ಕಾಶಿಯಲ್ಲಿನ ೭ ಲಕ್ಷ ಮನೆಗಳಿಗೆ ಲಡ್ಡು ಪ್ರಸಾದ ವಿತರಣೆಡಿಸೆಂಬರ್ ೧೨ ರಿಂದ ಮನೆಮನೆಗಳಲ್ಲಿ ದೀಪಗಳನ್ನು ಹಚ್ಚಲಾಗುವುದು೩೦೦ ಕ್ಕೂ ಹೆಚ್ಚು ಶಂಕರಾಚಾರ್ಯರು, ಸಂತ ಮತ್ತು ಮಹಾಂತರು ಉಪಸ್ಥಿತರಿರುವರು |
ವಾರಣಾಸಿ (ಉತ್ತರ ಪ್ರದೇಶ) – ಪ್ರಧಾನಿ ನರೇಂದ್ರ ಮೋದಿ ಇವರ ಹಸ್ತದಿಂದ ‘ಕಾಶಿ ವಿಶ್ವನಾಥ ಧಾಮ’ ಇದರ ಲೋಕಾರ್ಪಣೆಯು ಇಂದು ಡಿಸೆಂಬರ್ ೧೩ ರಂದು ದೀಪ ಪ್ರಜ್ವಲಿಸಿ ನಡೆಸಲಾಗುವುದು. ಈ ಸಂದರ್ಭದಲ್ಲಿ ಕಾಶಿಯಲ್ಲಿ ಡಿಸೆಂಬರ್ ೧೨ ರಿಂದ ೧೪ ಡಿಸೆಂಬರ್ ವರೆಗೂ ಮನೆಮನೆಗಳಲ್ಲಿ ದೀಪಗಳು ಹಚ್ಚಲಾಗುವುದು. ಲೋಕಾರ್ಪಣೆಗಾಗಿ ದೇಶಾದ್ಯಂತ ೩೦೦ ಕ್ಕೂ ಹೆಚ್ಚು ಶಂಕರಾಚಾರ್ಯರು, ಸಂತರು ಮತ್ತು ಮಹಂತರು ಬರಲಿದ್ದಾರೆ. ಲೋಕಾರ್ಪಣೆಯ ಪ್ರಯುಕ್ತ ‘ಕಾಶಿ ವಿಶ್ವನಾಥ ಧಾಮ’ ಅಲಂಕರಿಸಲಾಗಿದೆ. ಅದಕ್ಕಾಗಿ ಪಕ್ಕದ ಅನೇಕ ರಾಜ್ಯಗಳಿಂದ ಹೂಗಳನ್ನು ತರಿಸಲಾಗಿದೆ. ಅದರಲ್ಲಿ ಗುಲಾಬಿ, ಚೆಂಡುಹೂವು ಸಹಿತ ಇನ್ನೂ ಅನೇಕ ಹೂವುಗಳು ಒಳಗೊಂಡಿದೆ. ಇದರ ಜೊತೆಗೆ ೭ ಲಕ್ಷ ಮನೆಗಳಿಗೆ ಲಡ್ಡು ಪ್ರಸಾದ ಹಂಚಲಾಗುವುದು. ಡಿಸೆಂಬರ್ ೧೪ ರಂದು ಭಾಜಪ ಆಡಳಿತ ಇರುವ ಮುಖ್ಯಮಂತ್ರಿಗಳು ಸಮ್ಮೇಳನದ ಪ್ರಸ್ತಾವನೆ ಇದೆ. ಡಿಸೆಂಬರ್ ೭ ಕ್ಕೆ ದೇಶಾದ್ಯಂತ ಮಹಾಪೌರರು ಕಾಶಿಗೆ ಆಗಮಿಸುವರು.
Tomorrow, 13th December is a landmark day. At a special programme in Kashi, the Shri Kashi Vishwanath Dham project will be inaugurated. This will add to Kashi’s spiritual vibrancy. I would urge you all to join tomorrow’s programme. https://t.co/DvTrEKfSzk pic.twitter.com/p2zGMZNv2U
— Narendra Modi (@narendramodi) December 12, 2021
ಪ್ರಧಾನಿ ಮೋದಿ ಇವರಿಂದ ಈ ಧಾಮನ ಭೂಮಿಪೂಜೆಯು ೮ ಮಾರ್ಚ್ ೨೦೧೯ ರಂದು ನಡೆದಿತ್ತು. ಈ ಯೋಜನೆಗಾಗಿ ೩೩೯ ಕೋಟಿ ರೂಪಾಯಿ ವ್ಯವಸ್ಥೆ ಮಾಡಲಾಗಿತ್ತು. ನಂತರ ಯೋಜನೆ ಬೆಳೆಸಿ ೮೦೦ ಕೋಟಿ ರೂಪಾಯಿಗೆ ತಲುಪಿತು. ಯೋಜನೆ ಮೂರು ಹಂತಗಳಲ್ಲಿ ಪೂರ್ಣ ಮಾಡಲಾಗುವುದು, ಅದರಲ್ಲಿನ ಮೊದಲನೆಯ ಹಂತದ ಲೋಕಾರ್ಪಣೆ ನಾಳೆ ನಡೆಸಲಾಗುವುದು.
