sTSwVEzqpM
— The Times Of India (@timesofindia) December 7, 2021
ಚೌಧರಿ ಲಕ್ಷ್ಮೀನಾರಾಯಣ ತಮ್ಮ ಮಾತನ್ನು ಮುಂದುವರೆಸುತ್ತಾ, ಸದ್ಯದ ಪರಿಸ್ಥಿತಿಯಲ್ಲಿ ಯಾವ ಜಾಗದಲ್ಲಿ ಈದ್ಗಾ ಮಸೀದಿ ಇದೆ, ಅಲ್ಲಿ ಮೊದಲು ಕಂಸನ ಸೆರೆಮನೆ ಇತ್ತು ಮತ್ತು ಅದರಲ್ಲಿ ಬಂಧಿತವಾಗಿರುವ ದೇವಕಿ ಮತ್ತು ವಾಸುದೇವ ಇವರು 8 ನೇ ಮಗು ಎಂದರೆ ಶ್ರೀಕೃಷ್ಣನಿಗೆ ಜನ್ಮ ನೀಡಿದ್ದರು. ಆದ್ದರಿಂದ ನಾವು ಅಲ್ಲಿಯೇ ಶ್ರೀಕೃಷ್ಣನ ಮಂದಿರ ಕಟ್ಟುವವರಿದ್ದೇವೆ. ಭಗವಾನ ಶ್ರೀಕೃಷ್ಣನ ಜನ್ಮ ಅಲ್ಲಿ ಆಗಿದ್ದರಿಂದ ದೇವಸ್ಥಾನವು ಅಲ್ಲಿಯೇ ಕಟ್ಟಬೇಕು ಎಂದು ಹೇಳಿದರು.