ಕುಂಭ ಕ್ಷೇತ್ರದಲ್ಲಿ ಬಯಲಿನಲ್ಲಿ ಮೂತ್ರಾಲಯ : ಪುರುಷರಿಗೆ ಬಯಲಿನಲ್ಲೇ ಮೂತ್ರ ವಿಸರ್ಜನೆ ಮಾಡಬೇಕಾಗುತ್ತಿದೆ !
ಪ್ರಯಾಗರಾಜ, ಜನವರಿ 8 (ಸುದ್ದಿ.) – ಪ್ರಯಾಗರಾಜ ಮೇಳ ಪ್ರಾಧಿಕಾರವು ಕುಂಭ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಮೂತ್ರಾಲಯಗಳ ವ್ಯವಸ್ಥೆ ಮಾಡಿದೆ; ಆದರೆ, ನಿರ್ಮಿಸಿರುವ ನೂರಾರು ಮೂತ್ರಾಲಯಗಳಿಗೆ ಯಾವುದೇ ಗೋಡೆಗಳು ಇಲ್ಲದ್ದರಿಂದ ಕುಂಭಮೇಳದ ವೇಳೆ ಪುರುಷರು ಮೂತ್ರ ವಿಸರ್ಜನೆಯನ್ನು ಬಯಲಿನಲ್ಲೇ ಮಾಡಬೇಕಾಗಿದೆ. ಕುಂಭಮೇಳದಂತಹ ಧಾರ್ಮಿಕ ಸ್ಥಳದಲ್ಲಿ ಈ ಪರಿಸ್ಥಿತಿ ಶೋಭಿಸುವುದಿಲ್ಲ.
ಈ ಎಲ್ಲ ಮೂತ್ರಾಲಯಗಳು ಕುಂಭಮೇಳದಲ್ಲಿ ಜನನಿಬಿಡ ಸ್ಥಳಗಳಲ್ಲಿವೆ. ಮೂತ್ರಾಲಯಗಳ ಮುಂಭಾಗದಲ್ಲಿ ರಸ್ತೆ, ಅಂಗಡಿಗಳಿರುವುದರಿಂದ ಎಲ್ಲೆಡೆ ಭಕ್ತರ ಜನಸಂದಣಿ ಇರುತ್ತದೆ. ಹಾಗಾಗಿ ಈ ಮೂತ್ರಾಲಯಗಳಿಗೆ ಕನಿಷ್ಟಪಕ್ಷ ಮರೆಮಾಡುವ ಸಲುವಾಗಿ ಅಡ್ಡಲಾಗಿ ಬಟ್ಟೆ ಕಟ್ಟಬೇಕು ಎಂದು ಅಪೇಕ್ಷೆ. 2024 ರಲ್ಲಿ ನಡೆದ ಮಾಘ ಕುಂಭಮೇಳದ ಸಮಯದಲ್ಲಿ, ಆಡಳಿತದಿಂದ ಮೂತ್ರಾಲಯಗಳಿಗೆ ಮರೆಮಾಡಲು ಅಡ್ಡಲಾಗಿ ಬಟ್ಟೆಗಳನ್ನು ಕಟ್ಟಲಾಗಿತ್ತು. ಆದರೆ ಈ ಬಾರಿ ಅಂತಹ ವ್ಯವಸ್ಥೆ ಮಾಡಿಲ್ಲ. ಆದ್ದರಿಂದ, ಜನಸಂದಣಿಯಲ್ಲಿ ಅನೇಕ ಜನರು ತೆರೆದ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ಚಿತ್ರವು ಕಂಡುಬರುತ್ತದೆ. ಆಡಳಿತ ಈ ಎಲ್ಲ ಮೂತ್ರಾಲಯಗಳಿಗೆ ಮರೆಮಾಡಲು ವ್ಯವಸ್ಥೆ ಕಲ್ಪಿಸುವ ಆವಶ್ಯಕತೆಯಿದೆ.