ವಾರಾಣಸಿಯಲ್ಲಿ ಪುರಾತನ ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾ ನದಿಯ ಎರಡು ಘಾಟ್ಗಳನ್ನು ಸಂಪರ್ಕಿಸುವ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಲಿದ್ದಾರೆ.#PMNarendraModi #KashiVishwanathCorridor #Varanasi #KashiVishwanathTemple https://t.co/RDCx0Mzn8Q
— Prajavani (@prajavani) December 12, 2021
ದೇಶದ ೫೧ ಸಾವಿರ ಸ್ಥಳಗಳಲ್ಲಿ ನೇರ ಪ್ರಸಾರ
ಈ ಕಾರ್ಯಕ್ರಮವನ್ನು ದೇಶಾದ್ಯಂತ ೧೫ ಸಾವಿರದ ೪೪೪ ಮಂಡಳಗಳು ೫೧ ಸಾವಿರ ಸ್ಥಳಗಳಲ್ಲಿ ನೇರಪ್ರಸಾರ ಮಾಡಲಾಗುವುದು. ಅದರಲ್ಲಿ ಪ್ರತಿಯೊಂದು ಸ್ಥಳದಲ್ಲಿ ೫೦೦ ರಿಂದ ೭೦೦ ಜನರು ಕಾರ್ಯಕ್ರಮಕ್ಕೆ ಜೋಡಣೆ ಆಗುವರು. ಇತರ ೧೧ ಜ್ಯೋತಿರ್ಲಿಂಗಗಳ ತೀರ್ಥಕ್ಷೇತ್ರಗಳಲ್ಲಿಯೂ ಲೋಕಾರ್ಪಣೆ ಸಮಾರಂಭ ನೇರ ಪ್ರಸಾರ ಮಾಡಲಾಗುವುದು.
ಹೀಗೆ ನಡೆಯುವುದು ಲೋಕಾರ್ಪಣೆ
ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ ೧೩ ರಂದು ಕಾಶಿಯ ಬಾಬಾ ಶ್ರೀ ಕಾಲಭೈರವನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುವರು. ಅಲ್ಲಿಂದ ಅವರು ರಾಜಘಾಟಗೆ ಹೋಗುವರು. ಅಲ್ಲಿಂದ ಅವರು ನೌಕೆಯ ಮೂಲಕ ಲಲಿತಾ ಘಾಟ್ ಹೋಗುವರು. ಗಂಗಾನದಿಯ ದರ್ಶನ ಪಡೆದು ಪವಿತ್ರ ಜಲವನ್ನು ತೆಗೆದುಕೊಂಡು ಕಾಶಿ ವಿಶ್ವನಾಥ ಧಾಮದ ಮಾರ್ಗದಿಂದ ಕಾಲುದಾರಿಯಲ್ಲಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಗರ್ಭಗುಡಿಗೆ ಹೋಗುವರು. ಅಭಿಷೇಕವಾದ ನಂತರ ಅವರು ಪೂಜೆಯಲ್ಲಿ ಸಹಭಾಗಿ ಆಗುವರು. ನಂತರ ಲೋಕಾರ್ಪಣೆಯ ಸಮಾರಂಭ ನಡೆಯುವುದು.
ಜ್ಞಾನವಾಪಿ ಕೂಪ ಮತ್ತು ನಂದಿ ಇದೂ ‘ಕಾಶಿ ವಿಶ್ವನಾಥ ಧಾಮ’ದಲ್ಲಿ ಸಮಾವೇಶಗೊಂಡಿದೆ
೧೬೬೯ನೆ ಇಸ್ವಿಯಲ್ಲಿ ಔರಂಗಜೇಬನ ಆದೇಶದಿಂದ ಶ್ರೀ ಕಾಶಿ ವಿಶ್ವನಾಥನ ದೇವಸ್ಥಾನವನ್ನು ಕೆಡವಿ ಜ್ಞಾನವಾಪಿ ಮಸೀದಿ ಕಟ್ಟಲಾಗಿತ್ತು. ಆ ಸಮಯದಲ್ಲಿ ಅಲ್ಲಿಯೇ ನಂದಿಯ ಮೂರ್ತಿ ಧ್ವಂಸ ಮಾಡುವ ಪ್ರಯತ್ನ ಸಫಲವಾಗಲಿಲ್ಲ. ಆ ಸಮಯ ದೇವಸ್ಥಾನದ ಮಹಂತರು ಅಲ್ಲೇ ಇರುವ ಶಿವಲಿಂಗ ಜ್ಞಾನವಾಪಿ ಕೂಪದಲ್ಲಿ ಬಚ್ಚಿಟ್ಟಿದ್ದರು. ಕೆಲವು ವರ್ಷಗಳ ನಂತರ ಅಹಲ್ಯಾಬಾಯಿ ಹೋಳ್ಕರ್ ಇವರು ಈ ಮಸೀದಿಯ ಪಕ್ಕದಲ್ಲಿಯೇ ಹೊಸ ದೇವಸ್ಥಾನವನ್ನು ಕಟ್ಟಿಸಿದರು. ಆ ಸಮಯ ದೇವಸ್ಥಾನ ಪರಿಸರದಲ್ಲಿ ನಂದಿ ಮತ್ತು ಜ್ಞಾನವಾಪಿ ಕೂಪದ ಸಮಾವೇಶ ಇರಲಿಲ್ಲ. ಆದರೆ ಪ್ರಸ್ತುತ ‘ಕಾಶಿ ವಿಶ್ವನಾಥ ಧಾಮ’ದಲ್ಲಿ ಇದರ ಸಮಾವೇಶ ಮಾಡಲಾಗಿದೆ.
