Pu. Asaramji Bapu Gets Bail : ಸಂತಶ್ರೀ ಪೂ. ಆಸಾರಾಮಜಿ ಬಾಪು ರವರಿಗೆ ಮಧ್ಯಂತರ ಜಾಮೀನು ನೀಡಿದ ಸರ್ವೋಚ್ಚ ನ್ಯಾಯಾಲಯ

ಇನ್ನೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವುದರಿಂದ ಜೈಲಿನಿಂದ ಹೊರಬರುವುದು ಅಸಾಧ್ಯ

ಜೋಧಪುರ (ರಾಜಸ್ಥಾನ) – ಸಂತಶ್ರೀ ಪೂ. ಆಸಾರಾಮಜಿ ಬಾಪುರವರಿಗೆ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ. ಸೂರತ(ಗುಜರಾತ)ನ ಆಶ್ರಮದಲ್ಲಿ ಮಹಿಳೆಯ ಮೇಲೆ ಹೇಳಿಕೆಯ ಅತ್ಯಾಚಾರವೆಸಗಿದ ಆರೋಪದ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗಿದೆ. ಈ ಜಾಮೀನು ಮಾರ್ಚ್ 15, 2025 ರವರೆಗೆ ಇರಲಿದೆ. ಈ ಅವಧಿಯಲ್ಲಿ ಸಾಕ್ಷ್ಯಾಧಾರಗಳನ್ನು ಹಾಳು ಮಾಡಬಾರದು, ಅನುಯಾಯಿಗಳನ್ನು ಭೇಟಿಯಾಗಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಅವರ ಭದ್ರತೆಗೆ ಪೊಲೀಸರನ್ನು ನಿಯೋಜಿಸುವಂತೆಯೂ ನ್ಯಾಯಾಲಯವು ಸೂಚಿಸಿದೆ. ಪ್ರಸ್ತುತ ಅವರು ಮತ್ತೊಂದು ಬಲಾತ್ಕಾರದ ಪ್ರಕರಣದಲ್ಲಿ ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಹಾಗಾಗಿ ಜಾಮೀನು ಸಿಕ್ಕಿದರೂ ಜೈಲಿನಿಂದ ಹೊರಬರುವುದು ಅಸಾಧ್ಯವಾಗಿದೆ.