ಮಹಾಕುಂಭಮೇಳದಲ್ಲಿ ಇಲ್ಲಿಯವರೆಗೆ 10 ಸಾವಿರ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ !

ಪ್ರಯಾಗರಾಜ್ – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆದೇಶದಂತೆ, ಇಲ್ಲಿಯ ಮಹಾಕುಂಭಮೇಳದಲ್ಲಿ ಪ್ರತಿಯೊಂದು ಸ್ಥಳಗಳಲ್ಲಿಯೂ ಭಕ್ತರಿಗೆ ಆರೋಗ್ಯ ಚಿಕಿತ್ಸೆ ಸಿಗುತ್ತಿದೆ. ಮಹಾಕುಂಭಮೇಳದಲ್ಲಿ ಇದುವರೆಗೆ 10 ಸಾವಿರ ಭಕ್ತರು ಇದರ ಪ್ರಯೋಜನ ಪಡೆದಿದ್ದಾರೆ. ಕೇಂದ್ರೀಯ ಆಸ್ಪತ್ರೆಯ ಜೊತೆಗೆ ಅರೈಲ್‌ನ ಕೇಂದ್ರೀಯ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗಳ ಒಪಿಡಿ ವಿಭಾಗ ಪ್ರಾರಂಭವಾಗಿದೆ. ಕೇಂದ್ರೀಯ ಆಸ್ಪತ್ರೆಯಲ್ಲಿನ ತಜ್ಞ ಆಧುನಿಕ ವೈದ್ಯರನ್ನು ವಿವಿಧೆಡೆ ಸ್ಥಾಪಿಸಿರುವ ಬೇರೆ ಬೇರೆ ಆಸ್ಪತ್ರೆಗಳಲ್ಲಿ ನೇಮಿಸಲಾಗಿದೆ. ಹಾಗಾಗಿ ಭಕ್ತರಿಗೆ ವಿಶೇಷ ಚಿಕಿತ್ಸೆ ಸಿಗುತ್ತಿದೆ. ಮಹಾಕುಂಭಮೇಳದ ಕೇಂದ್ರೀಯ ಆಸ್ಪತ್ರೆಗಳಲ್ಲಿ ಆಧುನಿಕ ವೈದ್ಯರು ಅತ್ಯಂತ ಉತ್ಸಾಹದಿಂದ ರೋಗಿಗಳ ಆರೈಕೆ ಮಾಡುತ್ತಿದ್ದಾರೆ.

ಮಹಾ ಕುಂಭಮೇಳದಲ್ಲಿ ನೋಡಲ್ ವೈದ್ಯಕೀಯ ಸ್ಥಾಪನೆ !

ಆಧುನಿಕ ವೈದ್ಯ ಗೌರವ್ ದುಬೆ ಮಾತನಾಡಿ, ಮುಖ್ಯಮಂತ್ರಿಗಳ ಆದೇಶದಂತೆ ಮಹಾಕುಂಭಕ್ಷೇತ್ರದಲ್ಲಿ ಭಕ್ತರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸೆಕ್ಟರ್ 24ರಲ್ಲಿ ಉಪಕೇಂದ್ರೀಯ ಆಸ್ಪತ್ರೆಯನ್ನು ತೆರೆಯಲಾಗಿದ್ದು ಅಲ್ಲಿ ಪೂರ್ಣ ಪ್ರಮಾಣದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’, ಎಂದು ಹೇಳಿದ್ದಾರೆ.