Plastic Free Maha Kumbh Mela 2025 : ಪ್ಲಾಸ್ಟಿಕ್ ಮುಕ್ತ ಮಹಾಕುಂಭಕ್ಕಾಗಿ ಉತ್ತರ ಪ್ರದೇಶ ಸರಕಾರದಿಂದ ಬೃಹತ್ಪ್ರಮಾಣದಲ್ಲಿ ಜಾಗೃತಿ !

ಪ್ರಯಾಗರಾಜ, ಜನವರಿ 8 (ಸುದ್ದಿ.) – ಉತ್ತರ ಪ್ರದೇಶ ಸರಕಾರವು ಮಹಾಕುಂಭದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಲು ‘ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಕುಂಭ’ ಘೋಷಣಾವಾಕ್ಯವನ್ನು ಸಿದ್ಧಪಡಿಸಿದೆ. ಮಹಾಕುಂಭ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು, ಉತ್ತರ ಪ್ರದೇಶ ಸರಕಾರವು ಹೆಚ್ಚಿನ ಪ್ರಮಾಣದಲ್ಲಿ ಜನಜಾಗೃತಿಯನ್ನು ಮೂಡಿಸಿದೆ. ಇದಕ್ಕಾಗಿ ಮಹಾಕುಂಭದ ಎಲ್ಲಾ ಮಾರ್ಗಗಳಲ್ಲಿ ಪ್ಲಾಸ್ಟಿಕ್ ಬಳಸಬೇಡಿ ಎಂಬ ಬೋರ್ಡ್ ಹಾಕಲಾಗಿದೆ. ಚಹಾಕ್ಕೆ ಪ್ಲಾಸ್ಟಿಕ್ ಕಪ್‌ಗಳನ್ನು ಬಳಸುವ ಬದಲು ಮಣ್ಣಿನ ಕಪ್‌ಗಳು ಮತ್ತು ಪ್ಲಾಸ್ಟಿಕ್ ಚೀಲಗಳ ಬದಲಿಗೆ ಬಟ್ಟೆಯ ಚೀಲಗಳನ್ನು ಬಳಸುವಂತೆ ಕರೆ ನೀಡಲಾಗಿದೆ. ಉತ್ತರ ಪ್ರದೇಶ ಸರಕಾರದಿಂದ ‘ಪ್ಲಾಸ್ಟಿಕ್ ತಿರಸ್ಕರಿಸಿರಿ, ಪರಿಸರವನ್ನು ಸ್ವೀಕರಿಸಿರಿ’ ಎಂಬ ಫಲಕಗಳ ಮೂಲಕ ಕರೆ ನೀಡಿದೆ.