Kerala RSS workers Murder Case : ಸುಪ್ರೀಂ ಕೋರ್ಟ್ ನಿಂದ 5 ಸಿಪಿಎಂ ಕಾರ್ಯಕರ್ತರ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಿತು

ಕೇರಳದಲ್ಲಿ ಸ್ವಯಂಸೇವಕ ಸಂಘದ 2 ಕಾರ್ಯಕರ್ತರ ಹತ್ಯೆ ಪ್ರಕರಣ

ಕೇರಳದ ಕಣ್ಣೂರಿನಲ್ಲಿ ಸ್ವಯಂಸೇವಕರಾದ ಸುಜಿಸ್ ಮತ್ತು ಸುನಿಲ್

ತಿರುವನಂತಪುರಂ (ಕೇರಳ) – ಕೇರಳದ ತಲಶ್ಶೇರಿಯಲ್ಲಿ 2002ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಬ್ಬರು ಸ್ವಯಂಸೇವಕರ ಹತ್ಯೆ ಪ್ರಕರಣದಲ್ಲಿ 5 ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಗೆ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಮತ್ತು ಇದೀಗ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಪ್ರಕರಣದಲ್ಲಿ ವ್ಯತಿರಿಕ್ತ ಅಂಶಗಳಿವೆ ಎಂಬ ಕಾರಣಕ್ಕೆ ಇಡೀ ಕೊಲೆ ಘಟನೆಯನ್ನು ಸುಳ್ಳು ಎಂದು ಪರಿಗಣಿಸಲಾಗುವುದಿಲ್ಲ, ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಾರ್ಚ್ 2, 2002 ರಂದು, ಕೇರಳದ ಕಣ್ಣೂರಿನಲ್ಲಿ ಸ್ವಯಂಸೇವಕರಾದ ಸುಜಿಸ್ ಮತ್ತು ಸುನಿಲ್ ಅವರು ಮಲಗಿದ್ದಾಗ ಸಿಪಿಐ-ಎಂ ಕಾರ್ಯಕರ್ತರು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಅವರ ಶವವನ್ನು ಗದ್ದೆಯಲ್ಲಿ ಎಸೆಯಲಾಗಿತ್ತು.

ಸಂಪಾದಕೀಯ ನಿಲುವು

ಅಪರಾಧಿಗಳಿಂದ ತುಂಬಿರುವ ಮಾಕಪ್ ! ಹಿಂದುತ್ವನಿಷ್ಠರ ಹತ್ಯೆ ಪ್ರಕರಣದಲ್ಲಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಗುರಿಯಾಗುತ್ತಿರುವುದರಿಂದ ಈ ಪಕ್ಷವನ್ನು ದೇಶದಲ್ಲೇ ನಿಷೇಧಿಸುವಂತೆ ಆಗ್ರಹಿಸುವುದು ಹಿಂದುತ್ವನಿಷ್ಠ ಸಂಘಟನೆಗಳಿಗೆ ಅನಿವಾರ್ಯವಾಗಿದೆ !