ಕುಂಭಮೇಳದ ಸ್ಥಳಗಳಲ್ಲಿ ಗುಟ್ಖಾ, ತಂಬಾಕು ಮತ್ತು ಬೀಡಿ ಅಂಗಡಿಗಳು !

ಕುಂಭಮೇಳ ಪ್ರದೇಶದಲ್ಲಿ ಹಚ್ಚಲಾದ ಮಳಿಗೆಗಳು

ಪ್ರಯಾಗರಾಜ್, ಜನವರಿ 8 (ಸುದ್ದಿ.) – ಕುಂಭಮೇಳದಂತಹ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಧ್ಯಾತ್ಮಿಕ ವಿಷಯದ ಧಾರ್ಮಿಕ ಪುಸ್ತಕಗಳು, ಪೂಜಾ ಸಾಹಿತ್ಯದ ಅಂಗಡಿಗಳು ದೊಡ್ಡ ಪ್ರಮಾಣದಲ್ಲಿ ಇರುತ್ತವೆ; ಆದರೆ, ಈ ಅಂಗಡಿಗಳನ್ನು ಹಾಕುವ ಮೊದಲೇ ಕುಂಭಮೇಳದಲ್ಲಿ ಗುಟ್ಕಾ, ತಂಬಾಕು-ಬೀಡಿ ಮಾರಾಟದ ನೂರಾರು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಈ ಮಳಿಗೆಗಳಲ್ಲಿ ಹಂತ ಹಂತವಾಗಿ ಜನ ದಟ್ಟಣೆ ಆಗುತ್ತಿದೆ. ಕುಂಭಮೇಳದ ಸ್ಥಳಗಳಲ್ಲಿ ಪ್ರಾರಂಭವಾಗಿರುವ ಆಡಳಿತಾತ್ಮಕ ಕಾಮಗಾರಿಗಳ ಗುತ್ತಿಗೆಗಳನ್ನು ವಿವಿಧ ಗುತ್ತಿಗೆದಾರರಿಗೆ ನೀಡಲಾಗಿದೆ. ಈ ಕೆಲಸಗಳನ್ನು ಮಾಡುವುದಕ್ಕಾಗಿ ಕುಂಭಮೇಳದ ಸ್ಥಳಗಳಲ್ಲಿ ಸಾವಿರಾರು ಕಾರ್ಮಿಕರನ್ನು ನೇಮಿಸಲಾಗಿದೆ. ಈ ಕಾರ್ಮಿಕರ ಹೆಚ್ಚಿನ ಸಂಚಾರ ಕಾಮಗಾರಿ ಸ್ಥಳಗಳಲ್ಲಿ ಮಳಿಗೆಗಳು ಕಂಡುಬರುತ್ತಿದೆ.