ಕಾಶಿ ವಿಶ್ವನಾಥ ಧಾಮಕ್ಕಾಗಿ ೨೭ ದೇವಸ್ಥಾನಗಳ ವಿಶೇಷ ‘ಮಣಿಮಾಲೆ’
ಕಾಶಿ ವಿಶ್ವನಾಥ ಧಾಮದಲ್ಲಿ ೨೭ ಮಂದಿರಗಳು ಒಂದು ವಿಶೇಷ ‘ಮಣಿಮಾಲೆ’ ಸಿದ್ಧ ಮಾಡಲಾಗಿದೆ. ಈ ಮಂದಿರಗಳು ಮೊದಲು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಜೊತೆಗೆ ಕಟ್ಟಲಾಗಿದ್ದವು. ನಂತರ ಕೆಲವು ದೇವಸ್ಥಾನಗಳು ಕಟ್ಟಲಾಗಿದ್ದವು. ಈ ಧಾಮದ ಎರಡನೆಯ ಹಂತದಲ್ಲಿ ೯೭ ಮೂರ್ತಿಗಳ ಸ್ಥಾಪನೆ ಮಾಡಲಾಗುವುದು ಹಾಗೂ ಮೂರನೇ ಹಂತದಲ್ಲಿ ೧೪೫ ಶಿವಲಿಂಗಗಳ ಸ್ಥಾಪನೆ ಮಾಡಲಾಗುವುದು.
೫ ಸಾವಿರ ಅಡಿಯಿಂದ ೫ ಲಕ್ಷ ಸಾವಿರ ಅಡಿಗಳಷ್ಟು ಪರಿಸರದ ವಿಸ್ತಾರ
ಮೊದಲಿನ ಕಾಶಿ ವಿಶ್ವನಾಥ ದೇವಸ್ಥಾನದ ಪರಿಸರದಲ್ಲಿ ೫ ಸಾವಿರ ಅಡಿಯಾಗಿತ್ತು. ಈಗ ಜೀರ್ಣೋದ್ಧಾರದ ಸಮಯದಲ್ಲಿ ಪಕ್ಕದ ಭೂಮಿ ವಶಪಡಿಸಿಕೊಂಡು ಅದು ೫ ಲಕ್ಷ ೨೭ ಸಾವಿರ ೩೦೦ ಅಡಿಗಳಷ್ಟು ಮಾಡಲಾಗಿದೆ. ಅದಕ್ಕಾಗಿ ಸಂಬಂಧಿತರಿಗೆ ೩೯೦ ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಈ ಧಾಮಕ್ಕಾಗಿ ಈಗ ನಾಲ್ಕು ಪ್ರವೇಶದ್ವಾರಗಳಿರುವುದು. ಪ್ರತಿಯೊಂದು ಪ್ರವೇಶದ್ವಾರ ೨೦ ಅಡಿಗಳಷ್ಟು ಎತ್ತರ ಇರುವುದು. ಮಂದಿರದಿಂದ ಗಂಗಾಘಾಟ್ ವರೆಗೆ ಹೋಗಲು ೨೦೦ ಮೀಟರಿನ ೪೦ ಅಡಿ ರಸ್ತೆ ಅಗಲ ಮಾಡಲಾಗಿದೆ. ಈ ದೇವಸ್ಥಾನದ ಜೊತೆಗೆ ಕಾಶಿಯಲ್ಲಿನ ಪಂಚಕ್ರೋಶದಲ್ಲಿನ ೧೦೮ ದೇವಸ್ಥಾನಗಳು ೪೪ ಧರ್ಮಶಾಲೆಗಳು ಮತ್ತು ಕಲ್ಯಾಣಿಗಳ ಜೀರ್ಣೋದ್ದಾರ ಮಾಡಲಾಗುತ್ತಿದೆ.