ಪ್ರಯಾಗರಾಜ ಮಹಾನಗರಪಾಲಿಕೆಯ ಖೇದಕರ ಘಟನೆ !
ಪ್ರಯಾಗರಾಜ, ಜನವರಿ 7 (ಸುದ್ದಿ.) – ಪ್ರಯಾಗರಾಜ ಮಹಾನಗರ ಪಾಲಿಕೆಯು ಕುಂಭ ಕ್ಷೇತ್ರದಲ್ಲಿ ಕಸ ವಿಲೇವಾರಿ ಮಾಡುವ ವಾಹನಗಳ ಮೇಲೆ ಮಹಾಕುಂಭ ಮೇಳದ ಚಿತ್ರ ಹಚ್ಚಿರುವ ಖೇದಕರ ಘಟನೆ ಕಂಡು ಬಂದಿದೆ. ಈ ವಾಹನವನ್ನು ನೋಡಿದ ನಂತರ ಅನೇಕ ಭಕ್ತರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾಧು, ಗಂಗಾನದಿ, ಕುಂಭಕಲಶ ಮುಂತಾದ ಹಿಂದೂ ಧಾರ್ಮಿಕ ಸ್ಥಳಗಳ ಚಿತ್ರಗಳಿರುವುದರಿಂದ ಕಸದ ವಾಹನಗಳಿಗೆ ಅಂಟಿಸುವುದು ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಗಿದೆ ಎಂದು ಭಕ್ತರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ಈ ಚಿತ್ರವನ್ನು ಅಳಿಸುವಂತೆ ಭಕ್ತರು ಪ್ರಯಾಗರಾಜ ಮಹಾನಗರ ಪಾಲಿಕೆಯನ್ನು ಕೋರಿದ್ದಾರೆ.