ಭಾರತೀಯ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದೇ ಕಾಲ್ಕಿತ್ತ ಜಸ್ಟಿನ್ ಟ್ರುಡೊ !
ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊರವರು ಇಲ್ಲಿ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಸಹಭಾಗಿಯಾಗಲು ಬಂದಿದ್ದಾರೆ. ಈ ಸಮಯದಲ್ಲಿ ಭಾರತೀಯ ವಾರ್ತಾಸಂಸ್ಥೆ `ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ’ದ ಪತ್ರಕರ್ತರು ಟ್ರುಡೊರವರಿಗೆ ಭಾರತದ ಮೇಲೆ ಅವರು ಮಾಡಿರುವ ಆರೋಪವನ್ನು ಭಾರತವು ತಿರಸ್ಕರಿಸಿರುವ ಬಗ್ಗೆ ಪ್ರಶ್ನಿಸಿದರು.