Maulana Shahabuddin Statement VHP Filed Complaint : ವಿ.ಹಿಂ.ಪ. ನಿಂದ ಮೌಲಾನಾ ಶಹಾಬುದ್ದೀನ್ ವಿರುದ್ಧ ದೂರು ದಾಖಲು !

ಮಹಾಕುಂಭ ಭೂಮಿ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದು ಹೇಳಿಕೆ ನೀಡಿದ ಪ್ರಕರಣ

ಮೌಲಾನಾ ಶಹಾಬುದ್ದೀನ್ ಮತ್ತು ವಿಶ್ವ  ಹಿಂದೂ ಪರಿಷತ್ (ವಿಎಚ್‌ಪಿ) ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್

ಪ್ರಯಾಗರಾಜ್ – ಮಹಾಕುಂಭ ಭೂಮಿ ವಕ್ಫ್ ಮಂಡಳಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ ಮೌಲಾನಾ ಶಹಾಬುದ್ದೀನ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಇಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಧಾರ್ಮಿಕ ವೈಷಮ್ಯ ಸೃಷ್ಟಿಸಿರುವ ಮೌಲಾನಾ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ನ ಕಾನೂನು ವಿಭಾಗದ ಸಂಯೋಜಕ ಮತ್ತು ಅಲಹಾಬಾದ್ ಹೈಕೋರ್ಟ್‌ನ ವಕೀಲ ಅರವಿಂದ ಕುಮಾರ ಭಾರದ್ವಾಜ್ ಅವರು ಈ ದೂರು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಸರ್ವಶ್ರೀ ಬ್ರಿಜೇಶ್ ಓಂ ಪ್ರಕಾಶ್ ಸಿಂಗ್, ಅಖಿಲೇಶ್ ಶುಕ್ಲಾ, ವಿನಯ ಪಾಂಡೆ, ಪ್ರತಾಪ ಸಿಂಗ್, ಜಯರಾಜ ಸಿಂಗ ತೋಮರ್, ಅಮರೇಶ್ ತಿವಾರಿ, ವೀರೇಂದ್ರ ಸಿಂಗ್ ರಾಜಭರ್, ಶಿವ ಗೋಪಾಲ ಸಿಂಗ್, ರಾಮ ಆಧಾರ್, ಜಿತೇಂದ್ರ ಪಾಲ್ ಸಿಂಗ್ ಜಾದೌನ್, ಡಿ. ತ್ರಿಪಾಠಿ, ರಾಜನ್ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.

ದೂರಿನಲ್ಲಿ, ಅನಾದಿ ಕಾಲದಿಂದಲೂ ಪ್ರಯಾಗರಾಜ್‌ನ ಪವಿತ್ರ ಮೈದಾನದಲ್ಲಿ ಕುಂಭಮೇಳ ನಡೆಯುತ್ತಿದೆ. ಚಂದ್ರಗುಪ್ತ ಮೌರ್ಯನ ಆಳ್ವಿಕೆಯಲ್ಲಿ ಕೆಲವು ವಿದೇಶಿ ಪ್ರವಾಸಿಗರು ತಮ್ಮ ಪುಸ್ತಕಗಳಲ್ಲಿ ಕುಂಭಮೇಳವನ್ನು ಪ್ರಯಾಗರಾಜ್‌ನಲ್ಲಿ ನಡೆಸಿದ್ದರು ಎಂದು ಉಲ್ಲೇಖಿಸಿದ್ದಾರೆ. ಹೀಗಿರುವಾಗ ಮೌಲಾನಾ ಹೇಳಿಕೆ ಸಮಾಜದಲ್ಲಿ ಧಾರ್ಮಿಕ ವೈಷಮ್ಯ ಉಂಟು ಮಾಡುತ್ತಿದೆ. ಅವರ ಈ ಸುಳ್ಳು ಹೇಳಿಕೆ ಹಿಂದೂ ಧರ್ಮಕ್ಕೆ ಕಳಂಕ ತರುವ ಪ್ರಯತ್ನವಾಗಿದೆ, ಎಂದು ಹೇಳಿದೆ.