* ಭೂಮಿಯು ಸರಕಾರದ ನಿಯಂತ್ರಣದಲ್ಲಿರಲಿದೆ* ಭೂಮಿಯ ಅತಿಕ್ರಮಣ ಮತ್ತು ಅವುಗಳ ಮಾರಾಟವನ್ನು ತಡೆಯುವ ಪ್ರಯತ್ನವೆಂದು ಸರಕಾರದ ಹೇಳಿಕೆ* ಅರ್ಚಕರ ಸಂಘಟನೆಯಿಂದ ವಿರೋಧ |
* ದೇಶದಲ್ಲಿ, ಹಾಗೆಯೇ ಬಿಹಾರ ರಾಜ್ಯದಲ್ಲಿ ವಕ್ಫ್ ಬೋರ್ಡನ ಬಳಿ ಸಾವಿರಾರು ಎಕರೆ ಭೂಮಿಯಿದ್ದು ಅವುಗಳ ಮೇಲೆಯೂ ಅತಿಕ್ರಮಣವಾಗಿದೆ. ಹೀಗಿರುವಾಗ ಆ ಭೂಮಿಯನ್ನು ಸರಕಾರವು ಸಾರ್ವಜನಿಕ ಆಸ್ತಿ ಎಂದು ಘೋಷಿಸುವ ಧೈರ್ಯವನ್ನು ಏಕೆ ತೋರಿಸುತ್ತಿಲ್ಲ ಅಥವಾ ಹಿಂದೂಗಳ ಮಠ ಮತ್ತು ದೇವಸ್ಥಾನಗಳ ಭೂಮಿಯ ಮೇಲೆ ಮಾತ್ರ ಕಣ್ಣಿದೆಯೇ ? * ಬಿಹಾರದಲ್ಲಿ ಸಂಯುಕ್ತ ಜನತಾ ದಳ ಮತ್ತು ಭಾಜಪದ ಸಮ್ಮಿಶ್ರ ಸರಕಾರವಿರುವಾಗ ಹಿಂದೂಗಳ ದೇವಸ್ಥಾನಗಳ ಭೂಮಿಯನ್ನು ಈ ರೀತಿಯಲ್ಲಿ ಸರಕಾರವು ಕಬಳಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! * ಉತ್ತರಾಖಂಡ ಸರಕಾರವು ದೇವಸ್ಥಾನಗಳ ಅರ್ಚಕರ ವಿರೋಧದಿಂದಾಗಿ ಚಾರಧಾಮದೊಂದಿಗೆ ೫೧ ದೇವಸ್ಥಾನಗಳ ಸರಕಾರೀಕರಣವನ್ನು ರದ್ದುಗೊಳಿಸಿತು. ಇದನ್ನು ನೋಡಿ ಬಿಹಾರ ಸರಕಾರವು ಈ ನಿರ್ಣಯವನ್ನು ಹಾಗೆಯೇ ಸಾರ್ವಜನಿಕ ದೇವಸ್ಥಾನಗಳ ಮೇಲೆ ಹೊರಿಸಲಾಗುವ ಶೇ. ೪ ರಷ್ಟು ತೆರಿಗೆ ನಿಯಮವನ್ನೂ ರದ್ದುಗೊಳಿಸಬೇಕಿದೆ ! * ಭೂಮಿಯು ಸರಕಾರದ ಹತೋಟಿಗೆ ಬಂದ ನಂತರ ಅದರ ಮೇಲೆ ಅತಿಕ್ರಮಣವಾಗುವುದಿಲ್ಲ ಹಾಗೆಯೇ ಅದರ ಮಾರಾಟವಾಗುವುದಿಲ್ಲ ಎಂಬುದರ ಖಾತ್ರಿಯನ್ನು ನೀಡುವುದೇ ? ಮಹಾರಾಷ್ಟ್ರದಲ್ಲಿ ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಹಿಡಿತದಲ್ಲಿ ದೇವಸ್ಥಾನಗಳು ಮತ್ತು ಅವುಗಳ ಭೂಮಿಯಿರುವಾಗಲೂ ಅವುಗಳ ಮೇಲೆ ಅತಿಕ್ರಮಣವಾಯಿತು. ಹಾಗೆಯೇ ಅವುಗಳ ಮಾರಾಟವಾಯಿತು. ಇದೊಂದು ಜೀವಂತ ಉದಾಹರಣೆಯಾಗಿದ್ದು, ಇದನ್ನು ಬಿಹಾರದ ಸರಕಾರವು ಗಮನಕ್ಕೆ ತೆಗೆದುಕೊಳ್ಳುವುದೇ ? * ಅತಿಕ್ರಮಣ ಮಾಡುವವರ ಮೇಲೆ ಕಾರ್ಯಾಚರಣೆ ಮಾಡುವುದರ ಬಗ್ಗೆ ಸರಕಾರವು ಚಕಾರವೆತ್ತುತ್ತಿಲ್ಲ ಎಂಬುದನ್ನು ಗಮನದಲ್ಲಿಡಿ ! ಅತಿಕ್ರಮಣ ಮಾಡುವವರ ಮೇಲೆ ಕಾರ್ಯಾಚರಣೆಯನ್ನು ಮಾಡದೆ ಅತಿಕ್ರಮಣವಾದ ಭೂಮಿಯನ್ನೇ ವಶಪಡಿಸಿಕೊಳ್ಳುವುದು ಎಂದರೆ ಒಂದು ರೀತಿಯಲ್ಲಿ ಇದು ಸರಕಾರದ ಬೆಂಬಲವಿರುವ ಅತಿಕ್ರಮಣವಲ್ಲವೇ ? ಬಿಹಾರ ಸರಕಾರದ ಈ ಹೆಜ್ಜೆಯು ‘ರೋಗಕ್ಕಿಂತಲೂ ಉಪಚಾರ ಭಯಂಕರ’ ಎಂಬಂತೆ ಇದೆ ! |
ಪಾಟಲಿಪುತ್ರ (ಬಿಹಾರ) – ಇತ್ತೀಚೆಗೆ ಬಿಹಾರದ ಸರಕಾರವು ‘ಬಿಹಾರ ರಾಜ್ಯ ಧಾರ್ಮಿಕ ನ್ಯಾಸ ಮಂಡಳಿ’ಯ ಬಳಿ ನೊಂದಣಿಯಾದ ಅಥವಾ ಅದರಲ್ಲಿ ಸೇರಿರುವ ಮಠ ಮತ್ತು ಮಂದಿರಗಳ ೩೦ ಸಾವಿರ ಎಕರೆ ಭೂಮಿಯನ್ನು ‘ಸಾರ್ವಜನಿಕ ಆಸ್ತಿ’ ಎಂದು ಘೋಷಿಸುವ ನಿರ್ಣಯ ತೆಗೆದುಕೊಂಡಿದೆ. ಈ ನಿರ್ಣಯವನ್ನು ಹಿಂಪಡೆಯದಿದ್ದರೆ ರಸ್ತೆಗಿಳಿದು ಪ್ರತಿಭಟನೆ ಮಾಡುವುದಾಗಿ ಅರ್ಚಕರ ಸಂಘಟನೆಯು ಎಚ್ಚರಿಕೆ ನೀಡಿದೆ. ಸದ್ಯ ರಾಜ್ಯದ ಸಾವಿರಾರು ಮಠ ಮತ್ತು ದೇವಸ್ಥಾನಗಳ ಪೈಕಿ ೪ ಸಾವಿರದ ೨೦೦ ದೇವಸ್ಥಾನಗಳು ರಾಜ್ಯದ ‘ಧಾರ್ಮಿಕ ನ್ಯಾಸ ಮಂಡಳಿ’ಯ ಬಳಿ ನೋಂದಣಿಯಾಗಿರುವುದು ಕಂಡುಬರುತ್ತದೆ.
