‘ಶ್ರೀ ಶೈಲಂ ಭ್ರ್ರಮರಾಂಬಿಕ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ’ದ ಪರಿಸರದಲ್ಲಿ ಇತರ ಧರ್ಮದವರಿಗೆ ಅಂಗಡಿ ತೆರೆಯಲು ಸಾಧ್ಯವಿಲ್ಲ !

  • ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯದ ಆದೇಶ

  • ಉಚ್ಚ ನ್ಯಾಯಾಲಯದ ನಿರ್ಣಯವನ್ನು ತಕ್ಷಣವೇ ಜಾರಿಗೆ ತರಬೇಕು ! – ಹಿಂದುತ್ವನಿಷ್ಠ ಸಂಘಟನೆ

ಭಾಗ್ಯನಗರ – ಆಂಧ್ರಪ್ರದೇಶದ ಶ್ರೀಶೈಲಂ ಅಲ್ಲಿಯ ‘ಶ್ರೀಶೈಲ ಭ್ರ್ರಮರಾಂಬಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ’ದ ಪರಿಸರದಲ್ಲಿ ಅನ್ಯಧರ್ಮೀಯರ ಅಂಗಡಿ ಖಾಲಿ ಮಾಡಲು ಮತ್ತು ಇನ್ನು ಮುಂದೆ ನಡೆಯುವ ಸಾರ್ವಜನಿಕ ಹರಾಜಿನಲ್ಲಿ ಈ ಸ್ಥಳ ಬೇರೆ ಧರ್ಮಿಯರಿಗೆ ನೀಡಬಾರದು, ಎಂದು ಆಂಧ್ರಪ್ರದೇಶದ ನ್ಯಾಯಾಲಯವು ಇತ್ತೀಚೆಗೆ ಸ್ಪಷ್ಟ ನಿರ್ಣಯ ನೀಡಿದೆ. ಈ ದೇವಸ್ಥಾನದ ಪರಿಸರದಲ್ಲಿ ಇತರ ಧರ್ಮೀಯರ ೧೭೬ ಅಂಗಡಿಗಳಿಗೆ ‘ಲಲಿತಾಂಬಿಕಾ ಕಾಂಪ್ಲೆಕ್ಸ್’ನಲ್ಲಿ ಜಾಗ ನೀಡಬೇಕು, ಎಂದು ಸಹ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಈ ಆದೇಶವನ್ನು ಶೀಘ್ರವಾಗಿ ಜಾರಿ ಮಾಡಬೇಕು, ಎಂದು ಆಗ್ರಹಿಸಿ ‘ಹೈಂದವ ಸಂಘಾಲ ಐಕ್ಯ ವೇದಿಕೆ’ಯು (‘ಸಂಯುಕ್ತ ಕೃತಿ ಸಮಿತಿ’ಯು) ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಸಹಭಾಗಿಯಾಗಿತ್ತು.


ಈ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚೇತನ ಗಾಡಿ ಮಾತನಾಡುತ್ತಾ, ಶ್ರೀಶೈಲಂ ಇದು ತೀರ್ಥಕ್ಷೇತ್ರ ೧೮ ಶಕ್ತಿಪೀಠಗಳಲ್ಲಿ ಒಂದಾಗಿದೆ ಮತ್ತು ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇಷ್ಟು ಪವಿತ್ರ ತೀರ್ಥಕ್ಷೇತ್ರದಲ್ಲಿ ಇತರ ಧರ್ಮದವರ ಪ್ರಭಾವ ಇರುವುದು, ಇದು ಅತ್ಯಂತ ಖೇದಕರ ವಿಷಯವಾಗಿದೆ. ಇತರ ಧರ್ಮೀಯರು ೨೦೧೫ ಮತ್ತು ೨೦೧೭ ರಲ್ಲಿ ಈ ರೀತಿಯ ನಿರ್ಣಯದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಎರಡು ಪ್ರಕರಣಗಳನ್ನು ರದ್ದು ಪಡಿಸುತ್ತಾ ಉಚ್ಚ ನ್ಯಾಯಾಲಯವು ಈ ಮೇಲಿನ ಆದೇಶ ನೀಡಿದೆ. ನ್ಯಾಯಾಲಯವು ಇಷ್ಟು ಸ್ಪಷ್ಟ ಆದೇಶ ನೀಡಿದ್ದರೂ ದೇವಸ್ಥಾನದ ಕಾರ್ಯಕಾರಿ ಅಧಿಕಾರಿಗಳು ಈ ಆದೇಶದ ಪಾಲನೆ ಏಕೆ ಮಾಡಿಲ್ಲ ? ಇದು ನ್ಯಾಯಾಲಯದ ಅಪಮಾನವಲ್ಲವೇ? ಆದ್ದರಿಂದ ಈಗಲಾದರೂ ನ್ಯಾಯಾಲಯದ ಆದೇಶದ ಪಾಲನೆಯಾಗಬೇಕೆಂದು ಈ ಸಮಯದಲ್ಲಿ ಆಗ್ರಹಿಸಲಾಯಿತು.

ಈ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಸಹಿತ ಹಿಂದೂ ದೇವಸ್ಥಾನ ಪರಿರಕ್ಷಣಾ ಸಮಿತಿ, ರಾಷ್ಟ್ರೀಯ ಶಿವಾಜಿ ಸೇನೆ, ಹಿಂದೂ ಜನಶಕ್ತಿ, ಹರೇ ರಾಮ ಹರೇ ಕೃಷ್ಣ ಫೌಂಡೇಶನ್ ಮತ್ತು ಋಷಿ ಜೀವನ ಸಮಾಜ ಈ ಸಂಘಟನೆಗಳು ಸಹಭಾಗಿಯಾಗಿದ್ದವು.