ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಕತ್ತು ಸೀಳಿ ಹತ್ಯೆ !

ಕಾಕ್ಸ್ ಬಜಾರ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ 10 ಮಂದಿ ಸಾಮೂಹಿಕ ಅತ್ಯಾಚಾರ

ಕಾಕ್ಸ್ ಬಜಾರ್ (ಬಾಂಗ್ಲಾದೇಶ) – ಸುದೇವ್ ಹಲ್ದಾರ್ ಎಂಬ 28 ವರ್ಷದ ಹಿಂದೂ ಯುವಕನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಆತನ ಶವ ರಸ್ತೆಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಸುದೇವ್ ಹಿಂದೂ ಆಗಿದ್ದ ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿತ್ತು. ರಾಂಪುರ ಜೋರಾಪೋಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮತ್ತೊಂದೆಡೆ ಅಪ್ರಾಪ್ತ ಬಾಲಕಿಯ ಮೇಲೆ 8ರಿಂದ 10 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದಾದ ಬಳಿಕ ಆಕೆಯನ್ನು ರಸ್ತೆಬದಿಗೆ ಬಿಡಲಾಗಿತ್ತು. ಆಕೆಯ ಅತ್ಯಾಚಾರಿಗಳು ಜಮಾತ್-ಎ-ಇಸ್ಲಾಮಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಸುದೇವ್ ಹಲ್ದಾರ್ ಬಾವಕಾತಿ ಮಾರುಕಟ್ಟೆಯಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿದ್ದರು. ಪೊಲೀಸರು, ಸುದೇವ್ ಅಂಗಡಿ ಮುಚ್ಚಿ ಮನೆಗೆ ಮರಳುತ್ತಿದ್ದಾಗ ಅಪರಿಚಿತರು ಆತನ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಸ್ಥಳೀಯರು ಮತ್ತು ಅವರ ಕುಟುಂಬಕ್ಕೆ ಮನೆಯಿಂದ 1 ಕಿ.ಮೀ. ದೂರದ ಹೊಲದಲ್ಲಿ ಸುದೇವ್ ಮೃತ ದೇಹ ಪತ್ತೆಯಾಗಿದೆ. ನನ್ನ ಮಗನಿಗೆ ಯಾರೊಂದಿಗೂ ದ್ವೇಷವಿಲ್ಲ ಎಂದು ಸುದೇವ್ ತಂದೆ ಸುಬೋಧ್ ಹಲ್ದಾರ್ ಹೇಳಿದ್ದಾರೆ. ನನ್ನ ಮಗನನ್ನು ಕೊಂದವರು ಯಾರು ಮತ್ತು ಏಕೆ? ನನಗೆ ಇದು ಅರ್ಥವಾಗುತ್ತಿಲ್ಲ. ಪೊಲೀಸರು ಸತ್ಯವನ್ನು ಬಹಿರಂಗಪಡಿಸಬೇಕು ಮತ್ತು ಹಂತಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ’, ಎಂದು ಹೇಳಿದ್ದಾರೆ.

ಹಿಂದೂಗಳು ದೇಶ ತೊರೆಯಬೇಕು ಎಂದು ಹಿಂದೂಗಳ ಹತ್ಯೆ ! – ಬಂಗಬಂಧು ಪ್ರಕಾಶೋಳಿ ಪರಿಷತ್ತು

ಬಂಗಬಂಧು ಪ್ರಕಾಶೋಳಿ ಪರಿಷತ್ತಿನ ಕಾರ್ಯದರ್ಶಿ ಸುಶಾಂತ್ ದಾಸ್‌ಗುಪ್ತ ಮಾತನಾಡಿ, ಬಾಂಗ್ಲಾದೇಶದಲ್ಲಿ ಪ್ರತಿದಿನ ಕೊಲೆಗಳು ನಡೆಯುತ್ತಿವೆ. ಆತ ಹಿಂದೂ ಎಂಬ ಕಾರಣಕ್ಕೆ ಕೊಂದಿದ್ದಾರೆ ಎಂದು ಅನಿಸುತ್ತದೆ. ಈ ರೀತಿ ಹಿಂದೂಗಳನ್ನು ಕೊಲ್ಲುವ ಮೂಲಕ ‘ಈ ಬಾಂಗ್ಲಾದೇಶ ಹಿಂದೂಗಳಿಗೆ ಸೇರಿದ್ದಲ್ಲ’ ಎಂಬ ಸಂದೇಶವನ್ನು ನೀಡಲಾಗುತ್ತಿದೆ. ಬಾಂಗ್ಲಾದೇಶವನ್ನು ತೊರೆಯುವಂತೆ ಹಿಂದೂಗಳನ್ನು ಹೆದರಿಸಲು ಅವರನ್ನು ಕೊಲ್ಲಲಾಯಿತು’, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಎಂಬ ಚಿತ್ರಣವೇ ಕಾಣಿಸುತ್ತಿದೆ, ಇದು ಪ್ರಪಂಚದಾದ್ಯಂತದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ.