ಮುಖ್ಯ ಸ್ನಾನದ ದಿನ ಪ್ರಯಾಗರಾಜ್‌ಗೆ ಬರದಂತೆ ಸರಕಾರದಿಂದ ಗಣ್ಯರಿಗೆ ಮತ್ತು ಅತಿಗಣ್ಯರಲ್ಲಿ ಮನವಿ

ಭದ್ರತಾ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆ ಮಾಡಲು ನಿರ್ಣಯ

ಪ್ರಯಾಗರಾಜ – ಅಮೃತ ಸ್ನಾನದ ದಿನಗಳು ಸೇರಿದಂತೆ ಪ್ರಮುಖ ಸ್ನಾನದ ದಿನಗಳಲ್ಲಿ ಸಂಗಮ ಕ್ಷೇತ್ರಕ್ಕೆ ಮತ್ತು ಪ್ರಯಾಗರಾಜ ನಗರಕ್ಕೆ ಗಣ್ಯರು ಮತ್ತು ಅತಿಗಣ್ಯರು ಬರಬಾರದೆಂದು ಉತ್ತರ ಪ್ರದೇಶ ಸರಕಾರದ ಅನುಪಾಲನಾ ಸಮಿತಿ ಮನವಿ ಮಾಡಿದೆ. ಭದ್ರತಾ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆ ಮಾಡಲು ಸರಕಾರ ಈ ನಿರ್ಧಾರ ಕೈಗೊಂಡಿದೆ. 13, 14 ಮತ್ತು 29 ಜನವರಿ ಹಾಗೆಯೇ 3, 12 ಮತ್ತು 26 ಫೆಬ್ರವರಿ ಪ್ರಮುಖ ಸ್ನಾನದ ದಿನಗಳಾಗಿವೆ. ಆದ್ದರಿಂದ ಜನವರಿ 12 ರಿಂದ 15, ಜನವರಿ 26 ರಿಂದ 31, ಫೆಬ್ರವರಿ 2 ರಿಂದ 4, ಫೆಬ್ರವರಿ 11 ರಿಂದ 13 ಮತ್ತು ಫೆಬ್ರವರಿ 25 ರಿಂದ 27 ರ ಅವಧಿಯಲ್ಲಿ ಗಣ್ಯರು ಮತ್ತು ಅತಿಗಣ್ಯರು ಬರಬಾರದೆಂದು ಮನವಿ ಮಾಡಿದ್ದಾರೆ.