ಫಿರೋಜಾಬಾದ್ (ಉತ್ತರ ಪ್ರದೇಶ) – ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ಕಳೆದ 30 ವರ್ಷಗಳಿಂದ ಮುಚ್ಚಲಾಗಿದ್ದ ಶಿವ ದೇವಾಲಯವೊಂದು ಪತ್ತೆಯಾಗಿದೆ. ದೇವಸ್ಥಾನದ ಮಾಹಿತಿ ತಿಳಿದ ತಕ್ಷಣ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಲ್ಲಿಗೆ ತೆರಳಿ ಸ್ವಚ್ಛಗೊಳಿಸಿದರು. ಜೊತೆಗೆ ಹನುಮಾನ್ ಚಾಲೀಸಾ ಪಠಿಸಿದರು. ಅದಕ್ಕೂ ಮುನ್ನ ಆಡಳಿತ ಮಂಡಳಿ ದೇವಸ್ಥಾನದ ಬೀಗ ತೆರೆದರು. ಈ ಅವಧಿಯಲ್ಲಿ ಯಾವುದೇ ವಿರೋಧವಿರಲಿಲ್ಲ. ಈ ಪ್ರದೇಶದಲ್ಲಿ ಹಿಂದೆ ಹಿಂದೂ ಕುಟುಂಬವೊಂದು ವಾಸವಾಗಿತ್ತು ಅವರೇ ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಅವರು ಸ್ಥಳಾಂತರಗೊಂಡಿದ್ದಾರೆ. ಸಿಟಿ ಮ್ಯಾಜಿಸ್ಟ್ರೇಟ್ ರಾಜೇಂದ್ರ ಸಿಂಗ್ ಪ್ರಕಾರ, ಈ ದೇವಾಲಯವು ಸುಮಾರು 60 ವರ್ಷಗಳಷ್ಟು ಹಳೆಯದು. ಇದನ್ನು 1963 ರಲ್ಲಿ ನಿರ್ಮಿಸಲಾಗಿತ್ತು’, ಎಂದು ಹೇಳಿದ್ದಾರೆ.
ಸ್ಥಳೀಯ ಹಿಂದೂಗಳು ದೇವಾಲಯವನ್ನು ತೆರೆಯುವುದನ್ನು ತಮ್ಮ ಧಾರ್ಮಿಕ ಹಕ್ಕುಗಳನ್ನು ಮರಳಿ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಈ ಸ್ಥಳದಲ್ಲಿ ಶೀಘ್ರದಲ್ಲಿಯೇ ವಿಗ್ರಹ ಸ್ಥಾಪಿಸಲಾಗುವುದು ಎಂದು ಹಿಂದೂ ಸಂಘಟನೆಯ ಸದಸ್ಯರು ಘೋಷಿಸಿದರು.