ಬಾಂಗ್ಲಾದೇಶದಲ್ಲಿ ಹಿಂದೂಗಳ ದೇವಸ್ಥಾನದಲ್ಲಿ ಕುರಾನ ಇಡಲು ಪ್ರಯತ್ನಿಸುತ್ತಿದ್ದ ಮತಾಂಧನ ಬಂಧನ

ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸುವ ಜಾತ್ಯಾತೀತರು ಮತ್ತು ಪ್ರಗತಿ(ಅಧೋಗತಿ)ಪರರು ಈ ವಿಷಯವಾಗಿ ಏನಾದರೂ ಹೇಳುವರೆ ?- ಸಂಪಾದಕರು

ಮಿಜಾನ

ಸಿಹಲಟ (ಬಾಂಗ್ಲಾದೇಶ) – ಇಲ್ಲಿಯ ಹಬಿಬಗಂಜನಲ್ಲಿ ಚೌಧರಿ ಮಾರುಟಕ್ಕೆಯಲ್ಲಿನ ಹಿಂದೂ ದೇವಸ್ಥಾನದಲ್ಲಿ ಕದ್ದುಮುಚ್ಚಿ ಕುರಾನ್ ಇಟ್ಟು ಹೋಗುವ ಪ್ರಯತ್ನಿಸುತ್ತಿದ್ದ ಮಿಜಾನ ಎಂಬ ಮತಾಂಧನಿಗೆ ಪೊಲೀಸರು ಬಂಧಿಸಿದ್ದಾರೆ. ದೇವಸ್ಥಾನದಲ್ಲಿ ಕುರಾನ್ ತೆಗೆದುಕೊಂಡು ಹೋಗುವ ಪ್ರಯತ್ನದ ಹಿನ್ನಲೆಯ ಕಾರಣ ಈವರೆಗೆ ಸ್ಪಷ್ಟವಾಗಿಲ್ಲ. ನವರಾತ್ರಿ ಉತ್ಸವದಲ್ಲಿ ಬಾಂಗ್ಲಾದೇಶದ ಕೋಮಿಲ್ಲಾದಲ್ಲಿ ಮತಾಂಧನು ಶ್ರೀ ಹನುಮಂತನ ಮೂರ್ತಿಯ ಕಾಲಿನ ಹತ್ತಿರ ಕುರಾನ್ ಇಟ್ಟಿದ್ದರಿಂದ ಗಲಬೆ ನಡೆದಿತ್ತು. ಅದೇ ರೀತಿ ಇಲ್ಲಿ ನಡೆಸುವ ಷಡ್ಯಂತ್ರ ಇರುವುದೇ ? ಎಂದು ಸ್ಪಷ್ಟವಾಗಿಲ್ಲ.