ಕಾಶಿಗೆ ಔರಂಗಜೇಬ್ ಬಂದರೆ, ಛತ್ರಪತಿ ಶಿವಾಜಿ ಮಹಾರಾಜರು ಏಳುವರು ! – ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾವಪೂರ್ಣ ವಾತಾವರಣದಲ್ಲಿ ಕಾಶಿ ವಿಶ್ವನಾಥ ಧಾಮದ ಲೋಕಾರ್ಪಣೆ

ಗಂಗಾನದಿಯಲ್ಲಿ ಸ್ನಾನ ಮಾಡಿ ಗಂಗಾಜಲ ತೆಗೆದುಕೊಂಡು ಕಾಶಿ ವಿಶ್ವನಾಥನ ಪೂಜೆ !

ಕಾಶಿಯ ಕೊತವಾಲ ಶ್ರೀ ಕಾಲಭೈರವನ ದರ್ಶನ ಪಡೆದರು !

ಪ್ರಧಾನ ಮಂತ್ರಿ ನರೇಂದ್ರ ಮೋದಿ

ವಾರಣಾಸಿ (ಉತ್ತರಪ್ರದೇಶ) – ಕಾಶಿಗೆ ಔರಂಗಜೇಬ್ ಬಂದರೇ, ಛತ್ರಪತಿ ಶಿವಾಜಿ ಮಹಾರಾಜರು ಏಳುವರು. ಸಾಲಾರ ಮಸೂದ್ ಬಂದರೆ, ರಾಜ ಸುಹೆಲದೇವರಂತಹ ವೀರ ಯೋಧರು ತಮ್ಮ ಏಕತೆಯ ಶಕ್ತಿಯನ್ನು ತೋರಿಸುತ್ತಾರೆ. ಬ್ರಿಟಿಷರ ಕಾಲದಲ್ಲಿಯೂ ಕಾಶಿಯ ಜನರು ವಾರೆನ್ ಹೇಸ್ಟಿಂಗ್ಸ್ ಇವರ ಸ್ಥಿತಿ ಹೇಗೆ ಮಾಡಿದರು, ಎಂದು ಕಾಶಿಯ ಜನರಿಗೆ ತಿಳಿದಿದೆ, ಎಂದು ಕಾಶಿ ವಿಶ್ವನಾಥ ಧಾಮ ಉದ್ಘಾಟನೆ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

(ಸೌಜನ್ಯ : Republic World)

ಲೋಕಾರ್ಪಣೆಯ ಸಮಯದಲ್ಲಿ ನೂರಾರು ಸಾಧುಗಳು, ಸಂತರು, ಮಹಂತರು, ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿಬೆನ್ ಪಟೇಲ್, ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಮತ್ತು ದಿನೇಶ ಶರ್ಮಾ ಮುಂತಾದವರು ಉಪಸ್ಥಿತರಿದ್ದರು. ಲೋಕಾರ್ಪಣೆ ಮಾಡುವಾಗ ಪ್ರಧಾನಿ ಮೋದಿ ಅವರು ಗಂಗಾನದಿಯಲ್ಲಿ ಸ್ನಾನ ಮಾಡಿ, ಗಂಗಾಜಲ ತೆಗೆದುಕೊಂಡು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕಾಶಿ ವಿಶ್ವನಾಥ ಧಾಮಕ್ಕೆ ಬರುವ ಮಾನ್ಯ ಪ್ರಧಾನಿ ಮೋದಿಯವರು ಇಲ್ಲಿನ ಶ್ರೀ ಕಾಲಭೈರವ ದೇಗುಲದಲ್ಲಿ ಪೂಜಾರ್ಚನೆ ಸಲ್ಲಿಸಿದರು. ಆಗ ಜನರು ಅವರ ಮೇಲೆ ಪುಷ್ಪವೃಷ್ಟಿ ಮಾಡಿದರು. ಅಲ್ಲಿಂದ ಪ್ರಧಾನಿ ನರೇಂದ್ರ ಮೋದಿಯವರು ಗಂಗಾನದಿಯಲ್ಲಿ ಅಲಕನಂದಾ ಈ ಕ್ರೂಜ್‌ನ ಮೂಲಕ ಕಾಶಿ ವಿಶ್ವನಾಥ ಧಾಮದಲ್ಲಿರುವ ಲಲಿತಾ ಘಾಟ್‌ಗೆ ತೆರಳಿದರು.

ಪ್ರಧಾನಿ ಮೋದಿ ಸಂಜೆ ದಶಾಶ್ವಮೇಧ ಘಾಟ್‌ನಲ್ಲಿ ನಡೆದ ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದರು. ಡಿಸೆಂಬರ ೧೪ ರಂದು ನಡೆಯಲಿರುವ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮೋದಿಯವರು ಹಾಜರಿದ್ದು, ಮಾರ್ಗದರ್ಶನ ನೀಡಲಿದ್ದಾರೆ.