Sadhus Protest Maha Kumbh Mela 2025 : ಮಹಾಕುಂಭಮೇಳದಲ್ಲಿ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸದ ಕಾರಣ ಸಾಧುಗಳಿಂದ ಆಂದೋಲನ!

ಆಡಳಿತ ಅಧಿಕಾರಿಗಳು ಧರಣಿ ನಿರತ ಸಾಧುಗಳೊಂದಿಗೆ ಮಾತನಾಡುತ್ತಿರುವುದು

ಪ್ರಯಾಗರಾಜ್, ಜನವರಿ 8 (ಸುದ್ದಿ.) – ಮಹಾಕುಂಭ ಮೇಳದ ಸಂದರ್ಭದಲ್ಲಿ ಕೆಲವು ಸಾಧುಗಳು ಸೆಕ್ಟರ್ 19 ರ ಮೋರಿ ಮುಕ್ತಿ ಮಾರ್ಗದಲ್ಲಿ ಪ್ರತಿಭಟನೆ ನಡೆಸಿದರು. ಆಡಳಿತದಿಂದ ನೀರು, ವಿದ್ಯುತ್‌ನಂತಹ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಈ ಸಾಧುಗಳು ಹೇಳಿದರು.

ಆಡಳಿತಾತ್ಮಕ ಅಧಿಕಾರಿಗಳನ್ನು ಉತ್ತರಿಸಲು ಕೇಳುತ್ತಿರುವ ಪ್ರತಿಭಟನಾಕಾರ ಸಾಧುಗಳು

ಆಡಳಿತದಲ್ಲಿರುವ ಕೆಲವರು ಸೌಲಭ್ಯಗಳಿಗಾಗಿ ಹಣ ಕೇಳುತ್ತಿದ್ದಾರೆ ಎಂದು ಸಾಧುಗಳು ಪ್ರತಿಭಟನೆಯ ಸಂದರ್ಭದಲ್ಲಿ ಆರೋಪಿಸಿದರು. ಈ ವೇಳೆ ಬಂದ ಆಡಳಿತಾಧಿಕಾರಿಗಳ ಎದುರು ಸಾಧುಗಳು ಪ್ರತಿಭಟಿಸಿ ಅನಾನುಕೂಲಗಳಿಗೆ ಉತ್ತರ ನೀಡುವಂತೆ ತಿಳಿಸಿದರು.