ರಾಜ್ಯದ ಕಾನೂನು ಸಚಿವರಾದ ಪ್ರಮೋದ ಕುಮಾರರವರು ಹೀಗೆ ಹೇಳಿದ್ದಾರೆ
೧. ಈ ಭೂಮಿಯ ಮೇಲಾಗುವ ಅತಿಕ್ರಮಣ ಮತ್ತು ಅವುಗಳ ಮಾರಾಟವನ್ನು ತಡೆಯಲು ಈ ಕ್ರಮವನ್ನು ಕೈಗೊಳ್ಳಲಾಗಿದೆ. ‘ಧಾರ್ಮಿಕ ನ್ಯಾಸ ಮಂಡಳಿ’ಗೆ ೩೬ ಜಿಲ್ಲೆಗಳಲ್ಲಿನ ಮಠ ಮತ್ತು ದೇವಸ್ಥಾನಗಳ ಬಳಿ ೩೦ ಸಾವಿರ ಎಕರೆಗಿಂತಲೂ ಹೆಚ್ಚಿನ ಭೂಮಿಯಿದೆ ಎಂಬ ಮಾಹಿತಿ ದೊರೆತಿದೆ. ಈ ಭೂಮಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣವಾಗಿದೆ. ಕೆಲವು ಪ್ರಕರಣಗಳಲ್ಲಿ ಮಠ ಮತ್ತು ದೇವಸ್ಥಾನಗಳ ಭೂಮಿಯನ್ನು ಈಗಾಗಲೇ ಮಾರಲಾಗಿದೆ.
೨. ಮುಗ್ಧ ಖರೀದಿದಾರರನ್ನು ಮೋಸಗೊಳಿಸಿದ ಅನೇಕ ಪ್ರಕರಣಗಳಿವೆ, ಅವರಿಗೆ ಮಠ ಮತ್ತು ದೇವಸ್ಥಾನಗಳ ಭೂಮಿಯನ್ನು ಯಾವುದೇ ವ್ಯಕ್ತಿಗೆ ಮಾರಲು ಸಾಧ್ಯವಿಲ್ಲ ಎಂಬುದು ತಿಳಿದಿಲ್ಲ. ಖರೀದಿದಾರರಿಗೆ ಈ ಬಗ್ಗೆ ತಿಳಿಯುವವರೆಗೆ ಮಾರಾಟಗಾರರು ಪರಾರಿಯಾಗಿರುತ್ತಾರೆ. ಆದುದರಿಂದಲೇ ನಾವು ಮಠ ಮತ್ತು ದೇವಸ್ಥಾನಗಳ ಭೂಮಿಯು ದೇವರ ಮಾಲಿಕತ್ವದಲ್ಲಿದ್ದು ಅವುಗಳನ್ನು ಸಾರ್ವಜನಿಕ ಭೂಮಿ ಎಂದು ಘೋಷಿಸಬೇಕು ಎಂಬುದನ್ನು ಸ್ಪಷ್ಟ ಪಡಿಸಿದ್ದೇವೆ. ಇಂತಹ ಭೂಮಿಯ ಖರೀದಿ-ಮಾರಾಟದ ವ್ಯವಹಾರವು ಕಾನೂನುಬಾಹಿರವಾಗಿದೆ. ಇದರೊಂದಿಗೆ ಇತರ ಎಲ್ಲ ಮಠ ಮತ್ತು ದೇವಸ್ಥಾನಗಳನ್ನು ‘ಧಾರ್ಮಿಕ ನ್ಯಾಸ ಮಂಡಳಿ’ಯ ಕಕ್ಷೆಗೆ ತರುವ ಪ್ರಯತ್ನವಿದೆ.
ಮಠ ಮತ್ತು ದೇವಸ್ಥಾನಗಳ ಭೂಮಿಯ ವ್ಯವಸ್ಥಾಪನೆಯ ಜವಾಬ್ದಾರಿಯನ್ನು ಅರ್ಚಕರಿಗೆ ನೀಡಿ ! – ಅರ್ಚಕರ ಸಂಘಟನೆಯ ಬೇಡಿಕೆ
ಅರ್ಚಕರ ಸಂಘಟನೆಯು ದೇವಸ್ಥಾನಗಳ ಭೂಮಿಯ ಮೇಲಿನ ಸರಕಾರದ ನಿಯಂತ್ರಣ ನಮಗೆ ಒಪ್ಪಿಗೆ ಇಲ್ಲ. ಮಠ ಮತ್ತು ದೇವಸ್ಥಾನಗಳ ಭೂಮಿಯನ್ನು ‘ಸಾರ್ವಜನಿಕ ಭೂಮಿ’ಯೆಂದು ಘೋಷಿಸುವ ನಿರ್ಣಯ ಯೋಗ್ಯವಲ್ಲ. ಅವುಗಳ ವ್ಯವಸ್ಥಾಪನೆಯನ್ನು ದೇವಸ್ಥಾನಗಳ ಅರ್ಚಕರ ಬಳಿ ನೀಡಬೇಕು.